ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ವಿಪರೀತ ಚಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದ್ದು ಮುಂಜಾನೆ ಮತ್ತು ಸಂಜೆಯ ವೇಳೆ ಮೈಕೊರೆಯುವ ಚಳಿಬಿಸುತ್ತಿದೆ. ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಚಳಿಯಿಂದ ರಕ್ಷಣೆ ಪಡೆಯಲು ಜನರು ಟೀ ಹಾಗೂ ಬೆಂಕಿ ಕಾಯಿಸಿಕೊಳ್ಳುವ ದೃಶ್ಯ ಗ್ರಾಮದಲ್ಲಿ ಎಲ್ಲಡೆ ಸಾಮಾನ್ಯವಾಗಿದೆ. ವಿಪರೀತ ಚಳಿಯ ಪರಿಣಾಮವಾಗಿ ದಿನನಿತ್ಯ ಕೃಷಿ ಚಟುವಟಿಕೆಗಳು ಹಾಗೂ ಪತ್ರಿಕೆ ಹಾಲು ಹಾಗೂ ಕೂಲಿ ಕಾರ್ಮಿಕರ ಕೆಲಸಗಳಿಗೆ ಅಡಚಣೆಯಾಗಿದೆ. ವೃದ್ಧರು ಮತ್ತು ಚಿಕ್ಕ ಮಕ್ಕಳು ಅರೋಗ್ಯದ ಮೇಲೆ ಪರಿಣಾಮ ಹವಾಮಾನ ವೈಪರೀತ್ಯ ಮತ್ತು ವಿಪರೀತ ಚಳಿಯಿಂದಾಗಿ ಗ್ರಾಮದ ವೃದ್ಧರು ಹಾಗೂ ಚಿಕ್ಕ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಚ್ಚಗಿನ ಉಡಪುಗಳನ್ನು ಧರಿಸುವಂತೆ ಹಾಗೂ ಅರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸ್ಥಳೀಯ ವೈದ್ಯರು ಸಲಹೆ ನೀಡಿದ್ದಾರೆ.
“ಕಳೆದ ಕೆಲವು ದಿನಗಳಿಂದ ಚಳಿಯ ಪ್ರಮಾಣ ವಿಪರೀತವಾಗಿದೆ. ಮುಂಜಾನೆ ಹೊಲಕ್ಕೆ ಹೋಗಿ ಕೃಷಿ ಕೆಲಸ ಮಾಡಲು ಮತ್ತು ಬೆಳೆಗಳಿಗೆ ನೀರು ಹಾಯಿಸಲು ತುಂಬಾ ಕಷ್ಟವಾಗುತ್ತದೆ. ಬೆಳಗ್ಗೆ ೯ಗಂಟೆಯಾದರೂ ಮನೆಯಿಂದ ಹೊರಬರಲು ಸಾಧ್ಯವಾಗದಂತಹ ನಿರ್ಮಾಣವಾಗಿದೆ.”
– ಶಂಕರ ಕೆಂಭಾವಿ ಮತ್ತು ಮಹಾಂತೇಶ ಹಡಪದ
ಗ್ರಾಮಸ್ಥರು

