Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಾಹುಲ್ ಟೀಕೆಗೆ ತಮ್ಮದೇ ಪಕ್ಷದವರಿಂದ ತಕ್ಕ ಉತ್ತರ :ಜಿಗಜಿಣಗಿ
(ರಾಜ್ಯ ) ಜಿಲ್ಲೆ

ರಾಹುಲ್ ಟೀಕೆಗೆ ತಮ್ಮದೇ ಪಕ್ಷದವರಿಂದ ತಕ್ಕ ಉತ್ತರ :ಜಿಗಜಿಣಗಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ‘ಫೋನ್ ಕದ್ದಾಲಿಕೆ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪ ರಾಜಕೀಯ ಪ್ರಚಾರದ ಮತ್ತೊಂದು ಹತಾಶ ಪ್ರಯತ್ನವಾಗಿದೆ’ ಎಂದು ಲೇವಡಿ ಮಾಡಿರುವ ಸಂಸದ ರಮೇಶ ಜಿಗಜಿಣಗಿ ಅವರು, ‘ಈ ಆರೋಪಕ್ಕೆ ಅವರದೇ ಪಕ್ಷದ ಹಿರಿಯ ನಾಯಕ ಸ್ಯಾಮ್ ಪಿಟ್ರೋಡಾ ಅವರ ಹೇಳಿಕೆಯೇ ತಕ್ಕ ಉತ್ತರ ನೀಡಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಪ್ರಧಾನಿ ಮೋದಿ ಅವರು ಫೋನ್ ಕದ್ದಾಲಿಕೆ ಮಾಡುವುದಿಲ್ಲ. ಅವರು ಕಂಪ್ಯೂಟರ್ ಮುಂದೆ ಕುಳಿತು ಇಂತಹ ಕೆಲಸ ಮಾಡುವವರಲ್ಲ ಎಂದು ಪಿಟ್ರೋಡಾ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರೇ ರಾಹುಲ್ ಗಾಂಧಿಯವರ ಆರೋಪದಿಂದ ದೂರ ಸರಿದಿರುವಾಗ, ಇನ್ನಾದರೂ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮದೇ ಪಕ್ಷದ ಹಿರಿಯ ನಾಯಕರ ಹೇಳಿಕೆಯನ್ನು ಕೇಳಿಸಿಕೊಳ್ಳದಷ್ಟು ರಾಹುಲ್ ಗಾಂಧಿ ರಾಜಕೀಯ ಅಹಂಕಾರ ಬೆಳೆಸಿಕೊಂಡಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಂದಲ್ಲ ಒಂದು ವಿವಾದ ಸೃಷ್ಟಿಸುವುದು, ಆಧಾರರಹಿತ ಆರೋಪ ಮಾಡುವುದು, ಬಳಿಕ ಅದಕ್ಕೆ ಸಮರ್ಪಕ ದಾಖಲೆ ನೀಡದೆ ಮತ್ತೊಂದು ಆರೋಪದತ್ತ ಹೊರಳುವುದು ಅವರ ರಾಜಕೀಯ ಶೈಲಿಯಾಗಿದೆ. ಕಳೆದ ಒಂದು ದಶಕದಿಂದ ಮೋದಿ ಅವರ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತ ಬಂದಿದ್ದಾರೆ. ಆದರೆ ದೇಶದ ಜನತೆ ಪ್ರತಿಬಾರಿಯೂ ತಮ್ಮ ಮತದಾನದ ಮೂಲಕ ಇಂತಹ ರಾಜಕೀಯ ಆರೋಪಗಳಿಗೆ ಉತ್ತರ ನೀಡಿದ್ದಾರೆ’ ಎಂದು ಜಿಗಜಿಣಗಿ ತಿಳಿಸಿದ್ದಾರೆ.
‘ಕಾಂಗ್ರೆಸ್ ಪಕ್ಷಕ್ಕೆ ಈಗ ನಾಯಕತ್ವದ ಬಿಕ್ಕಟ್ಟು ಮಾತ್ರವಲ್ಲ, ವಿಶ್ವಾಸಾರ್ಹತೆಯ ಬಿಕ್ಕಟ್ಟೂ ಎದುರಾಗಿದೆ. ಗಾಂಧಿ ಕುಟುಂಬದ ರಾಜಕೀಯದಲ್ಲಿ ಆರೋಪಗಳೇ ಅಸ್ತ್ರವಾಗಿವೆ. ಪ್ರಧಾನಿ ಮೋದಿಯವರ ಜನಪ್ರಿಯತೆ, ಆಡಳಿತದ ಸಾಧನೆ ಮತ್ತು ದೇಶದ ಅಭಿವೃದ್ಧಿಯ ಪಯಣವನ್ನು ಎದುರಿಸಲು ಸಾಧ್ಯವಾಗದೆ ವೈಯಕ್ತಿಕ ಆರೋಪಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ’ ಎಂದಿದ್ದಾರೆ.
‘ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುವುದರಲ್ಲಿ ತಪ್ಪಿಲ್ಲ. ಆದರೆ ದೇಶದ ಜನರ ವಿಶ್ವಾಸ ಗಳಿಸದೆ, ಸಂಸತ್ತಿನಲ್ಲಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದೆ, ಪ್ರತಿಯೊಂದು ವಿಷಯದಲ್ಲೂ ಆರೋಪಗಳನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಪ್ರಧಾನಿಯಾಗಲು ಸಾಧ್ಯವಿಲ್ಲ. ಪ್ರಧಾನಿ ಹುದ್ದೆ ಎಂಬುದು ಕೇವಲ ಅಧಿಕಾರದ ಕನಸಲ್ಲ; ಅದು ದೇಶದ ಜನರ ವಿಶ್ವಾಸ, ಜವಾಬ್ದಾರಿ ಮತ್ತು ಸಮರ್ಥ ನಾಯಕತ್ವದ ಪ್ರತೀಕ. ಕಾಂಗ್ರೆಸ್ ಪಕ್ಷದ ರಾಜಕೀಯ ಭವಿಷ್ಯವನ್ನು ಉಳಿಸಬೇಕಾದರೆ ಮೊದಲು ಗಾಂಧಿ ಕುಟುಂಬದ ಸುತ್ತ ಸುತ್ತುವ ರಾಜಕಾರಣದಿಂದ ಹೊರಬರಬೇಕು. ದೇಶದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕಾರಣ ಮಾಡಬೇಕು. ಇಲ್ಲವಾದರೆ ಈಗಾಗಲೇ ರಾಜಕೀಯವಾಗಿ ಕುಸಿತದ ಹಾದಿಯಲ್ಲಿರುವ ಕಾಂಗ್ರೆಸ್ ಪಕ್ಷ ಮತ್ತಷ್ಟು ನಿರ್ನಾಮದತ್ತ ಸಾಗುವುದು ನಿಶ್ಚಿತ’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?
    In ವಿಶೇಷ ಲೇಖನ
  • ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ
    In (ರಾಜ್ಯ ) ಜಿಲ್ಲೆ
  • ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ
    In (ರಾಜ್ಯ ) ಜಿಲ್ಲೆ
  • ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಶಾಸಕ ಚಿಮ್ಮನಕಟ್ಟಿ
    In (ರಾಜ್ಯ ) ಜಿಲ್ಲೆ
  • ರಾಹುಲ್ ಟೀಕೆಗೆ ತಮ್ಮದೇ ಪಕ್ಷದವರಿಂದ ತಕ್ಕ ಉತ್ತರ :ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ :ಸಚಿವ ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಗ್ರೇಡ್-೧ ಕಾರ್ಯದರ್ಶಿಗಳ ಮುಂಬಡ್ತಿ ಕೋಟಾ ಶೇ.೪೦ಕ್ಕೆ ಹೆಚ್ಚಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಗದ್ದನಕೇರಿ ಜಾತ್ರೆ; ಕೃಷ್ಣಾ ತೀರದಲ್ಲಿ ಭಕ್ತರ ದಂಡು
    In (ರಾಜ್ಯ ) ಜಿಲ್ಲೆ
  • ಆಲಮೇಲ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟವಿಲ್ಲದೆ ಮಕ್ಕಳು ಉಪವಾಸ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.