Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶರಣ ಪರಂಪರೆ ಮೇಲಿನ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ

ನಿರ್ಮೋಹಿ ಸಂತ, ಮಹಾನ್ ತತ್ವಜ್ಞಾನಿಯಾಗಿದ್ದ ಸಿದ್ಧೇಶ್ವರ ಶ್ರೀ

ಸಂಭ್ರಮದಿಂದ ಜರುಗಿದ ಬನಶಂಕರಿದೇವಿ ರಥೋತ್ಸವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂಭ್ರಮದಿಂದ ಜರುಗಿದ ಬನಶಂಕರಿದೇವಿ ರಥೋತ್ಸವ
(ರಾಜ್ಯ ) ಜಿಲ್ಲೆ

ಸಂಭ್ರಮದಿಂದ ಜರುಗಿದ ಬನಶಂಕರಿದೇವಿ ರಥೋತ್ಸವ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ನಿಡಗುಂದಿ: ಪಟ್ಟಣದ ಆರಾಧ್ಯ ದೇವತೆ ಬನಶಂಕರಿದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಸಡಗರ ಹಾಗೂ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬನಶಂಕರಿದೇವಿಗೆ ಕುಭಾಭಿಷೇಕ ನೆರವೇರಿಸಿದ ಬಳಿಕ ಡೊಳ್ಳುಗಳ ನಿನಾದದೊಂದಿಗೆ ಕಲಶೋತ್ಸವ ಜರುಗಿತು. ಸಂಜೆ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದವು. ಭಕ್ತರು ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ರಥದತ್ತ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ವಿಶೇಷ ಹೂಮಾಲೆಗಳಿಂದ ಅಲಂಕರಿಸಲಾಗಿದ್ದ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಮಾಳಿಗೆ ಕಟ್ಟೆಗಳ ಮೇಲೆ ಜನಸಾಗರವೇ ನೆರೆದಿತ್ತು. ಮಹಿಳೆಯರು, ಮಕ್ಕಳು, ಯುವಕರು ಹಾಗೂ ವಯೋವೃದ್ಧರು ಸೇರಿದಂತೆ ಸಾವಿರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ರಥೋತ್ಸವಕ್ಕೂ ಮುನ್ನ ರಥದ ಭವ್ಯ ಕಲಶವನ್ನು ವಾದ್ಯಮೇಳ ಹಾಗೂ ಭಕ್ತರ ಮಂತ್ರಘೋಷಗಳು ಮೆರವಣಿಗೆಯಲ್ಲಿ ತರಲಾಯಿತು. ಮಾರ್ಗದುದ್ದಕ್ಕೂ ಮಹಿಳೆಯರು ಸೇರಿದಂತೆ ಭಕ್ತರು ಕಲಶಕ್ಕೆ ಪೂಜೆ ಸಲ್ಲಿಸಿ ಹೂಮಾಲೆ ಅರ್ಪಿಸಿದರು. ಬಳಿಕ ಕಲಶವನ್ನು ರಥದ ಬಳಿ ತಂದು ಕಲಶಾರೋಹಣ ನೆರವೇರಿಸಲಾಯಿತು. ಇದರೊಂದಿಗೆ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು. ರಥದ ಹಿಂದೆ ದೇವಿಯ ಪಲ್ಲಕ್ಕಿ ಉತ್ಸವವೂ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ‘ಶಂಭುಕೋ, ಶಂಭುಕೋ’ ಎಂಬ ಘೋಷಣೆಗಳನ್ನು ಮೊಳಗಿಸಿ ಭಕ್ತಿಭಾವ ಮೆರೆದರು.
ಒಟ್ಟಾರೆ, ಎರಡು ದಿನಗಳ ಕಾಲ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಡಗುಂದಿ ಪಟ್ಟಣದಲ್ಲಿ ಭಕ್ತಿಯ ವಾತಾವರಣ ನಿರ್ಮಿಸಿದ್ದು, ಬನಶಂಕರಿದೇವಿಯ ಜಾತ್ರಾ ಮಹೋತ್ಸವ ಭಕ್ತರ ಪಾಲಿಗೆ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು.

ಸುಮಂಗಲೆಯರ ಕುಂಭಮೇಳ, ಭಾವಚಿತ್ರ ಮೆರವಣಿಗೆ

ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಮಹಾದಾನಿ ಬಸಪ್ಪ ಶೆಡಗಟ್ಟಿಯವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭಮೇಳ ವಿಶೇಷ ಆಕರ್ಷಣೆಯಾಗಿತ್ತು. ಸಂಜೆ ದೇವಿಯ ಮಾಲೆ ಉತ್ಸವವು ವಿಜೃಂಭಣೆಯಿಂದ ನೆರವೇರಿತು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶರಣ ಪರಂಪರೆ ಮೇಲಿನ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ

ನಿರ್ಮೋಹಿ ಸಂತ, ಮಹಾನ್ ತತ್ವಜ್ಞಾನಿಯಾಗಿದ್ದ ಸಿದ್ಧೇಶ್ವರ ಶ್ರೀ

ಡಿ.೫-೬ ರಂದು ದೇಶಿ ತಳಿ ನಾಯಿಮರಿಗಳ ದತ್ತು ಅಭಿಯಾನ

ಕನಕದಾಸರ ಆದರ್ಶಗಳು ಸಮಾಜಕ್ಕೆ ದಾರಿದೀಪ :ಕೊಡಗೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶರಣ ಪರಂಪರೆ ಮೇಲಿನ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ನಿರ್ಮೋಹಿ ಸಂತ, ಮಹಾನ್ ತತ್ವಜ್ಞಾನಿಯಾಗಿದ್ದ ಸಿದ್ಧೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಸಂಭ್ರಮದಿಂದ ಜರುಗಿದ ಬನಶಂಕರಿದೇವಿ ರಥೋತ್ಸವ
    In (ರಾಜ್ಯ ) ಜಿಲ್ಲೆ
  • ಡಿ.೫-೬ ರಂದು ದೇಶಿ ತಳಿ ನಾಯಿಮರಿಗಳ ದತ್ತು ಅಭಿಯಾನ
    In (ರಾಜ್ಯ ) ಜಿಲ್ಲೆ
  • ಕನಕದಾಸರ ಆದರ್ಶಗಳು ಸಮಾಜಕ್ಕೆ ದಾರಿದೀಪ :ಕೊಡಗೆ
    In (ರಾಜ್ಯ ) ಜಿಲ್ಲೆ
  • ಸದಸ್ಯರಾಗಿ ಪವಿತ್ರಾ ಕುಂಬಾರ ನೇಮಕ
    In (ರಾಜ್ಯ ) ಜಿಲ್ಲೆ
  • ಮೂಢನಂಬಿಕೆ ತೊರೆದು ಕನಕದಾಸರ ಸಂದೇಶ ಪಾಲಿಸಿ
    In (ರಾಜ್ಯ ) ಜಿಲ್ಲೆ
  • ವಿಜೃಂಬಣೆಯಿಂದ ಜರುಗಿದ ಮಹಾಲಕ್ಷ್ಮಿ ಜಾತ್ರೆ
    In (ರಾಜ್ಯ ) ಜಿಲ್ಲೆ
  • ಯುವಕರೆ ದುಶ್ಚಟಗಳಿಂದ ದೂರವಿರಿ :ಪಿಎಸೈ ಯತೀಶ್
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಜ್ಞಾನದರ್ಶನ; ಗ್ರಾಮೀಣ ಸಾಕ್ಷ್ಯಚಿತ್ರ ವೀಕ್ಷಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.