ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕು ಆಡಳಿತ ಸಿಂದಗಿ ವತಿಯಿಂದ ಹಮ್ಮಿಕೊಂಡ ದಾಸಶ್ರೇಷ್ಠ ಕನದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬೋರಗಿ ಗ್ರಾಮದ ಹೆಡ್ ಕಾನ್ಸ್ಟೇಬಲ್ ಮೌಲಾಲಿ ಆಲಗೂರ ರಚನೆಯ ಜಯ ಕನಕ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು.
ಕುರುಬ ಸಂಘದ ತಾಲೂಕು ನಿಂಗಣ್ಣ ಬಳ್ಳಾ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ನಗರಸಭೆ ಪೌರಾಯುಕ್ತ ರವಿ ಸಿರಗುಪ್ಪಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಂತೋಷ ಸಾಲಿ, ಗುಬ್ಬೇವಾಡದ ಒಡೆಯರ ಶ್ರೀಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

