ಬಾರತೀಯ ಸಂವಿಧಾನ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಶಾಸಕ ಮನಗೂಳಿ ಅಭಿಮತ
ಸಿಂದಗಿ: ಸಂವಿಧಾನ ಸಮಾನತೆ, ಸೌಹಾರ್ದತೆ, ಭಾವೈಕ್ಯತೆಯನ್ನು ಹೊಂದಿದೆ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಬಾರತೀಯ ಸಂವಿಧಾನವೆಂದು ಸಿವ್ಹಿಲ್ ಮತ್ತು ಜೆ.ಎಮ್.ಎಫ್.ಸಿ.ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.
ಸೋಮವಾರದಂದು ಪಟ್ಟಣದ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಿಂದಗಿ ಮತ್ತು ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಭಾರತೀಯ ಸಂವಿಧಾನ ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಪೀಠಿಕೆಯನ್ನು ಅಧ್ಯಯನ ಮಾಡುವುದು ಹಾಗೂ ಅದರಂತೆ ನಡೆದುಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಂವಿಧಾನ ನಮಗೆಲ್ಲ ಎಲ್ಲ ರೀತಿಯ ಸೌಲಭ್ಯವನ್ನು ನೀಡಿದೆ. ಒಂದು ರೀತಿಯಲ್ಲಿ ಭಾರತದ ಸಂವಿಧಾನ ಬಾರತೀಯರ ಜೀವಾಳವಿದ್ದಂತೆ. ಅದರ ಕುರಿತು ತಿಳುವಳಿಕೆ ಪಡೆಯುವುದು, ಅದರ ಸರಿಯಾದ ಪಾಲನೇ ಮಾಡುವುದು ನಮ್ಮೇಲ್ಲ ಜವಾಬ್ದಾರಿಯಾಗಿದೆ. ಶಾಲಾ ಕಾಲೇಜುಗಳಲ್ಲಿ ಈ ವಿಚಾರ ಕುರಿತು ವಿಚಾರ ಸಂಕಿರ್ಣಗಳು, ಚರ್ಚೆಗಳು ನಡೆಯಬೇಕು ಇದೊಂದು ಜ್ಞಾನಕ್ಕೆ ಮತ್ತು ಬದುಕಿಗೆ ಉತ್ತಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಮಕ್ಕಳಿಗೆ ಬೊಧಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಎಫ್.ಎ.ಹಾಲಪ್ಪನವರ ಉಪನ್ಯಾಸ ನೀಡಿ, ಭಾರತೀಯ ಸಂವಿಧಾನ ಅನೇಕ ವಿಶಿಷ್ಟತೆಗಳನ್ನು ಒಳಗೊಂಡ ಸಂವಿಧಾನವಾಗಿದೆ. ಇದರ ಪ್ರತಿ ಅಂಶಗಳು ಕೂಡಾ ಪ್ರತಿ ಭಾರತೀಯನು ತಿಳಿದುಕೊಂಡು ಬದುಕಬೇಕಾಗಿದೆ.ಪ್ರಸ್ತುತ ಕಾಲಗಟ್ಟದಲ್ಲಿ ಸಂವಿಧಾನದ ವಿರುದ್ದವಾಗಿ ಅನೇಕ ಕಾರ್ಯಚಟುವಟಿಕೆಗಳು ನಡೆಯುತ್ತಿರುವುದು ಘೋರವಾಗಿದೆ ಪ್ರಜ್ಞಾವಂತರಾದ ನಾವೆಲ್ಲ ಅದರ ವಿರುದ್ದ ಧ್ವನಿ ಎತ್ತಬೇಕಾಗಿದೆ ಎಂದರು.
ವೇದಿಕೆ ಮೇಲೆ ಸಹಕಾರಿ ಸರಕಾರಿ ವಕೀಲೆ ಎಫ್.ಝಡ್.ಖತೀಬ, ಸರಕಾರಿ ವಕೀಲ ಬಿ.ಜಿ.ನೆಲ್ಲಗಿ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡ್ಡಮನಿ ಇದ್ದರು.
ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಸೃಷ್ಠಿ ಸಿಂಗೆ ಪ್ರಾರ್ಥಿಸಿದರು. ಬಿ.ಜಿ.ನೆಲ್ಲಗಿ ವಂದಿಸಿದರು.
ಉಪನ್ಯಾಸಕರಾದ ಆರ್.ಬಿ ಹೊಸಮನಿ, ಆರ್.ಸಿ ಕಕ್ಕಳಮೇಲಿ, ಎಮ್.ಎನ್ ಅಜ್ಜಪ್ಪ, ಸತೀಶ ಬಸರಕೋಡ, ಮುಕ್ತಾಯಕ್ಕ ಕತ್ತಿ, ಎ.ಬಿ ಪಾಟೀಲ, ಎಸ್.ಎಸ್ ಚವ್ಹಾಣ, ಎ ಸಿಂದಗಿಕರ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

