ಬಾಲ್ಯಾವಸ್ಥೆ-ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕುರಿತು ಕಾನೂನು ಅರಿವು-ನೆರವು
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನ.೨೪ರಂದು ನಗರದ ವಿಕಾಸ ಸ್ಕೂಲ್‌ನಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕುರಿತು ಕಾನೂನು ಅರಿವು ನೆರವು ನ.೨೪ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ ಅವರು ಉದ್ಘಾಟಿಸಿ ಮಾತನಾಡಿ, ೧೮ ವರ್ಷದೊಳಗಿನ ಮಕ್ಕಳು ಯಾವುದೇ ಉದ್ದಿಮೆ ಸಂಸ್ಥೆಗಳಲ್ಲಿ ದುಡಿಯಬಾರದು. ಬಾಲಕಾರ್ಮಿಕರು ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತರುವಂತೆ ತಿಳಿಸಿದ ಅವರು, ಇಲಾಖೆಯಿಂದ ಇ-ಶ್ರಮ ಕಾರ್ಡ ಹಾಗೂ ಪಿಎಂಎಸ್‌ವೈಎಂ ಕಾರ್ಡ ಸೇರಿದಂತೆ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯದ ಕುರಿತು ಮಾತನಾಡಿದರು.
ಬಾಲಕಾರ್ಮಿಕ ಯೋಜನಾ ಸಂಘದ ನಿರ್ದೇಶಕರಾದ ಕುಮಾರ ನೀಲಮ್ಮಾ ಎಚ್.ಖೇಡಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ಅಡ್ವೋಕೇಟ್ ಬಾಬು ಎಂ.ಅವತಾಡೆ ಅವರು ಮಾತನಾಡಿ, ಬಾಲಕಾರ್ಮಿಕ ಕಾಯ್ದೆ ೧೯೮೬ ಹಾಗೂ ತಿದ್ದುಪಡೆ ಕಾಯ್ದೆ ೨೦೧೬ರ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿಕಾಸ ಸ್ಕೂಲ್‌ನ ಅಧ್ಯಕ್ಷ ಎಚ್.ಜಿ.ತೊನಶ್ಯಾಳ, ಶಿಕ್ಷಕರಾದ ಶಿವಾನಂದ ಹಿರೇಕುರುಬರ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಡಿಇಓ ಅನಿಲ ರಾಠೊಡ, ಪಾರ್ವತಿ ಎಸ್.ಶಿವನಾಳ ಉಪಸ್ಥಿತರಿದ್ದರು. ಶಿವಾನಂದ ಚೌಧರಿ ನಿರೂಪಿಸಿ, ವಂದಿಸಿದರು. ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
