ಉದಯರಶ್ಮಿ ದಿನಪತ್ರಿಕೆ
ಆಲಮೆಲ: ಸಂತ ಶ್ರೇಷ್ಠ ಕನಕದಾಸರ ಆದರ್ಶ ನಮಗೆ ದಾರಿದೀಪ ಅವರ ತತ್ವ ಸಿದ್ಧಾಂತ, ಕೀರ್ತನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಕರ್ನಾಟಕ ಪ್ರದೇಶ್ ಕುರುಬ ಸಂಘದ ತಾಲೂಕು ಅಧ್ಯಕ್ಷ ಸಿದ್ದು ಕೆರಿಗೊಂಡ ಹೇಳಿದರು.
ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ 539ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕನಕರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಅವರು ಮಾತನಾಡಿದರು.
ಮಹಾನ್ ಸಂತರ ಆದರ್ಶದ ಬದುಕು ನಮ್ಮೆಲ್ಲರಿಗೂ ದಾರಿ ದೀಪ. ತಮ್ಮ ಅಪಾರವಾದ ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡ ಮಹಾನ್ ಚೇತನರು ಕನಕದಾಸರು ಎಂದರು.
ಸಮಾಜದ ಮುಖಂಡ ರಮೇಶ್ ಬಂಟನೂರು ಮಾತನಾಡಿ, ಸಂತರ ಶರಣರ ದೇಶಭಕ್ತರ ದೇಶ ಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಂತಹ ಶೂರರ ಜಯಂತೋತ್ಸವವನ್ನು ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು ಡಾ, ಅಂಬೇಡ್ಕರ್, ಭಗತ್ ಸಿಂಗ್, ಅಹಿಲಾಬಾಯಿ ಹೋಳ್ಕರ್, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅನೇಕ ವೀರಶೂರರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವಂತ ಕಾರ್ಯ ನಮ್ಮಿಂದಾಗಬೇಕು ಎಲ್ಲ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಿ ದೇಶಭಕ್ತಿ ಬೆಳೆಸಬೇಕು ಎಂದು ಹೇಳಿದರು.
ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪತಹಸಿಲ್ದಾರ್ ಪಿ,ಎಸ್,ಮೂಕಿಹಾಳ, ಆಡಳಿತ ಅಧಿಕಾರಿಗಳಾದ ವಿನೋದ ಬಿಸೆ, ಮಡಿವಾಳಪ್ಪ ಬಿರಾದಾರ, ಶಾಂತು ಕಟ್ಟಿಮನಿ, ನಿಂಗರಾಜ ಬಂಟನೂರ, ರಮೇಶ ಕಟ್ಟಿಮನಿ, ಸಿದ್ದಪ್ಪ ಗುಬದೊಡ್ಡಿ, ಸಂತೋಷ ಕಟ್ಟಿಮನಿ, ಶರಣು ಪೂಜಾರಿ, ಸಿಂಧೂ ಕಟ್ಟಿಮನಿ, ಸೇರಿದಂತೆ ಅನೇಕರು ಇದ್ದರು.

