Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬ್ರಹ್ಮವಿದ್ಯಾಶ್ರಮದ ಪೂಜ್ಯರು ಪರೋಪಕಾರಿ ಸಂತರು :ಮಲ್ಲಿಬೊಮ್ಮಯ್ಯ ಶ್ರೀ
(ರಾಜ್ಯ ) ಜಿಲ್ಲೆ

ಬ್ರಹ್ಮವಿದ್ಯಾಶ್ರಮದ ಪೂಜ್ಯರು ಪರೋಪಕಾರಿ ಸಂತರು :ಮಲ್ಲಿಬೊಮ್ಮಯ್ಯ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಲಕೇರಿಯಲ್ಲಿ ಚಾತುರ್ಮಾಸ ಮುಕ್ತಾಯ | ಬ್ರಹ್ಮ ಪ್ರಶಸ್ತಿ ಪ್ರಧಾನ | ಧರ್ಮಸಭೆ

ಕಲಕೇರಿ: ಮಠಮಾನ್ಯಗಳು ಸಮಾಜ ಸುಧಾರಣೆಯ ಸಂಸ್ಕೃತಿಯ ಪ್ರತೀಕಗಳಾಗಬೇಕು ಈ ದಿಸೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟದಂತಿರುವ ತಿಳಗೂಳದ ಆಶ್ರಮ ಬಳಲಿ ಬಂದವರ ಆರೈಕೆಯ ಶಕ್ತಿ ಕೇಂದ್ರವಾಗಿದ್ದು, ದೈವಿಗುಣ, ಮಾತೃ ಹೃದಯಿಯಾಗಿರುವ ಶ್ರೀಗಳು ನಂಬಿ ಬಂದ ಭಕ್ತರ ಉದ್ಧಾರ ಮಾಡುವ, ಸಾಧಕರನ್ನು ಗುರುತಿಸಿ ಗೌರವಿಸುವ, ಸ್ತ್ರೀ ಶಕ್ತಿಯನ್ನು ಪೂಜಿಸುವ ಶ್ರೇಷ್ಟ ಕಾರ್ಯಗಳನ್ನು ಮಾಡುವ ಪರೋಪಕಾರಿ ಸಂತರಾಗಿದ್ದಾರೆ ಎಂದು ಆಲಮೇಲ ವಿರಕ್ತಮಠದ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಹೇಳಿದರು.
ಸಮೀಪದ ತಿಳಗೂಳ ಗ್ರಾಮದ ಶ್ರೀಚಕ್ರ ಬಗಳಾಂಭ ಶಕ್ತಿಪೀಠ ಬ್ರಹ್ಮವಿದ್ಯಾಶ್ರಮದ ಪೂಜ್ಯ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳ ಚಾತುರ್ಮಾಸ ಮುಕ್ತಾಯದ ಪ್ರಯುಕ್ತ ನಡೆದ ಮಹಾಪೂಜೆ, ಮಹಾಯಜ್ಞೆ, ೧೦೦೮ ಮುತ್ತೈದೆಯರಿಗೆ ಉಡಿತುಂಬುವದು, ಧರ್ಮಸಭೆ, ಬ್ರಹ್ಮ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದಿಶಕ್ತಿಯ ಮಹಾಪೂಜೆ, ಮಹಾಯಜ್ಞೆ, ೧೦೦೮ ಮುತ್ತೈದೆಯರಿಗೆ ಪೂಜೆಯೊಂದಿಗೆ ಉಡಿತುಂಬುವದು, ಚಾತುರ್ಮಾಸ ವ್ರತ ಮುಕ್ತಾಯಗೊಳಿಸಿದ ಶ್ರೀಗಳಿಗೆ ಭಕ್ತರಿಂಗ ತುಲಾಭಾರ ಸೇವೆ ಮತ್ತು ಗೌರವ ಸಮರ್ಪಣೆ ಕಾರ್ಯ ನಡೆಯಿತು.
ಬ್ರಹ್ಮ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶ್ರೀಮಠದ ವತಿಯಿಂದ ಬೆಂಗಳೂರಿನ ತಹಶೀಲ್ದಾರರಾದ ವಸುದೇವ ವಿ.ಸ್ವಾಮಿ ಅವರನ್ನು ವಿಶೇಷ ಗೌರವದೊಂದಿಗೆ ಸನ್ಮಾನಿಸಲಾಯಿತು. ಚನ್ನಪ್ಪ ಪತ್ತಾರ ಗುಡಗುಂಟಿ ಅವರಿಗೆ ಸೇವಾಬ್ರಹ್ಮ ಪ್ರಶಸ್ತಿ, ಶ್ರೀಕಾಂತ ಪತ್ತಾರ ತಾಳಿಕೋಟಿ ಅವರಿಗೆ ಸಾಹಿತ್ಯಬ್ರಹ್ಮ ಪ್ರಶಸ್ತಿ, ರವೀಂದ್ರ ಕುಲಕರ್ಣಿ ಕೋರಳ್ಳಿ ಅವರಿಗೆ ಸಂಗೀತಬ್ರಹ್ಮ ಪ್ರಶಸ್ತಿ ನೀಡುವುದರ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ, ದಾನಿಗಳಿಗೆ, ಹಿರಿಯ ಜೀವಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಿಂದಗಿ ಮೂರುಜಾವದಮಠದ ರಾಮಚಂದ್ರ ಮಹಾಸ್ವಾಮಿಗಳು, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲತಪಸ್ವಿ ಸೋಮಲಿಂಗ ಮಹಾಸ್ವಾಮಿಗಳು, ಚಿಗರಳ್ಳಿಯ ಜಗದ್ಗುರು ಮರುಳ ಶಂಕರದೇವರ ಗುರುಪೀಠದ ಸಿದ್ಧಬಸವಕಬೀರ ಮಹಾಸ್ವಾಮಿಗಳು, ಸಾಹಿತ್ಯಬ್ರಹ್ಮ ಪ್ರಶಸ್ತಿ ಸ್ವೀಕರಿಸಿದ ಶ್ರೀಕಾಂತ ಪತ್ತಾರ ಮಾತನಾಡಿದರು.
ಶ್ರೀಮಠದ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬಸವನಬಾಗೇವಾಡಿಯ ವಿಶ್ವವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಣ್ಣಾರಾಯಗೌಡ ಬಿರಾದಾರ, ಹಿರೇಮಠದ ಮಹಾಂತಯ್ಯ ಶ್ರೀಗಳು, ಬಸವರಾಜ ಶರಣರು, ಮೋಹನಾಚಾರ್ಯರು, ಮಲ್ಲಿಕಾರ್ಜುನ ವಿಶ್ವಕರ್ಮ, ಶ್ರೀಶೈಲ ಮಾನಪ್ಪ ಬಡಿಗೇರ, ಮುರಳೀಧರ ಚಂ. ಪತ್ತಾರ, ದೇವಿಂದ್ರ ಪತ್ತಾರ, ಕಾಳಪ್ಪ ಗವಾಯಿಗಳು ಇವಣಗಿ, ಅಶೋಕ ಬಡಿಗೇರ ಆಲಮೇಲ, ಈರಣ್ಣ ಪತ್ತಾರ, ರಾಜಶೇಖರ ಸಾತಿಹಾಳ, ಗೋಪಾಲ ಸಣತಂಗಿ, ಮಾರುತಿ ಕಮ್ಮಾರ, ಮೌನೇಶ ಪತ್ತಾರ ಸೇರಿದಂತೆ ಇತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!
    In (ರಾಜ್ಯ ) ಜಿಲ್ಲೆ
  • ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ
    In (ರಾಜ್ಯ ) ಜಿಲ್ಲೆ
  • ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ
    In (ರಾಜ್ಯ ) ಜಿಲ್ಲೆ
  • ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲಕ್ಕೆ ಹೆಚ್ಚುವರಿ ಸಾರಿಗೆ ಕಾರ್ಯಚರಣೆ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ವಿಜಯಪುರದಲ್ಲಿ ಭೀಮಗಾಯನ
    In (ರಾಜ್ಯ ) ಜಿಲ್ಲೆ
  • ’ಶ್ರೀಗುರು ಮರುಳಾರಾದ್ಯ ಸಿರಿ’ ಪ್ರಶಸ್ತಿಗೆ ಈರಣ್ಣ ಝಳಕಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ಪಾದಯಾತ್ರಿಗಳಿಗೆ ಟೋಪಿ ವಿತರಣೆ
    In (ರಾಜ್ಯ ) ಜಿಲ್ಲೆ
  • ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ
    In (ರಾಜ್ಯ ) ಜಿಲ್ಲೆ
  • ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.