ಇಂಡಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಂವಿಧಾನ ಕೇವಲ ನೀತಿ ನಿರೂಪಣೆ ಗುಚ್ಚವಲ್ಲ, ಅದು ಭಾರತೀಯರ ಹಕ್ಕುಗಳ ರಕ್ಷಾ ಕವಚ. ಸಮಾನತೆ ಸಾಮಾಜಿಕ ನ್ಯಾಯದ ಭರವಸೆ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಕಾಣುವದೇ ನಮ್ಮ ದೇಶದ ಬಲ, ಸಂವಿಧಾನದ ಮೂಲ ಆಶಯ ಪಾಲಿಸುವದೇ ನೈಜ ಗೌರವ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಗುರುಭವನದಲ್ಲಿತಾಲೂಕಾಡಳಿತ ,ತಾಪಂ , ನಗಸಭೆ, ಸಮಾಜ ಕಲ್ಯಾಣ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಅನೇಕ ಧರ್ಮ, ಪಂಗಡ, ವೇಷ ,ಭುಷಣ ಭಾಷೆ ಹೀಗೆ ವಿವಿಧತೆಯಲ್ಲಿ ಏಕತೆ ಹೊಂದಲು ಅಂಬೇಡ್ಕರವರು ಬರೆದ ಸಂವಿಧಾನವೇ ಭದ್ರಬುನಾದಿಯಾಗಿದೆ. ಇಂದು ಇಡೀ ವಿಶ್ವದಲ್ಲಿ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುತ್ತಾರೆ ಅಂದು ಸಮಾಜದಲ್ಲಿನ ಶೋಷಣೆ, ಮೌಢ್ಯನಂಬಿಕೆ .ಕಂದಾಚಾರ ವಿರುಧ್ಧ ಧ್ವನಿ ಎತ್ತಿದ ಮಹಾನ ಸಮಾಜ ಪರಿವರ್ತಕ ಅಂಬೇಡಕರರವರು ಭಾರತದ ಸಂವಿಧಾನ ಶ್ರೇಷ್ಠ ಗ್ರಂಥ ಇದನ್ನು ಪ್ರತಿಯೋಬ್ಬ ಭಾರತೀಯ ತಿಳಿದುಕೊಳ್ಳಬೇಕು ಎಂದರು. ಹಿಂದಿನ ಕಾಲದಲ್ಲಿ ಧರ್ಮಶೃದ್ದೆ, ಉಪಾಸನಾಸ್ವಾತಂತ್ರ್ಯ, ಅಭಿವ್ಯಕ್ತಿಸುವ ಹಕ್ಕು ಇರಲ್ಲಿಲ್ಲ ರಾಷ್ಟçಪತಿಯಿಂದ ಹಿಡಿದ ಸಾಮಾನ್ಯ ಪ್ರಜೆಗೂ ಸಮಾನ ಗೌರವ ನೀಡಿದ ಶ್ರೇಷ್ಠ ಸಮಾಜಿಕ ತತ್ವಜ್ಞಾನಿ ಇವರ ಆದರ್ಶಗಳು ನಾವೇಲ್ಲರೂ ಪಾಲಿಸಬೇಕು ಎಂದರು
ಶಿಕ್ಷಣ ಮಹಾವಿಧ್ಯಾಲಯ ಗದಗ, ಉಪನ್ಯಾಸಕ ಎಂ ಬಿ ಹುಯಿಲಗೋಳ ಉಪನ್ಯಾಸಕ ಶ್ರೀಶೈಲ ಶರಣಪ್ಪ ಸಿಂಪಿ ಉಪನ್ಯಾಸ ನೀಡಿ,
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಕಾಂಬಳೆ ,
ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ ಮಾತನಾಡಿದರು.
ನಿಂಬೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಭೀಮಣ್ಣಾ ಕೌಲಗಿ, ಪ್ರಶಾಂತ ಕಾಳೆ, ಇಒ ಮಹಾದೇವಪ್ಪ ಏವೂರ, ಜಟ್ಟೆಪ್ಪ ರವಳಿ, ಶಿವಯೋಗೇಪ್ಪ ಚನಗೊಂಡ, ಸದಾಶಿವ ಕಟ್ಟಿಮನಿ, ಧರ್ಮರಾಜ ವಾಲೀಕಾರ ವೇದಿಕೆಯಲ್ಲಿದ್ದರು.

