ಉದಯರಶ್ಮಿ ದಿನಪತ್ರಿಕೆ
ಇಂಡಿ: ಕುಲ ಜಾತಿಗಳ ಸಂಕೋಲೆ ಕಿತ್ತು ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಕನಕದಾಸರ ಸಮ ಸಮಾಜದ ಬೋಧನೆ ಆಧ್ಯಾತ್ಮಿಕ ಚಿಂತನೆ ಸಮಸ್ತ ಮನುಕುಲಕ್ಕೆ ಮಾರ್ಗದರ್ಶಿಯಾಗಿದೆ ಎಂದು ಹಾಲುಮತ ಸಮಾಜದ ಮುಖಂಡ ಮತ್ತು ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ ಹೇಳಿದರು.
ಅವರು ತಾಲೂಕಾ ಆಡಳಿತ ವತಿಯಿಂದ ಆಡಳಿತಸೌಧದಲ್ಲಿ ನಡೆದ ಕನಕದಾಸರ ೫೩೯ ನೇ ಜಯಂತೋತ್ಸವದಲ್ಲಿ ಮಾತನಾಡಿದರು.
ಇಂದಿನ ತಾಂತ್ರಿಕ ಯುಗದ ಪೀಳಿಗೆಗೆ ಕನಕದಾಸರ ಚಿಂತನೆಗಳು ಸಮಾನತೆ ಮಾನವೀಯ ಮೌಲ್ಯ ಮತ್ತು ಆತ್ಮಾವಲೋಕನದ ದಾರಿ ದೀಪವಾಗಿವೆ. ದ್ವೇಷ ಅಸೂಯೆ ಒತ್ತಡಗಳಿಂಡ ಮುಕ್ತವಾದ ಆರೋಗ್ಯಕರ ಸಮಾಜ ನಿರ್ಮಿಸಲು ಅವರ ತತ್ವಗಳನ್ನು ಅನುಪಾಲಿಸುವದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಕನಕದಾಸರ ಸಾಹಿತ್ಯದಲ್ಲಿ ಸಮಾನತೆ ಭ್ರಾತತ್ವ ಮತ್ತು ನೈತಿಕ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಲುಪಿಬೇಕಿದೆ ಅಂದಾಗ ಮಾತ್ರ ಸುಸ್ಥಿರ ಮತ್ತು ಸಮಸಮಾಜದ ನಿರ್ಮಾಣ ಸಾದ್ಯ ಎಂದರು.
ಶಿಕ್ಷಕ ಬಸವರಾಜ ಗೋರನಾಳ ಮಾತನಾಡಿದರು.
ತಾಪಂ ಇಒ ಮಹಾದೇವಪ್ಪ ಏವೂರ, ಎಸ್.ಆರ್ ನಡಗಡ್ಡಿ, ಸರಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ರಾಹೂರ, ಆರ್.ವಿ.ಪಾಟೀಲ, ಎ.ಬಿ ಹುಣಸಗಿ, ಶ್ರೀಶೈಲ ಪೂಜಾರಿ, ದೇವೆಂದ್ರ ಕುಂಬಾರ, ಎಸ್.ಜಿ.ನಂದರಗಿ, ಭೀಮು ಕಂಟಿಕಾರ, ಅನೀಲಗೌಡ ಬಿರಾದಾರ, ಶ್ರೀಶೈಲ ಕರಶೆಟ್ಟಿ, ಸಂತೋಷ ಹೊಟಕರ, ಸಂಕೇತ ಪಾಟೀಲ, ಎಚ್.ಎಚ್. ಗುನ್ನಾಪುರ, ಐ.ಡಿ.ಕಲ್ಲೋಳಿ, ಎಸ್.ಎಂ ಒಡೆಯರ್, ಎಸ್.ಡಿ.ಕಲ್ಲೋಳ್ಳಿ , ಸುಜಾತಾ ಪೂಜಾರಿ, ಮತ್ತಿತರಿದ್ದರು.

