ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಸರಕಾರಿ ಶಾಲೆಯ ಮಕ್ಕಳು ಬಿಸಿ ಊಟವಿಲ್ಲದೆ ಉಪವಾಸ, ಇಂದಿರಾ ಕ್ಯಾಂಟಿನಿನಲ್ಲಿ ಉಟ ಮಾಡಿದ ಮಕ್ಕಳು, ಪಟ್ಟಣದ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ 154 ವಿದ್ಯಾರ್ಥಿನಿಯರಿಗೆ ಮದ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಮಕ್ಕಳು ಮತ್ತು ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ತಮಗೆ ಸಂಬಂಧವಿಲ್ಲದಂತೆ ನಿಷ್ಕಾಳಜಿ ತೋರಲಾಗುತ್ತಿದೆ. ಬೇಸತ್ತ ಮಕ್ಕಳು ಪಾಲಕರ ಗಮನಕ್ಕೆ ತಂದಿದ್ದು ಗುರುವಾರ ಕೆಲವು ಪಾಲಕರು ಮತ್ತು ವಿವಿದ ಸಂಘಟನೆಗಳ ಶಾಲೆಗೆ ಬೇಟಿ ನೀಡಿ ಪರಿಶೀಲಿಸಿದ್ದಾಗ ಅಲ್ಲಿನ ಅವ್ಯವಸ್ಥೆ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ.
ರೈತಪರ ಸಂಘಟನೆ ಮತ್ತು ದಲಿತ ಸಂಘಟನೆ ಮುಖಂಡ ಶಶಿಧರ ನಾಯ್ಕೋಡಿ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಸಕ್ತ ವರ್ಷದ ಶಾಲಾ ಆರಂಭದಿಂದಲೂ ಇಲ್ಲಿನ ಶಾಲಾ ಮಕ್ಕಳಿಗೆ ಸರಕಾರ ನೀಡುತ್ತಿರುವ ಬಿಸಿಊಟ ಸರಿಯಾಗಿ ನೀಡುತ್ತಿಲ್ಲ, ನವೇಂಬರ 1 ರಿಂದ ಗ್ಯಾಸ ಖಾಲಿಯಾಗಿದ್ದು ಶಾಲೆಯಲ್ಲಿನ ಹಳೆಯ ಟೇಬಲ್ ಮತ್ತು ಖುರ್ಚಿ ಮುರಿದು ಅದರಿಂದ ಅಡುಗೆ ಮಾಡಲಾಗುತ್ತಿದೆ. ಅದೂ ಅರ್ದಮರ್ದ ಮಾಡಿ ಕೆಲವು ಮಕ್ಕಳಿಗೆ ಮಾತ್ರ ಊಟ ಸಿಕ್ಕರೆ ಇನ್ನು ಕೆಲವು ಮಕ್ಕಳು ಹಾಗೆ ಉಪವಾಸವಿರುವುದು ನಮ್ಮ ಗಮನಕ್ಕೆಬಂದಿದ್ದು ಉಪವಾಸ ಇದ್ದ ಮಕ್ಕಳಿಗೆ ಇಂದ್ರಾ ಕ್ಯಾಂಟಿನಲ್ಲಿ ಊಟ ಮಾಡಿಸಲಾಗಿದೆ ಎಂದರು.
ಈ ಬಗ್ಗೆ ಮುಖ್ಯೆ ಶಿಕ್ಷಕರು, ಶಿಕ್ಷಣ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವಿಚಾರಿಸಿದರೆ ತಮಗೆ ಸಂಬಂದವಿಲ್ಲದಂತೆ ಮಾತನಾಡುತ್ತಿದ್ದಾರೆ. ನಾಳೆ ಶುಕ್ರವಾರ ಇಲ್ಲಿನ ಮುಖ್ಯೆ ಶಿಕ್ಷಕರನ್ನು ಅಮಾನತ್ತು ಮಾಡಿ ತಕ್ಷಣವೆ ಶಾಲಾ ಮಕ್ಕಳಿಗೆ ಸರಿಯಾಗಿ ಮದ್ಯಾಹನದ ಬೀಸಿ ಊಟದ ವ್ಯೆವಸ್ಥೆ ಕಲ್ಪಿಸಬೇಕು ಅದಕ್ಕಾಗಿ ನಾಳೆ ಶುಕ್ರವಾರ ಮಕ್ಕಳ ಪಾಲಕರೊಂದಿಗೆ ತರಗತಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂದ ರಾಜು ಮೇತ್ರಿ, ರೈತ ಸಂಘದ ಮುಖಡರಾದ ಇಮ್ರಾನ ಯಲಗಾರ, ನಿಂಗು ಕುಂಟೋಜಿ, ನಭಿ ಮೇಲಿಮನಿ ಇದ್ದರು.
” ಈ ವರ್ಷ ಶಾಲೆ ಆರಂಭದಿಂದಲೂ ನಮಗೆ ಮೊಟ್ಟೆ ನೀಡಿಲ್ಲ, ಬಾಳೆಹಣ್ಣು ಒಂದರಲ್ಲೆ ಇಬ್ಬರು ಹಂಚಿಕೊಂಡು ತಿನ್ನುತ್ತೇವೆ. ಅದು ಎಲ್ಲರಿಗೂ ಸಿಗುವದಿಲ್ಲ. ಸಾಂಬರ ಬರಿ ತಿಳಿ ನೀರಿನಂತೆ ಇದೆ ಎಂದು ಮುಖ್ಯ ಶಿಕ್ಷಕರಿಗೆ ಹೇಳಿದರೆ “ಸುಮ್ಮನೆ ತಿನ್ನರಿ ಇಲ್ಲಾದರೆ ಬಿಡ್ರಿ” ಎಂದು ಬೆದರಿಸುತ್ತಾರೆ. ಇದರಿಂದ ಬೆಸರಗೊಂದು ಕೆಲವರು ಆಲಮೇಲದವರು ಮನೆಗೆ ಹೋಗಿ ಊಟ ಮಾದಿ ಬರುತ್ತಾರೆ. ಹಳ್ಳಿಯಿಂದ ಬಂದವರು ಹಾಗೆ ಉಪವಾಸವೆ ಇರುತ್ತಾರೆ. ಮತ್ತು ಶಾಲಾ ಮಕ್ಕಳು ಮತ್ತು ಶಿಕ್ಷಕರ ಶೌಚಾಲಯಗಳು ನಮ್ಮಿಂದಲೆ ಸ್ವಚ್ಚಗೊಳಿಸುವುದು ಮಾಡಿಸುತ್ತಾರೆ.”
– ಶಾಲಾ ವಿದ್ಯಾರ್ಥಿಗಳು
ಆಲಮೇಲ
“ಬಿಸಿ ಊಟದ ವ್ಯವಸ್ಥೆ ಮತ್ತು ಮುಖ್ಯ ಶಿಕ್ಷಕರು ವರ್ತನೆ ಬಗ್ಗೆ ಸಂಬಂದಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿಗೆ ಇನ್ನುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಶಾಲೆಯ ಶಿಕ್ಷಕ ಸಿಬ್ಬಂದಿ ಕೊಟ್: ಸಿ.ಆರ್.ಪಿ ಮತ್ತು ಶಿಕ್ಷಣ ಸಂಯೋಜಕರಿಂದ ಶಾಲೆಗೆ ಕಳುಹಿಸಿ ಅಲ್ಲಿನ ವಾಸ್ತವ ಮಾಹಿತಿ ಪಡೆದು ಮುಖ್ಯ ಶಿಕ್ಷಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವದು.”
– ಟಿ.ಎಸ್. ಅಲಗೂರ
ಕ್ಷೇತ್ರ ಶಿಕ್ಷಣಾಧಿಕಾರಿ ಸಿಂದಗಿ.

