ಸಿಂದಗಿ: ತಂದೆಯವರಾದ ಮಾಜಿ ಸಚಿವ ದಿ, ಎಂ,ಸಿ,ಮನಗೂಳಿ ಅವರ ದಾರಿಯಲ್ಲಿ ನಡೆದು ಉಪಚುನಾವಣೆಯಲ್ಲಿ ಸೋತರೂ ಕೂಡಾ ಎದೆಗುಂದದೆ ತಾಲೂಕಿನ ಸಮಗ್ರ ಅಭಿವೃದ್ದಿಯ ಸಂಕಲ್ಪವನ್ನು ಇಟ್ಟುಕೊಂಡು ಪಕ್ಷ ಸಂಘಟನೆ ಮಾಡಿ ಕೇವಲ ಒಂದು ಗ್ರಾಮ ಪಂಚಾಯತಿಯ ಸದಸ್ಯರಾಗದೆ ನೇರವಾಗಿ ಸಿಂದಗಿಯ ಶಾಸಕರಾಗಿ ಆಯ್ಕೆಯಾಗಿ ಜನಸೇವೆಯೇ ಜನಾರ್ಧನ ಸೇವೆ ಎಂದು ಅಭಿವೃದ್ದಿಯತ್ತ ಧಾಪುಗಾಲು ಹಾಕುತ್ತಿರುವ ಶಾಸಕ ಅಶೋಕ ಮನಗೂಳಿ ಮುಂಬರುವ ದಿನಗಳಲ್ಲಿ ಸಚಿವರಾಗಿ ಹೊರಹೊಮ್ಮಲಿ ಎಂದು ಕಾಂಗ್ರೆಸ್ ಮುಖಂಡ ಸಲೀಮ್ ಕಣ್ಣಿ ಹೇಳಿದರು.
ಶಾಸಕ ಅಶೋಕ್ ಮನಗೂಳಿ ಅವರ ೫೫ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟಬುಕ್ ಪೆನ್ ವಿತರಿಸಿ ಅವರು ಮಾತನಾಡಿದರು.
ತಮ್ಮ ಇಡೀ ಜೀವನವನ್ನೆ ರಾಜಕೀಯಕ್ಕೆ ಮುಡುಪಾಗಿಟ್ಟಿದ್ದ ದಿ,ಎಂ,ಸಿ,ಮನಗೂಳಿ ಅವರು ರೈತರ ಪಾಲಿಗೆ ಆಶಾ ಕಿರಣರಾಗಿ ನಿಂತು ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯ ಮುಖಾಂತರ ನೀರು ಹರಿಸಿ ರೈತರ ಪಾಲಿಗೆ ಮತ್ತು ಸಿಂದಗಿ ಪಟ್ಟಣದ ಜನತೆಯ ಪಾಲಿಗೆ ನೀರಾವರಿ ಹರಿಕಾರ ಎಂಬ ಬಿರುದನ್ನು ಪಡೆದು ಅಸು ನೀಗಿದ್ದಾರೆ. ಅವರು ಮರೆಯಾದರೂ ಅವರ ಹೇಸರು ಅಜರಾಮರ. ಅವರ ಆದರ್ಶ ನಿಷ್ಠೆ ಪ್ರಾಮಾಣಿಕತೆ ಮೈಗೂಡಿಸಿಕೊಂಡು ರಾಜಕೀಯ ಜೀವನಕ್ಕೆ ಹೆಜ್ಜೆ ಇಟ್ಟು ತಂದೆಯವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತ ತಾವು ಶಾಸಕರಾದ ಕೂಡಲೇ ನನ್ನ ನಡೆ ಅಭಿವೃದ್ದಿಯ ಕಡೆ ಎನ್ನುವ ಗುರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಹೇಳಿ ಸರಕಾರಿ ಆರೋಗ್ಯ ಕೇಂದ್ರಗಳ ಮತ್ತು ಶಿಕ್ಷಣ ಸಂಸ್ಥೆಗಳು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಸಿಂಪಿರ್ ಆಳಂದ, ಸುನಂದ ಯಂಪೂರೆ, ರಜತ್ ತಾಂಬೆ, ಜೋತಿ ಗುಡಿಮನಿ, ಶರಣಮ್ಮ ನಾಯಕ್, ಸೇರಿದಂತೆ ಕಾರ್ಯಕರ್ತರು, ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ವಿಧ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

