ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷಿ ಮಹಾವಿದ್ಯಾಲಯ, ವಿಜಯಪುರದಲ್ಲಿ ವಿವಿಧ ವಿಷಯಗಳ ೭ ಗುತ್ತಿಗೆ ಹಾಗೂ ಅರೆಕಾಲಿಕ ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ನೇಮಕಾತಿಯನ್ನು ನಿಗದಿಪಡಿಸಲಾಗಿದೆ. ೧೭೯ ದಿನಗಳ ಅವಧಿಗೆ ಮೀರದಂತೆ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನ.೩೦ರಂದು ಬೆಳಿಗ್ಗೆ ೯ ಗಂಟೆಗೆ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಅವರ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುವುದು.
ಅಂದು ಬೆಳಿಗ್ಗೆ ೯ ಗಂಟೆಗೆ ಕೃಷಿ ಕೀಟಶಾಸ್ತ್ರ, ೧೦ ಗಂಟೆಗೆ ತಳಿ ವಿಜ್ಞಾನ ಮತ್ತು ಸಸ್ಯ ತಳಿ ಅಭಿವೃದ್ಧಿ, ೧೧ ಗಂಟೆಗೆ ಸಸ್ಯ ರೋಗಶಾಸ್ತ್ರ ಹಾಗೂ ಮಧ್ಯಾಹ್ನ ೧೨ ಗಂಟೆಗೆ ಮಣ್ಣು ವಿಜ್ಞಾನ ವಿಷಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂದರ್ಶನ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಕೃಷಿ ವಿಸ್ತರಣೆ, ೩ ಗಂಟೆಗೆ ಜೈವಿಕ ತಂತ್ರಜ್ಞಾನ ಹಾಗೂ ಸಂಜೆ ೪ ಗಂಟೆಗೆ ಮನೋವಿಜ್ಞಾನ, ಗ್ರಾಮೀಣ ಸಮಾಜಶಾಸ್ತ್ರ ವಿಷಯದ ಅರೆಕಾಲಿಕ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂದರ್ಶನ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯದ ಜಾಲತಾಣ ತಿತಿತಿ uಚಿsಜ.iಟಿ ಗೆ ಭೇಟಿ ನೀಡಬಹುದು ಎಂದು ಕೃಷಿ ಮಹಾವಿದ್ಯಾಲಯ ವಿದ್ಯಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
