ಸಿಂದಗಿ: ಆಲಮೇಲ ಮತ್ತು ಸಿಂದಗಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಕೊರತೆಯನ್ನು ನಿವಾರಣೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಿ ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಬಂದಾಳ, ಚಿಕ್ಕಸಿಂದಗಿ, ಬ್ಯಾಕೋಡ, ಬನ್ನೆಟ್ಟಿ, ಚಟ್ಟರಕಿ, ಚಾಂದಕವಟೆ, ಸುರುಗಿಹಳ್ಳಿ, ಹಿಕ್ಕನಗುತ್ತಿ, ನಾಗಾವಿ ಬಿ.ಕೆ, ಗೊರವಗುಂಡಗಿ, ªನಾಗಾವಿ ತಾಂಡಾ, ರಾಂಪುರ ಪಿಎ, ರಾಂಪುರ ತಾಂಡಾ, ಬೆನಕೊಟಗಿ, ಮತ್ತು ಆಲಮೇಲ ತಾಲೂಕಿನ ಬಗಲೂರ, ಶಿರಸಗಿ, ದೇವಣಗಾವ, ಕಡ್ಲೆವಾಡ, ಮಲಘಾಣ, ಸೋಮಜಾಳ, ಮಲಘಾಣ, ರಾಮನಹಳ್ಳಿ, ಗುಡ್ಡಳ್ಳಿ ಈ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತುರ್ತಾಗಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳಬೇಕು ಎಂದು ಆಯಾ ಗ್ರಾಪಂನ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಪಂ ಇಓ ರಾಮು ಅಗ್ನಿ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಎ.ಎ ದುರ್ಗದ, ಮಂಜುನಾಥ್ ಸ್ವಾಮಿ, ವಿರುಪಾಕ್ಷಿ ನಾಡಗೌಡ, ಎ.ಎಚ್.ಯಾಳಗಿ ಸೇರಿದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

