ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವೀರಶೈವ ಧರ್ಮದಲ್ಲಿ ನಿಶ್ಚಯದ ದಿಟ್ಟ ನಿರ್ಧಾರಗಳಿವೆ ಆದ್ದರಿಂದಲೇ ಇಂದಿಗೂ ತನ್ನತನ ಉಳಿಸಿಕೊಂಡು ಬೆಳೆದು ಬಂದಿದೆ ಎಂದು ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಸಿಂದಗಿ ಸಾರಂಗಮಠದ ಗುರು ಪಟ್ಟಾಧಿಕಾರ ಹಾಗೂ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪತ್ರಿಕೆ ಬಿಡುಗಡೆಗೊಳಿಸುವ ಮೂಲಕ ಆಮಂತ್ರಣ ನೀಡಿದರು. ಸುಮಾರು ಮೂವತ್ತು ವರ್ಷಗಳ ನಂತರ ಡಿ.೧೩, ೧೪ ರಂದು ಜರುಗುತ್ತಿರುವ ಪಂಚ ಪೀಠಾಧೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಎಲ್ಲರೂ ತನು, ಮನದಿಂದ ಆಗಮಿಸಿ ಶೋಭೆ ತರಬೇಕು ಎಂದರು.
ಸಿAದಗಿ ಪಟ್ಟಣದ ಗಣ್ಯ ವ್ಯಾಪಾರಿ ಅಶೋಕ ವಾರದ ಹಾಗೂ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿದರು.
ಜಡಿಮಠದ ಜಡಿಸಿದ್ಧೇಶ್ವರಶ್ರೀ ಹಾಗೂ ಅವೋಗೇಶ್ವರಧಾಮದ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಪಂಚಾಚಾರ್ಯ ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ, ಡಾ.ಮಹಾಂತೇಶ ಹಿರೇಮಠ, ಡಾ.ಮಂಜುನಾಥ ಮಠ, ಎಂ.ಆರ್.ಶಿರಸAಗಿಮಠ, ಮಲ್ಲನಗೌಡ ಪಾಟೀಲ(ಬ್ಯಾಕೊಡ), ಶ್ರೀಶೈಲ ಕಬ್ಬಿನ, ಕಾಶೀನಾಥ ಸಾಲಕ್ಕಿ, ಕೆ.ಎಸ್.ಕೋರಿ, ಉಮಾಕಾಂತ ಸೊನ್ನದ, ಬಂಡೆಪ್ಪಗೌಡ ಬಿರಾದಾರ, ಸಂಗಪ್ಪ ತಡವಲ್, ಕೆ.ಎಮ್.ನಂದಿ, ಪಿ.ಎಸ್.ಮಿಂಚನಾಳ, ಜಿ.ಎಸ್.ಬಿರಾದಾರ, ಸೋಮಶೇಖರ ಹಿರೇಮಠ, ಆನಂದ ಪರದೇಶಿಮಠ, ರಮೇಶ ಮಶಾನವರ, ಕಾಶೀನಾಥ ಹಿರೇಮಠ, ಆನಂದ ಜಡಿಮಠ , ಗಣೇಶ ಹಿರೇಮಠ, ಸಿದ್ದು ಆನಂದಿ,ಬಸವರಾಜ ಬುದ್ನಿ, ಭದ್ರಯ್ಯ ಮಲ್ಲಿಕಾರ್ಜುನಮಠ, ಅಪ್ಪೋಜಿ ದೇಸಾಯಿ, ವೀರೇಶ ಬುದ್ನಿ, ಶಿವಯ್ಯ ವಸ್ತçದ ಇದ್ದರು.

