ದೀಪಾವಳಿ ಹಬ್ಬದ ಪ್ರಯುಕ್ತ ಬುರಾಣಪುರ ಕುಟುಂಬದಿಂದ ಪ್ರತಿವರ್ಷ ಈ ಸಮಾಜಸೇವೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪೂಜಾ ಪ್ರಿಂಟರ್ಸ್ ಮಾಲೀಕ ಶ್ರೀಮತಿ ಅಂಬಿಕಾ ಚಂದ್ರಶೇಖರ ಬುರಾಣಪುರ ಹಾಗೂ ಪೂಜಾ ಚಂದ್ರಶೇಖರ ಬುರಾಣಪುರ ಅವರ ಕುಟುಂಬದ ವತಿಯಿಂದ ಪ್ರತಿವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಪೌರಕಾರ್ಮಿಕ ಸಿಬ್ಬಂದಿಗೆ ಬಟ್ಟೆ ಹಾಗೂ ಸಿಹಿ ವಿತರಿಸುವ ಕಾರ್ಯಕ್ರಮವನ್ನು ಕಳೆದ ಒಂದು ದಶಕದಿಂದ ನಿರಂತರ ಹಮ್ಮಿಕೊಳ್ಳುತ್ತಾ ಬರಲಾಗಿದೆ.
ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಗೌರವಿಸುವ ಹಾಗೂ ಅವರೊಂದಿಗೆ ದೀಪಾವಳಿ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶದಿಂದ ಬುರಾಣಪುರ ಕುಟುಂಬದವರು ಪ್ರತಿವರ್ಷ ಈ ಸಮಾಜಮುಖಿ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ಇಲಾಖೆಯ ಉಪನಿರ್ದೇಶಕ ಎಸ್.ಎಂ. ಪಾಟೀಲ, ಚಂದ್ರಶೇಖರ ಬುರಾಣಪುರ ಕುಟುಂಬದವರು, ಸುರೇಶ್ ಕೊಂಡಗೂಳಿ ಹಾಗೂ ಪೌರಕಾರ್ಮಿಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

