ಅಪಘಾತ ರಹಿತ ಚಾಲನೆಗಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪ್ರದಾನ
ವಿಜಯಪುರ: ಶಕ್ತಿ ಗ್ಯಾರಂಟಿಗೆ ಶತಕೋಟ ಸಂಭ್ರಮದ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ನವೆಂಬರ್ ೨೪ ರಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ೬ ಜನ ಚಾಲಕರು ಅಪಘಾತ ರಹಿತ ಚಾಲನೆಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಮೊಹಮ್ಮದ ಫೈಜ್ ಅವರು ತಿಳಿಸಿದ್ದಾರೆ.
ನಿಗಮದ ಚಾಲಕರಾದ ಮುದ್ದೇಬಿಹಾಳ ಘಟಕದ ಸಿ.ಎಸ್.ಕಸಬೇಗೌಡರ, ಸಿಂದಗಿಯ ಪಿ.ಬಿ.ಕಾಂಬಳೆ, ವಿಜಯಪುರ ೧ನೇ ಘಟಕದ ಎಸ್.ಎ.ಬಿರಾದಾರ, ಸಿಂದಗಿಯ ಎನ್.ಎಂ.ಮಾದರ, ತಾಳಿಕೋಟೆಯ ಕೆ.ಎಚ್.ಓಲೇಕಾರ ಹಾಗೂ ವಿಜಯಪುರ ಘಟಕ-೧ರ ಎಂ.ಆಯ್.ಸೋಲಾಪುರ ಅವರು ಚಿನ್ನದ ಪದಕ ಪಡೆದುಕೊಂಡಿದ್ದು, ಇವರ ಸಾಧನೆಗೆ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

