ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಸರ್ಕಾರ ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಅವರಿಗೆ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ರಾಜ್ಯದ ೧೦೫ ವಿಧಾನಸಭಾ ಮತಕ್ಷೇತ್ರದಲ್ಲಿ ಮುಲ್ಲಾ ಸಮುದಾಯ ಬಾಂಧವರು ಇದ್ದಾರೆ. ಪ್ರತಿ ಕ್ಷೇತ್ರದಲ್ಲಿ ೫ ಸಾವಿರದಿಂದ ೮ ಸಾವಿರ ಮತದಾರರಿದ್ದಾರೆ. ರಾಜ್ಯ ಮುಸ್ಲಿಂ ಸಮುದಾಯದಲ್ಲಿ ೧೩ ಲಕ್ಷಕ್ಕಿಂತ ಹೆಚ್ಚು ಮುಲ್ಲಾ ಸಮುದಾಯವಿದೆ. ಮುಲ್ಲಾ ಎಂಬ ವ್ಯಕ್ತಿಯು ಇತಿಹಾಸ ಪರಂಪರೆಯಲ್ಲಿ ಪ್ರಮುಖ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವುದನ್ನು ನೋಡುತ್ತೇವೆ. ಇಂದು ಈ ಹಕ್ಕನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗಿರುವುದು ವಿಷಾದಕರ ಸಂಗತಿ. ಮುಲ್ಲಾ ಸಮುದಾಯ ಬಾಂಧವರು ಬೇರೆ ಸಮುದಾಯ ಬಾಂಧವರೊಂದಿಗೆ ಸೌಹಾರ್ದತೆಯಿಂದ ಇದ್ದಾರೆ. ನಮ್ಮ ಸಮುದಾಯವು ಕಡುಬಡತನದಿಂದ ಹಿಂದುಳಿದಿದೆ. ಪ್ರತಿ ವರ್ಷ ನಡೆಯುವ ಮೊಹರಂ ಹಬ್ಬದಲ್ಲಿ ಮುಲ್ಲಾ ಸಮುದಾಯ ಬಾಂಧವರು ಸೇವೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಿಂದೆ ನಮ್ಮ ಸಮುದಾಯವರಿಗೆ ಇನಾಮಿ ಜಮೀನು ನೀಡಿ ಗೌರವಿಸಲಾಗುತ್ತಿತ್ತು. ಇಂದು ಇನಾಮಿ ನೀಡಿರುವ ಜಮೀನು ಮರುಪಡೆದು ವಕ್ಪ ಆಸ್ತಿಯೆಂದು ಘೋಷಣೆ ಮಾಡುತ್ತಿರುವದು ಸರಿಯಲ್ಲ. ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡದೇ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಲಾಗಿದೆ.
ಗ್ರಾಮ, ನಗರಗಳಲ್ಲಿ ಪ್ರತಿ ವರ್ಷ ನಡೆಯುವ ಮೊಹರಂ ಹಬ್ಬಕ್ಕೆ ಸರ್ಕಾರವು ಸಹಾಯಧನ ನೀಡಬೇಕು. ಮೊಹರಂ ಹಬ್ಬದ ರೂವಾರಿಗಳು, ದರ್ಗಾದ ಮುತವಲ್ಲಿ ಅವರಿಗೆ ಮಾಸಿಕ ಪಿಂಚಣಿ ನೀಡಬೇಕು. ಬೇರೆ ರಾಜ್ಯಯಲ್ಲಿ ಜಾರಿಯಲ್ಲಿರುವಂತೆ ನಮ್ಮ ರಾಜ್ಯದಲ್ಲಿಯೂ ಮುಲ್ಲಾ ಸಮುದಾಯವನ್ನು ಕೆಟಗೇರಿ-೧ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸುವ ಮೂಲಕ ಮುಲ್ಲಾ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮುಲ್ಲಾ ಅಸೊಸಿಯೇಷನ್ದ ಉಪಾಧ್ಯಕ್ಷ ಅಮೀನಸಾ ಮುಲ್ಲಾ, ಯುನಸ್ ಮುಲ್ಲಾ, ಸದ್ದಾಂ ಮುಲ್ಲಾ, ಸಲೀಂ ಮುಲ್ಲಾ, ಮುಸ್ತಾಕ ಮುಲ್ಲಾ, ಆಶೀಫ್ ಮುಲ್ಲಾ, ಎಚ್.ಎಸ್.ಮುಲ್ಲಾ, ಹುಸೇನಸಾಬ ಮುಲ್ಲಾ, ಅಬ್ದುಲ ಮುಲ್ಲಾ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

