ಉದಯರಶ್ಮಿ ದಿನಪತ್ರಿಕೆ
ಬಾದಾಮಿ: ಚಾಲುಕ್ಯರ ನಾಡಿನ ಗಾರ್ಡನ್ ಕಾಲೋನಿಯಲ್ಲಿ ನ.೧೪ ರಂದು ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಶಾಸಕ ಬಿ.ಬಿ.ಚಿಮ್ಮನಕಟ್ಟಿ ಕಾಮಗಾರಿಗೆ ಚಾಲನೆ ನೀಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ, ನಿಗದಿತ ಅವಧಿಯೊಳಗೆ ಕಾರ್ಯ ಪೂರೈಸಬೇಕೆಂದು ಕಿವಿಮಾತು ಹೇಳಿದರು.
ಕಾಮಗಾರಿ ಉದ್ಘಾಟನೆ ಸಂದರ್ಭ ಬಾದಾಮಿ ತಾಲೂಕಿನ ಭಾಜಪ ಅಧ್ಯಕ್ಷ ರಾಜೂ ಕಾಚಟ್ಟಿ, ಕಾಲೋನಿಯ ಅಧ್ಯಕ್ಷ ಎಸ್.ಎನ್.ಪರೂತಿ, ಬಂದೇ ನವಾಜ್ ಕೆಸರಟ್ಟಿ, ಶಂಕ್ರಪ್ಪ ತೆಗ್ಗಿನಮನಿ, ಆರ್.ಆರ್.ಪಾಟೀಲ ಸೇರಿದಂತೆ ಬಡಾವಣೆಯ ಗುರುಹಿರಿಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

