ನಿಡಗುಂದಿ ತಾಲೂಕು ಹೋರಾಟ ಸಮಿತಿಯಿಂದ ನ. ೩೦ ರಂದು ಸರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಪಟ್ಟಣ ವ್ಯಾಪ್ತಿಯಲ್ಲಿಯೇ ಎಲ್ಲ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ತಾಲೂಕು ಹೋರಾಟ ಸಮಿತಿಯಿಂದ ನ. ೩೦ ರಂದು ಸರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಡಾ. ಸಂಗಮೇಶ ಗೂಗಿಹಾಳ ತಿಳಿಸಿದರು.
ಪಟ್ಟಣದ ರುದ್ರೇಶ್ವರ ಮಠದಲ್ಲಿ ಉಪವಾಸ ಸತ್ಯಾಗ್ರಹದ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ಕೇಂದ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಆಡಳಿತಾತ್ಮಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಕಚೇರಿಗಳನ್ನು ನಿಡಗುಂದಿ ಪಟ್ಟಣದ ವ್ಯಾಪ್ತಿಯಲ್ಲಿಯೇ ನಿರ್ಮಿಸಬೇಕು. ಈ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಶಿವಾನಂದ ಮುಚ್ಚಂಡಿ ಮಾತನಾಡಿದರು.
ಸಭೆಯಲ್ಲಿ ಸಂಗಣ್ಣ ಕೋಟಿನ, ಸಂಗಮೇಶ ಗೂಗಿಹಾಳ, ಶಿವಾನಂದ ಮುಚ್ಚಂಡಿ, ಈರಣ್ಣ ಮೂರನಾಳ, ಮುತ್ತು ಯರವಿನತೆಲಿನಮಠ, ಮಲ್ಲಯ್ಯ ಗಣಾಚಾರಿ, ಬಸವರಾಜ ರೇವಡಿ, ಶರಣು ಶಿವಣಗಿ, ಮಹಾಂತೇಶ ಪಟ್ಟಣಶೆಟ್ಟಿ, ಭದ್ರಯ್ಯ ಗಣಾಚಾರಿ, ಮಲ್ಲು ಕುಂಬಾರ, ರುದ್ರಪ್ಪ ಹುಲ್ಲೂರ, ತಿರುಪತಿ ಬಂಡಿವಡ್ಡರ, ಶಂಕರ ರೇವಡಿ, ಅವ್ವಣ್ಣ ನಾಯಕ ಹಾಗೂ ಇತರರು ಇದ್ದರು.

