ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪಟ್ಟಣದ ಡೋಣಿ ಶ್ರೀ ಹನುಮಾನ್ ಮಂದಿರದ (ಶ್ರೀ ರಂಗರಾವ್ ಮಹಾರಾಜರ ಮಠದ ಹತ್ತಿರ)ಹತ್ತಿರವಿರುವ ಕೋಟೆಗೋಡೆಯ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೋತ್ಸವವು ಶುಕ್ರವಾರವಿಜೃಂಭಣೆಯಿಂದ ಜರುಗಿತು.
ದಿ. ವೇ|| ಪುರುಷೋತ್ತಮಾಚಾರ್ಯ ಗ್ರಾಂ ಪುರೋಹಿತ ಅವರ ಸಹೋದರರಾದ ಶ್ರೀಧರ ಗ್ರಾಂ ಪುರೋಹಿತ ಹಾಗೂ ಶಿಷ್ಯಂದಿರಿಂದ ನೇತೃತ್ವದಲ್ಲಿ ನೇರವೇರಿದ ಈ ಜಾತ್ರೋತ್ಸವದ ಅಂಗವಾಗಿ ಬೆಳಿಗ್ಗೆ ೮ ಘಂಟೆಗೆ ಶ್ರೀದೇವಿಗೆ ಮಹಾಭಿಷೇಕ, ಪುಷ್ಪಾರ್ಚನೆ, ಅಲಂಕಾರ ಮಹಾಮಂಗಳಾರತಿ ಜರುಗಿತಲ್ಲದೇ ೮ ಘಂಟೆಯಿಂದ ಸುಮಂಗಲೆಯ ಕುಂಭ ಮೇಳದೊಂದಿಗೆ ಫಲ್ಲಕ್ಕಿ ಉತ್ಸವ ಹಾಗೂ ಶ್ರೀ ಲಕ್ಷ್ಮಿ ದೇವಿಯ ಭಾವಚಿತ್ರದದೊಂದಿಗೆ ಗಂಗಸ್ಥಳ ನೆರವೇರಿ ನಂತರ ಮೇರವಣಿಗೆಯು ಪ್ರಮುಖ ಬೀದಿಗಳಲ್ಲಿ ಹಾಯ್ದು ಪುನಃ ಮಂದಿರ ತಲುಪಿತು. ನಂತರ ಹೋಮ ಹವನ ಕಾರ್ಯಕ್ರಮಗಳು ಮಂದಿರದ ಆವರಣದಲ್ಲಿ ಜರುಗಿದವು ಮದ್ಯಾಹ್ನ ೧ ಘಂಟೆಯಿಂದ ೩ ಘಂಟೆಯವರೆಗೆ ತೀರ್ಥ ಪ್ರಸಾದ ಜರುಗಿತು.
ಸಾಯಂಕಾಲ ೬ ಘಂಟೆಗೆ ಶ್ರೀ ಮಹಾಲಕ್ಷಿö್ಮÃ ಹಾಗೂ ಗಾಯತ್ರಿ ಭಜನಾ ಮಂಡಳಿಯವರಿಂದ ಶ್ರೀ ಕೃಷ್ಣ ಧ್ಯಾನ, ಮಂತ್ರಜಪ ಹಾಗೂ ಲಕ್ಷ್ಮಿ ಸೋಬಾನ ಹಾಡುಗಳು ಜರುಗಿದವಲ್ಲದೇ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಜರುಗಿತು.
ಈ ಜಾತ್ರೋತ್ಸವದ ನೇತೃತ್ವವನ್ನು ಶ್ರೀ ಕೋಟೆಗೋಡೆ ಮಹಾಲಕ್ಷ್ಮಿ ದೇವಿ ಉತ್ಸವ ಸಮೀತಿಯ ಅಧ್ಯಕ್ಷ ತಿರುಪತಿ ಹಂಚಾಟೆ, ಉಪಾಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಅಶೋಕ ಪತ್ತಾರ, ರಾಜು ಕಮ್ಮಾರ, ನಾಗೇಶ ಹಂಚಾಟೆ, ಅಶೋಕ ಪತ್ತಾರ ಶಿಕ್ಷಕರು, ಶ್ರೀನಿವಾಸ ಹಂಚಾಟೆ, ತುಳಸಿರಾಮ ಹಂಚಾಟೆ, ಶ್ರೀಧರ ಗ್ರಾಮಪೊರೊಹಿತ, ರಾಘವೇಂದ್ರ, ಬಸವರಾಜ ಅಲೇಗಾವಿ, ಧಶರಥ ಖಂಡೇಕರ, ಮೊದಲಾದವರು ವಹಿಸಿದ್ದರು.

