Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ
(ರಾಜ್ಯ ) ಜಿಲ್ಲೆ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

2027 ಜನವರಿ ಬೆರಗು ಪ್ರಕಾಶನದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಉದಯರಶ್ಮಿ ದಿನಪತ್ರಿಕೆ

ಆಲಮೇಲ: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು 2026ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ದಿ. ಎಂ.ಸಿ. ಮನಗೂಳಿ ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಆಯ್ಕೆಯಾಗಿದೆ. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಗೆ ಮೂಲತಃ ವಿಜಯಪುರ ಜಿಲ್ಲೆಯವರಾದ, ಪ್ರಸ್ತುತ ಗದಗದಲ್ಲಿ ನೆಲೆಸಿರುವ ಪ್ರೊ. ಚಂದ್ರಶೇಖರ ವಸ್ತ್ರದ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಬೆರಗು ಪ್ರಕಾಶನದ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದ್ದಾರೆ.
2026ನೇ ಸಾಲಿನ ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಬೆಂಗಳೂರಿನ ಡಾ. ಬಸವರಾಜ ಸಾದರ ಅವರ ‘ಅರ್ಥಾನ್ವೇಷಣೆ’ ವಿಮರ್ಶಾ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ. ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ದತ್ತಿ 2025ನೇ ಸಾಲಿನ ಬೆರಗು ಪುಸ್ತಕ ಪ್ರಶಸ್ತಿಗೆ ಡಾ. ರಾಜಶೇಖರ ಹಳೆಮನೆ ಅವರ ‘ಮಾಯೆಯೆಂಬುದು ಮಾಯೆಯಲ್ಲ’ ಕಥಾಸಂಕಲನ ಆಯ್ಕೆಯಾಗಿದೆ.
ಖ್ಯಾತ ಕವಿ, ಕಥೆಗಾರ ವಾಸುದೇವ ನಾಡಿಗ್ ಹಾಗೂ ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಹಸ್ತಪ್ರತಿ ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಬೆರಗು ಪ್ರಕಾಶನ ಪ್ರಕಟಿಸಲಿದೆ. ಪುಸ್ತಕ ಪ್ರಶಸ್ತಿಯು ₹5 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ.
2027ರ ಜನವರಿ ಮೊದಲ ವಾರ ಕಡಣಿಯಲ್ಲಿ ನಡೆಯಲಿರುವ ಬೆರಗು ಪ್ರಕಾಶನದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ವಿಜಯಲಕ್ಷ್ಮಿ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಶಾಸಕ ಚಿಮ್ಮನಕಟ್ಟಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?
    In ವಿಶೇಷ ಲೇಖನ
  • ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ
    In (ರಾಜ್ಯ ) ಜಿಲ್ಲೆ
  • ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ
    In (ರಾಜ್ಯ ) ಜಿಲ್ಲೆ
  • ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಶಾಸಕ ಚಿಮ್ಮನಕಟ್ಟಿ
    In (ರಾಜ್ಯ ) ಜಿಲ್ಲೆ
  • ರಾಹುಲ್ ಟೀಕೆಗೆ ತಮ್ಮದೇ ಪಕ್ಷದವರಿಂದ ತಕ್ಕ ಉತ್ತರ :ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ :ಸಚಿವ ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಗ್ರೇಡ್-೧ ಕಾರ್ಯದರ್ಶಿಗಳ ಮುಂಬಡ್ತಿ ಕೋಟಾ ಶೇ.೪೦ಕ್ಕೆ ಹೆಚ್ಚಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಗದ್ದನಕೇರಿ ಜಾತ್ರೆ; ಕೃಷ್ಣಾ ತೀರದಲ್ಲಿ ಭಕ್ತರ ದಂಡು
    In (ರಾಜ್ಯ ) ಜಿಲ್ಲೆ
  • ಆಲಮೇಲ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟವಿಲ್ಲದೆ ಮಕ್ಕಳು ಉಪವಾಸ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.