ಚಡಚಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ತಾ.ಪಂ.ಎಇಓ ಅಶೋಕಕುಮಾರ ರಾಠೋಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಅಧ್ಯಕ್ಷ ಸ್ಥಾನವಹಿಸಿದ ತಾ.ಪಂ.ಎಇಓ ಅಶೋಕಕುಮಾರ ರಾಠೋಡ ಅವರು ಉದ್ಘಾಟಿಸಿ ಮಾತನಾಡಿದ ಅವರು, “ಸಂವಿಧಾನ ಸರ್ವರ ಆಸ್ತಿ. ನ್ಯಾಯ,ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾಪಾಡಬೇಕಾದರೆ ಸಂವಿಧಾನದ ತತ್ವಗಳನ್ನು ಅನುಸರಿಸಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗುವುದರಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಅತ್ಯಂತ ಮಹತ್ತರ,” ಎಂದರು.
ಸಂವಿಧಾನ ಎಂಬುದು ಒಂದು ಪುಸ್ತಕ ಅಲ್ಲ ಸಂವಿಧಾನ ಎಂದರೆ ಬಾಬಾಸಾಹೇಬ ಅಂಬೇಡಕರ್-ಅಂಬೇಡಕರ್ ಎಂದರೆ ಸಂವಿಧಾನ ಆದ್ದರಿಂದ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದುವುದರ ಜತೆಗೆ ಕರ್ತವ್ಯಗಳನ್ನೂ ಜವಾಬ್ದಾರಿಯಿಂದ ನಿರ್ವಹಿಸಬೇಕು. ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಸಂವಿಧಾನದ ತತ್ವಗಳನ್ನು ಪಾಲಿಸುವ ಮೂಲಕ ಸಮಾನತೆ, ನ್ಯಾಯ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಸಂವಿಧಾನ ದಿನ ಸಾರುತ್ತದೆ.“ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನನ್ನು ಸಶಕ್ತಗೊಳಿಸಿ, ಸಮಾನತೆ ಹಾಗೂ ಮೂಲಭೂತ ಹಕ್ಕು–ಕರ್ತವ್ಯಗಳನ್ನು ನೀಡಿದೆ. ನಮ್ಮನ್ನು ರಕ್ಷಿಸುವ ಅತಿ ದೊಡ್ಡ ಕಾನೂನು ಸಂವಿಧಾನವೇ ಆಗಿದೆ ಎಂದರು.
ಉಪನ್ಯಾಸಕ ಶಿವಾನಂದ ಬಿರಾದಾರ ಅವರು ಮಾತನಾಡಿ, ಸಂವಿಧಾನವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿದ್ದು, ದೇಶದ ಆಡಳಿತಕ್ಕೆ ಸ್ಪಷ್ಟ ದಿಕ್ಕು ನೀಡುವುದರ ಜತೆಗೆ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುತ್ತದೆ. ನ್ಯಾಯ, ಸ್ವಾತಂತ್ರ‍್ಯ, ಸಮಾನತೆ ಹಾಗೂ ಭ್ರಾತೃತ್ವ ಎಂಬ ಮೌಲ್ಯಗಳು ಸಂವಿಧಾನದ ಮೂಲ ಆಶಯಗಳಾಗಿವೆ. ಇವು ದೇಶದ ಏಕತೆ, ಅಖಂಡತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ದಲಿತ ಮುಖಂಡ ದೇವಾನಂದ ಸಿಂಗೆ ಮಾತನಾಡಿದರು.
ಪ.ಪಂ.ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ,ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ,ತಾ.ಪಂ. ಶಿವದತ್ ಕೊಟ್ಟಲಗಿ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಹವಾಲ್ದಾರ,ಸಿಡಿಪಿಓ ಸಾಹೇಬಗೌಡ ಜುಂಜರವಾಡ,ಬಿಇಓ ಸಿಬ್ಬಂದಿ,ಚಡಚಣ ಸಿಪಿಆಯ್ ಪರಶುರಾಮ ಮನಗೂಳಿ,ಪಿಎಸ್‌ಐ ಅರವಿಂದ ಅಂಗಡಿ,ಪಿಎಸ್‌ಐ ಅಪರಾಧ ವಿಭಾಗ ಚಡಚಣ ಎನ್.ಜಿ.ಅಪನಾಯ್ಕರ, ಡಾ.ಸತೀಶಕುಮಾರ ಮದಭಾವಿ, ಮುರುಗೇಶ ಸಿಂಪಿ, ಕಂದಾಯ ನೀರಿಕ್ಷಕ, ಶಿರಸ್ತೇದಾರ ಆರ್.ಎಸ್.ಚವ್ಹಾಣ, ಆಹಾರ ನಿರೀಕ್ಷಕ ಶಿವಾನಂದ ಕೋಳಿ, ದಶರಥ ಬನಸೋಡೆ, ದೇವಾನಂದ ಸಿಂಗೆ, ಸೋಮು ಬಡಿಗೇರ, ರುದ್ರೇಶ ಬನಸೋಡೆ, ಸಿದ್ದಲಿಂಗ ಬನಸೋಡೆ, ಸತಿಶ ಬಗಲಿ, ಬಿ.ಕೆ.ವಾಘಮೋರೆ, ಸೈದು ಕೊಡಹೊನ್ನ,ಕಲ್ಮೇಶ ವಾಘಮೋರೆ ಸೇರಿದಂತೆ ವಿವಿಧ ಸಂಘಟನೆಯ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಬಕಾರಿ ಹಾಗೂ ಪೋಲಿಸ್ ಇಲಾಖೆ ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು

