ಜೀವ ವೈವಿಧ್ಯ
ಲೇಖನ
– ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಪಕ್ಷಿಗಳು ನಿಸರ್ಗದ ಬೆಲೆಬಾಳುವ ಆಸ್ತಿ ಎನ್ನಬಹುದು. ಪಕ್ಷಿಗಳ ಪ್ರಪಂಚವೇ ಅತ್ಯಂತ ಸುಂದರ ಮತ್ತು ವಿಸ್ಮಯ. ಅಂಕಿಅಂಶಗಳ ಪ್ರಕಾರ ಪ್ರಪಂಚದಲ್ಲಿ ಹತ್ತು ಸಾವಿರಕ್ಕೂ ಮಿಗಿಲಾದ ಜಾತಿಯ ಪಕ್ಷಿಗಳಿವೆ. ಪ್ರತಿಯೊಂದು ಹಕ್ಕಿಗೂ ತನ್ನದೇ ಆದ ವಿಶೇಷ ಆಕಾರ, ಬಣ್ಣ, ಮತ್ತು ಜೀವನ ಶೈಲಿಯಿದೆ. ನಮ್ಮ ಸುತ್ತಲಿರುವ ಹೆಚ್ಚಿನ ಪಕ್ಷಿಗಳು ತಮ್ಮ ರೆಕ್ಕೆಗಳ ಸಹಾಯದಿಂದ ಆಕಾಶದಲ್ಲಿ ಹಾರಬಲ್ಲವು. ಪಕ್ಷಿಗಳು ತಮ್ಮ ಮೊಟ್ಟೆಗಳನ್ನಿಟ್ಟು ಮರಿಗಳನ್ನು ರಕ್ಷಿಸಲು ಅಂದದ ಗೂಡುಗಳನ್ನು ನಿರ್ಮಿಸುತ್ತವೆ. ಅದೇ ರೀತಿ ಕೆಲ ಪಕ್ಷಿಗಳು ಹಣ್ಣು-ಕಾಳುಗಳನ್ನು ತಿಂದರೆ, ಹದ್ದು ಮತ್ತು ಗಿಡುಗ ಇತ್ಯಾದಿ ಪಕ್ಷಿಗಳು ಮಾಂಸಾಹಾರಿಗಳು. ಇಂತಹ ವೈವಿಧ್ಯಮಯ ಪಕ್ಷಿಗಳ ಪೈಕಿ ಬೂದು ತಲೆಯ ‘ಸ್ವಾಂಪ್‌ಹೆನ್’ ಪಕ್ಷಿಯ ನೋಟ ಮತ್ತು ಜೀವನ ಶೈಲಿಯ ಕಾರಣಕ್ಕೆ ವಿಭಿನ್ನವಾಗಿ ಗುರುತಿಸಿಕೊಂಡಿದೆ.
ಬೂದು ತಲೆಯ ಸ್ವಾಂಪ್‌ಹೆನ್ (ವೈಜ್ಞಾನಿಕ ಹೆಸರು
‘ಪೋರ್ಫಿರಿಯೊ ಪೋಲಿಯೊಸೆಫಾಲಸ್’) ಮಧ್ಯಪ್ರಾಚ್ಯ ಮತ್ತು ಭಾರತೀಯ ಉಪಖಂಡ, ದಕ್ಷಿಣ ಚೀನಾ & ಉತ್ತರ ಥೈಲ್ಯಾಂಡಲ್ಲಿ ಕಂಡುಬರುವ ಸ್ವಾಂಪ್‌ಹೆನ್‌ನ ಒಂದು ಪ್ರಬೇಧ. ಪ್ರಾರಂಭದಲ್ಲಿ ಇದನ್ನು ನೇರಳೆ ಸ್ವಾಂಪ್‌ಹೆನ್‌ನ ಉಪಜಾತಿ ಎಂದು ಪರಿಗಣಿಸಿದ್ದರೂ, ೨೦೧೫ರಲ್ಲಿ ಪೂರ್ಣ ಜಾತಿಯೆಂದು ಗುರುತಿಸಲಾಯಿತು. ಇದು ಜೌಗು ಪ್ರದೇಶ ಹಕ್ಕಿಯಾಗಿದ್ದು, ೪೩ ಸೆಂ.ಮೀ ಉದ್ದವಿರುತ್ತದೆ. ಇದು ಮಸುಕಾದ ಬೂದು ತಲೆ ಮತ್ತು ದಪ್ಪ ಕೆಂಪು ಕೊಕ್ಕನ್ನು ಹೊಂದಿರುತ್ತದೆ. ರೆಕ್ಕೆಗಳು ಹಸಿರು ಬಣ್ಣದ್ದಾಗಿದ್ದು, ಕಾಲುಗಳು ಕೆಂಪು ಬಣ್ಣದಿಂದ ಕೂಡಿರುತ್ತದೆ. ಇವುಗಳು ಜೌಗು ಪ್ರದೇಶಗಳು ಮತ್ತು ಸದಾ ತೇವಾಂಶದಿಂದ ಕೂಡಿರುವ ಕೊಳಗಳಲ್ಲಿ ಕಂಡುಬರುತ್ತದೆ. ಗಂಡು ಹಕ್ಕಿಗಳು ತನ್ನ ಕೊಕ್ಕಿನಲ್ಲಿ ನೀರಿನ ಕಳೆಗಳನ್ನು ಹಿಡಿದು ಹೆಣ್ಣು ಹಕ್ಕಿಯೆಡೆಗೆ ಜೋರಾಗಿ ನಗುತ್ತಾ ನಮಸ್ಕರಿಸುತ್ತಾ, ಪ್ರಣಯ ಪ್ರದರ್ಶನ ಮಾಡುತ್ತದೆ.

ಬೂದು ತಲೆಯ ಸ್ವಾಂಪ್‌ಹೆನ್ ‘ಪೋರ್ಫಿರಿಯೊ’ ಪ್ರಬೇಧದ ಹದಿಮೂರು ಜಾತಿಗಳ ಪೈಕಿ ಒಂದು. ಇದರಲ್ಲಿ ಒಟ್ಟು ಮೂರು ಉಪಜಾತಿಗಳಿವೆ. ಅವುಗಳೆಂದರೆ ಮೊದಲನೆಯದು, ‘ಪೋಲಿಯೊಸೆಫಾಲಸ್ ಲ್ಯಾಥಮ್’. ಇವು ಭಾರತ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) ಮತ್ತು ಶ್ರೀಲಂಕಾ ದಕ್ಷಿಣ ಚೀನಾ ಮತ್ತು ಉತ್ತರ ಥೈಲ್ಯಾಂಡಲ್ಲಿ ಕಾಣಸಿಗುತ್ತವೆ. ಎರಡನೆಯದು, ‘ಸೀಸ್ಟಾನಿಕಸ್ ಜರುಡ್ನಿ ಮತ್ತು ಹಾರ್ಮ್ಸ್’, ಇದು ಇರಾಕ್ ಮತ್ತು ದಕ್ಷಿಣ ಇರಾನ್ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ವಾಯುವ್ಯ ಭಾರತ ಹಾಗೂ ಫ್ಲೋರಿಡಾದಲ್ಲೂ ಕಾಣಸಿಗುತ್ತವೆ. ಮೂರನೆಯದು, ‘ಕ್ಯಾಸ್ಪಿಯಸ್ ಹಾರ್ಟರ್ಟ್’, ಇವು ಕ್ಯಾಸ್ಪಿಯನ್ ಸಮುದ್ರ, ವಾಯುವ್ಯ ಇರಾನ್ ಮತ್ತು ಟರ್ಕಿಗಳಲ್ಲಿ ಕಾಣಸಿಗುತ್ತವೆ.
ಆಕ್ರಮಣಕಾರಿ ಪ್ರಭೇದ

೧೯೯೦ರ ದಶಕದ ಉತ್ತರಾರ್ಧದಲ್ಲಿ ಫ್ಲೋರಿಡಾದ ಪೆಂಬ್ರೋಕ್ ಪೈನ್ಸ್ ಪಟ್ಟಣದಲ್ಲಿ ಗೂಡಿನಲ್ಲಿಟ್ಟು ಸಂತಾನೋತ್ಪತ್ತಿ ಮಾಡುವ ಮೂಲಕ ಪಕ್ಷಿಸಾಕಣೆಯ ಭಾಗವಾಗಿ ಬೂದು ತಲೆಯ ಸ್ವಾಂಪ್‌ಹೆನ್ ಪಕ್ಷಿಗಳನ್ನು ಉತ್ತರ ಅಮೆರಿಕಾಕ್ಕೆ ಪರಿಚಯ ಮಾಡಲಾಯಿತು. ಇವುಗಳ ಆಕ್ರಮಣಕಾರಿ ಮನೋಭಾವದ ಕಾರಣಕ್ಕೆ ವನ್ಯಜೀವಿ ಜೀವಶಾಸ್ತ್ರಜ್ಞರು ಈ ಪಕ್ಷಿಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು, ಆದರೆ ಅವುಗಳ ಸಂಖ್ಯೆಯು ಅಗಾಧವಾಗಿದ್ದು, ಇಲ್ಲಿನ ಪಕ್ಷಿವಿಜ್ಞಾನ ಅಧಿಕಾರಿಗಳು ಸ್ವಾಂಪ್‌ಹೆನ್ ಫ್ಲೋರಿಡಾದ ಪಕ್ಷಿಸಂಕುಲದ ಒಂದು ಭಾಗವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಈ ಪಕ್ಷಿಗಳನ್ನು ೨೦೧೩ರಲ್ಲಿ ‘ಅಮೇರಿಕನ್ ಬರ್ಡಿಂಗ್ ಅಸೋಸಿಯೇಷನ್’ ಪಟ್ಟಿಗೆ ಸೇರಿಸಲಾಗಿದೆ.
ಗ್ರೇ ಸ್ವಾಂಪ್‌ಹೆನ್ (ಉಚಿಡಿಥಿ Sತಿಚಿmಠಿ heಟಿ) ಎಂದು ಕರೆಯಲಾಗುವ ಈ ಪಕ್ಷಿಗಳು ಜಮ್ಮುವಿನ ಪ್ರಸಿದ್ಧ ಆರ್ದ್ರಭೂಮಿ ಘರಾನಾ ವೆಟ್‌ಲ್ಯಾಂಡ್‌ನಲ್ಲಿ (ಉhಚಿಡಿಚಿಟಿಚಿ Weಣಟಚಿಟಿಜ) ಹೆಚ್ಚು ಕಾಣಿಸುವ ಒಂದು ಸುಂದರ ಜಲಪಕ್ಷಿ. ಇವು ಕೋಳಿಯ ಗಾತ್ರದಷ್ಟಿದ್ದು, ಇದರ ಇಡೀ ದೇಹವು ಆಕರ್ಷಕ ನೀಲಿ-ನೇರಳೆ (ಃಟuish-Puಡಿಠಿಟe) ಬಣ್ಣ ಮತ್ತು ತಲೆಯ ಭಾಗವು ತಿಳಿಗೆಂಪು ಬಣ್ಣದಲ್ಲಿರುತ್ತದೆ. ಇವುಗಳ ಗಟ್ಟಿಯಾದ ಕೊಕ್ಕು ಮತ್ತು ಹಣೆಯ ಮೇಲಿರುವ ಕವಚವು (ಈಡಿoಟಿಣಚಿಟ shieಟಜ) ಗಾಢ ಕೆಂಪು ಬಣ್ಣದಲ್ಲಿರುತ್ತವೆ. ಇದರ ಕಾಲುಗಳು ಮತ್ತು ಉದ್ದನೆಯ ಬೆರಳುಗಳು ಕೆಂಪು ಬಣ್ಣದಲ್ಲಿದ್ದು, ಜೌಗು ಪ್ರದೇಶದ ಜಲಸಸ್ಯಗಳ ಮೇಲೆ ಸುಲಭವಾಗಿ ನಡೆಯಲು ಸಹಾಯ ಮಾಡುತ್ತವೆ. ಇವು ನಡೆಯುವಾಗ ತನ್ನ ಬಾಲವನ್ನು ಮೇಲೆ ಕೆಳಗೆ ಆಡಿಸುತ್ತವೆ. ಆಗ ಅವುಗಳ ಬಾಲದ ಕೆಳಗಿರುವ ಬಿಳಿ ಬಣ್ಣದ ಗರಿಗಳು ಎದ್ದು ಕಾಣುತ್ತವೆ.
ಘರಾನಾ ಪಕ್ಷಿಧಾಮ
ಜಮ್ಮು ನಗರದಿಂದ ಸುಮಾರು ೩೫ ಕಿ.ಮೀ ದೂರದಲ್ಲಿ ಆರ್.ಎಸ್ ಪುರದಲ್ಲಿ ‘ಘರಾನಾ ಆರ್ದ್ರಭೂಮಿ’ (ಉhಚಿಡಿಚಿಟಿಚಿ Weಣಟಚಿಟಿಜ) ಎನ್ನುವ ಜೌಗು ಪ್ರದೇಶವಿದೆ. ಚಳಿಗಾಲದಲ್ಲಿ ಇಲ್ಲಿಗೆ ಬರುವ ಸಾವಿರಾರು ವಲಸೆ ಹಕ್ಕಿಗಳ ಜೊತೆಗೆ ಈ ‘ಸ್ವಾಂಪ್‌ಹೆನ್’ ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದು. ಪ್ರತೀ ವರ್ಷ ಅಕ್ಟೋಬರ್‌ನಿಂದ ಮಾರ್ಚ್ವರೆಗೆ ೬,೦೦೦ ಕ್ಕೂ ಹೆಚ್ಚು ಸ್ವಾಂಪ್‌ಹೆನ್ ಪಕ್ಷಿಗಳು ಇಲ್ಲಿಗೆ ವಲಸೆ ಬರುವುದರಿಂದ ಇದು ‘ಪಕ್ಷಿ ವೀಕ್ಷಕರ ಸ್ವರ್ಗ’ವಾಗಿದೆ. ಪ್ರತೀ ವರ್ಷವೂ ಸಾವಿರಾರು ವಲಸೆ ಹಕ್ಕಿಗಳು ಜಮ್ಮುವಿನ ಅಂತರರಾಷ್ಟಿçÃಯ ಗಡಿಯ ಬಳಿಯ ಘರಾನಾ ಜೌಗು ಭೂಮಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಬರುತ್ತವೆ. ಇಲ್ಲಿಗೆ ಆಗಮಿಸುವ ಪಕ್ಷಿವೀಕ್ಷಕರು ಮತ್ತು ಸಂದರ್ಶಕರಿಗೆ ವನ್ಯಜೀವಿ ಇಲಾಖೆ ಪಕ್ಷಿವೀಕ್ಷಣೆಯ ವ್ಯವಸ್ಥೆಯನ್ನು ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಭಾಷೆಯಲ್ಲಿ (ಕಾಶ್ಮೀರಿ) ಇದನ್ನು ‘ವಾನ್ ಟೆಕ್’ (Wಚಿಟಿ ಣeಛಿh) ಎಂದು ಮತ್ತು ಹಿಂದಿಯಲ್ಲಿ ಇದನ್ನು ‘ಜಾಮುನಿ ಜಲಮುರ್ಗಿ’ ಎನ್ನುತ್ತಾರೆ. ಇವು ಸಸ್ಯಹಾರಿಗಳಾಗಿದ್ದು, ಜಲಸಸ್ಯಗಳ ಮೃದು ಚಿಗುರುಗಳು ಮತ್ತು ಕಾಂಡಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಸಣ್ಣ ಕೀಟಗಳು, ಮೃದ್ವಂಗಿಗಳು (Sಟಿಚಿiಟs) ಮತ್ತು ಕಪ್ಪೆಗಳನ್ನೂ ತಿನ್ನುತ್ತವೆ. ಇವು ಸಣ್ಣದಾಗಿ ಗರ‍್ರ್ ಗರ‍್ರ್ ಎನ್ನುವ ಮೂಗಿನ ಧ್ವನಿ ಅಥವಾ ಕಪ್ಪೆಗಳು ಕೂಗುವಂತಹ ಕರ್ಕಶ ಶಬ್ದಗಳನ್ನು ಮಾಡುತ್ತವೆ. ಇವು ಜೊಂಡು ಹುಲ್ಲು ಮತ್ತು ನೀರಿನಲ್ಲಿ ತೇಲುವ ಸಸ್ಯಗಳ ಮೇಲೆ ನಡೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಇವು ನೀರಿನ ಮೇಲಿರುವ ದಟ್ಟವಾದ ಜೊಂಡು ಅಥವಾ ಹುಲ್ಲಿನ ಪೊದೆಗಳ ನಡುವೆ ಇವು ಗೂಡುಗಳನ್ನು ನಿರ್ಮಿಸುತ್ತವೆ.
ದಟ್ಟವಾದ ಹುಲ್ಲು ಇರುವ ನೀರಿನ ಅಂಚುಗಳ ಬಳಿ ಈ ಪಕ್ಷಿಗಳು ಹೆಚ್ಚಾಗಿ ಕಾಣಿಸುವುದರಿಂದ ಪಕ್ಷಿಗಳನ್ನು ಬೆದರಿಸದೆ ಸುರಕ್ಷಿತ ದೂರದಿಂದ ಸ್ಪಷ್ಟವಾಗಿ ನೋಡಲು ಬೈನಾಕ್ಯುಲರ್ ಬಳಸುವುದು ಉತ್ತಮ. ಇವುಗಳು ಪ್ರಕೃತಿಯ ಅಮೂಲ್ಯ ಜೀವಸಂಕುಲ ಆಗಿದ್ದು, ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಿ ಮಾನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವು ಆಹಾರ ಸರಪಳಿಯ ಪ್ರಮುಖ ಭಾಗವಾಗಿದ್ದು, ಕೀಟಗಳು ಮತ್ತು ಸಸ್ಯಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ. ಇವು ಹೂವಿನ ಮಕರಂದವನ್ನು ಹೀರಿ ಪರಾಗಸ್ಪರ್ಶ ಮಾಡಿ, ಸಸ್ಯಗಳ ಸಂತಾನೋತ್ಪತ್ತಿ ಮತ್ತು ಹಣ್ಣು ಮತ್ತು ಕಾಯಿಗಳ ಇಳುವರಿ ಹೆಚ್ಚಿಸುತ್ತದೆ. ಹಾಗಾಗಿ ಸ್ವಾಂಪ್‌ಹೆನ್ ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ.


