ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಂವಿಧಾನ ನಾಗರಿಕ ಹಕ್ಕುಗಳಿಗೆ ಭದ್ರತೆ ಬುನಾದಿ ಪ್ರಜಾಪ್ರಭುತ್ವದ ಜೀವಾಳ ಎಂದು ಭಾರತೀಯ ಸುರಾಜ್ಯ ಸಂಸ್ಥೆ ಅದ್ಯಕ್ಷರು ಹಾಗೂ ನಿವೃತ್ತಿ ಶಿಕ್ಷಕ ಬಿ.ಬಿ. ಪೂಜಾರಿ ಹೇಳಿದರು.
ಸಮಿಪದ ಅರ್ಜನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕ್ರಿಯಾಯೋಜನೆ ಉದ್ಘಾಟಸಿ ಮಾತನಾಡಿದ ಅವರು
ದೇಶವನ್ನು ಪ್ರಗತಿ ಏಕತೆ ಮತ್ತು ಸಮಗ್ರತೆಯತ್ತ ಮುನ್ನಡೆಸುವುದು ನಾವೆಲ್ಲರೂ ಸಂವಿಧಾನ ವನ್ನು ನಿಷ್ಠೆಯಿಂದ ಪಾಲಿಸಬೇಕು ಗೌರವಸಿಬೇಕು ಎಂದರು.
ಭಾರತೀಯ ಸುರಾಜ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ಕೇವಲ ಸಹಾಯ ಮಾಡುವುದಲ್ಲ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು. ಗ್ರಾಮೀಣ ಭಾಗದ ಮಕ್ಕಳೂ ಉತ್ತಮ ಅಂಕ ಪಡೆದು ಉನ್ನತ ಸಾಧನೆ ಮಾಡಬೇಕು ಎಂಬುದೇ ನಮ್ಮ ಆಶಯ. ಶಾಲೆಯೊಂದಿಗೆ ನಿರಂತರವಾಗಿ ಸಹಕರಿಸಿ ಮಕ್ಕಳಿಗೆ ಮಾರ್ಗದರ್ಶನ, ಅಧ್ಯಯನ ಸಾಮಗ್ರಿ ಹಾಗೂ ಪ್ರೋತ್ಸಾಹ ನೀಡುತ್ತೇವೆ ಎಂದರು.
ಶಾಲಾ ಮುಖ್ಯ ಗುರು ಪ್ರಭು ಬಿರಾದಾರ ಮಾತನಾಡಿ, “ಸಂವಿಧಾನ ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಕಲಿಸುತ್ತದೆ. ಮಕ್ಕಳ ದಿನಾಚರಣೆ ಎಂದರೆ ಮಕ್ಕಳ ಕನಸುಗಳಿಗೆ ಗೌರವ ಕೊಡುವುದು. ಈ ಕ್ರಿಯಾಯೋಜನೆಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಯೋಜನಾಬದ್ಧ ಅಧ್ಯಯನ, ಪರೀಕ್ಷಾ ಭಯ ನಿವಾರಣೆ ಹಾಗೂ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ” ಎಂದರು.
ಸಹ ಶಿಕ್ಷಕರಾದ ಡಿ .ಕೆ. ರಗಟೆ ಮಾತನಾಡಿ ಪ್ರತಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಗುರುತಿಸಿ, ಕಠಿಣ ವಿಷಯಗಳಿಗೆ ವಿಶೇಷ ತರಗತಿ, ವಾರದ ಪರೀಕ್ಷೆ, ಹಿಂದಿನ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಹಾಗೂ ವೈಯಕ್ತಿಕ ಮಾರ್ಗದರ್ಶನ ನೀಡಲಾಗುವುದು ಎಂದು ಕ್ರಿಯಾಯೋಜನೆಯನ್ನು ವಿವರಿಸಿ ಹೇಳಿದರು.
ಈ ಸಂದರ್ಭದಲ್ಲಿ. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶರಣಪ್ಪ ಬೂದಿಹಾಳ, ಎಂ. ಎಸ್. ರಾಮಪೂರ, ಪಿ.ಬಿ. ಹಿರೋಡಗಿ, ಎಂ ಎಸ್ ಕಾಗರ, ಚಿದಾನಂದ ಮೇತ್ರಿ, ಮಾಳಪ್ಪ ಹುಲಜಂತಿ, ಗಣಪತಿ ಗೋಡೆಕರ, ದಶವಂತ ಮೇತ್ರಿ, ಗ್ರಾ.ಪಂ ಸದಸ್ಯರು, ಪಾಲಕರು, ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

