Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿ

ಪುನೀತ್ ರಾಜಕುಮಾರ್ ಆದರ್ಶ ಯುವಜನತೆಗೆ ಸ್ಫೂರ್ತಿ

ಇಂಡಿ ಮತಕ್ಷೇತ್ರದಲ್ಲಿ 2.29 ಲಕ್ಷ ಮತದಾರರು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಅಮ್ಮನ ನುಡಿಯೇ ಮಗುವಿನ ಬದುಕಿನ ಬೇರು!
ವಿಶೇಷ ಲೇಖನ

ಅಮ್ಮನ ನುಡಿಯೇ ಮಗುವಿನ ಬದುಕಿನ ಬೇರು!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಗ್ಲಿಷ್ ವ್ಯಾಮೋಹದ ನಡುವೆ ಮರೆಯಾಗದಿರಲಿ ತಾಯಿಭಾಷೆ ಸೊಗಡು. ಅಮ್ಮನ ಮಾತಿನಲ್ಲಿರುವ ಮಮತೆ ಪರಭಾಷೆಯ ಪದಗಳಲ್ಲಿ ಅಷ್ಟೇ ಸಹಜವಾಗಿ ವ್ಯಕ್ತವಾಗಬೇಕೆಂದಿಲ್ಲ. ಭಾಷೆಯೆಂದರೆ ಬರೀ ಅಕ್ಷರವಲ್ಲ; ಅದು ಎದೆಯೊಳಗಿನ ಭಾವನೆಗಳ ಒರತೆ.

– ಸಿದ್ಧಲಿಂಗ ಚೌಧರಿ.
ದೈಹಿಕ ಶಿಕ್ಷಣ ಶಿಕ್ಷಕರು
ಸಿಂದಗಿ
ವಿಜಯಪುರ ಜಿಲ್ಲೆ

✍ಉದಯರಶ್ಮಿ ದಿನಪತ್ರಿಕೆ

ಮಕ್ಕಳಿಗೆ ಒಳ್ಳೆಯ ಬಟ್ಟೆ, ಆಟಿಕೆ, ತಿಂಡಿ ಕೊಡಿಸುತ್ತೇವೆ. ದೊಡ್ಡ ಶಾಲೆಗೆ ಸೇರಿಸಿ ಇಂಗ್ಲಿಷ್ ಕಲಿಸಲು ಹಂಬಲಿಸುತ್ತೇವೆ. ಆದರೆ ಹೆತ್ತ ತಾಯಿಯ ನುಡಿಯನ್ನು ಕಲಿಸುವುದನ್ನೇ ಮರೆಯುತ್ತಿದ್ದೇವೆ. ‘ಅವ್ವಾ’ ಎಂದು ಕರೆಯುವ ಮಗುವಿಗೆ ‘ಮಮ್ಮಿ ಅನ್ನು’ ಎಂದು ತಿದ್ದುವ ಕಾಲ ಬಂದಿದೆ. ಇದು ಆಧುನಿಕತೆಯೋ ಅಥವಾ ನಮ್ಮತನವನ್ನು ನಾವೇ ಕಳೆದುಕೊಳ್ಳುತ್ತಿರುವ ದುರಂತವೋ?
ಹಳ್ಳಿಯ ಮಣ್ಣಿನಲ್ಲಿ ಬೆಳೆದ ಮಗುವಿಗೆ ಅವ್ವನ ಜೋಗುಳ, ಅಜ್ಜಿಯ ಕಥೆ, ಅಪ್ಪನ ಹಿತನುಡಿ ಬದುಕಿನ ಮೊದಲ ಪಾಠಗಳು. ‘ಏನಪ್ಪಾ ಕಂದಾ, ಊಟ ಮಾಡಿದ್ಯಾ? ಶಾಲೆಗೆ ಹೋಗಿ ಬಂದ್ಯಾ?’ ಎಂಬ ಮಾತಿನಲ್ಲಿರುವ ಮಮತೆ ಪರಭಾಷೆಯ ಪದಗಳಲ್ಲಿ ಅಷ್ಟೇ ಸಹಜವಾಗಿ ವ್ಯಕ್ತವಾಗಬೇಕೆಂದಿಲ್ಲ. ಭಾಷೆಯೆಂದರೆ ಬರೀ ಅಕ್ಷರವಲ್ಲ; ಅದು ಎದೆಯೊಳಗಿನ ಭಾವನೆಗಳ ಒರತೆ.


ಇತ್ತೀಚೆಗೆ ಕೆಲವು ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವ ಪ್ರವೃತ್ತಿ ಕಾಣುತ್ತಿದೆ. ತನ್ನ ನೋವು, ಸಂಕಟವನ್ನೂ ತಾಯಿಭಾಷೆಯಲ್ಲಿ ಹೇಳಿಕೊಳ್ಳಲಾಗದ ಮಗುವಿನ ಮನಸ್ಥಿತಿ ಹೇಗಿರಬಹುದು? ಕಲಿಕೆಯ ಹೆಸರಿನಲ್ಲಿ ಮಕ್ಕಳ ಸಹಜ ಅಭಿವ್ಯಕ್ತಿಗೆ ಕಡಿವಾಣ ಹಾಕುವುದು ಎಷ್ಟು ಸರಿ? ಮಕ್ಕಳ ನಾಲಿಗೆಯ ಮೇಲೆ ಪರಭಾಷೆಯ ಹೇರಿಕೆ ಮಾಡುವುದಕ್ಕಿಂತ ಅವರ ಮನಸ್ಸಿನಲ್ಲಿ ಕಲಿಕೆಯ ಆಸಕ್ತಿ ಮೂಡಿಸುವುದು ಮುಖ್ಯವಲ್ಲವೇ?
ಭಾಷಾ ತಜ್ಞ ಜಿಮ್ ಕುಮಿನ್ಸ್ ಅವರ ಅಧ್ಯಯನಗಳು ಮಾತೃಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿರುವುದು ಇತರ ಭಾಷೆಗಳ ಕಲಿಕೆಗೂ ಪೂರಕವೆಂದು ಪ್ರತಿಪಾದಿಸುತ್ತವೆ. ಇಂಗ್ಲಿಷ್ ಕಲಿಯುವುದು ತಪ್ಪಲ್ಲ. ಆದರೆ ಅದಕ್ಕಾಗಿ ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ.
ಬೇರು ಗಟ್ಟಿಯಿದ್ದರೆ ಮರ ಎತ್ತರಕ್ಕೆ ಬೆಳೆಯುತ್ತದೆ. ಹಾಗೆಯೇ ತಾಯಿಭಾಷೆಯ ಬುನಾದಿ ಭದ್ರವಾಗಿದ್ದರೆ ಮಗುವಿನ ಕಲಿಕೆಯ ಪಯಣ ಮತ್ತಷ್ಟು ಸುಗಮವಾಗುತ್ತದೆ.


‘ಕನ್ನಡ ಕಲಿತು ಹೊಟ್ಟೆ ತುಂಬುತ್ತದಾ?’ ಎಂದು ಕೇಳುವವರಿದ್ದಾರೆ. ಆದರೆ ಹೊಟ್ಟೆ ತುಂಬಿಸುವುದೊಂದೇ ಬದುಕಲ್ಲವಲ್ಲ! ನಮ್ಮ ನುಡಿ, ನೆಲ, ಸಂಸ್ಕೃತಿ, ಸಂಬಂಧಗಳಿಗೂ ಬೆಲೆ ಬೇಕಲ್ಲವೇ? ಭಾಷೆ ಕಳೆದುಕೊಂಡರೆ ಅಜ್ಜಿಯ ಕಥೆ, ಅವ್ವನ ಜೋಗುಳ, ಜನಪದದ ಸೊಗಡು, ತಲೆಮಾರುಗಳ ಭಾವನಾತ್ಮಕ ನಂಟುಗಳೂ ನಿಧಾನವಾಗಿ ಮರೆಯಾಗುತ್ತವೆ.
ಮಕ್ಕಳಿಗೆ ಆಸ್ತಿ ಮಾಡಿಡುವ ಮುನ್ನ ಕನ್ನಡದ ಅಮೂಲ್ಯ ಸಂಪತ್ತನ್ನು ಬಳುವಳಿಯಾಗಿ ನೀಡೋಣ. ಮನೆಯಂಗಳದಲ್ಲಿ ಕನ್ನಡದ ಕಲರವ ಕೇಳಿಸಲಿ. ಶಾಲೆಯ ಅಂಗಳದಲ್ಲೂ ಕನ್ನಡದ ಕಂಪು ಹರಡಲಿ. ಮಕ್ಕಳು ಕನ್ನಡದಲ್ಲಿ ಮಾತನಾಡಲು ಹಿಂಜರಿಯದ ವಾತಾವರಣ ನಿರ್ಮಾಣವಾಗಲಿ.
ಅವ್ವನ ನುಡಿ ಮರೆತರೆ ನಮ್ಮತನವೇ ಮರೆತಂತೆ. ಕನ್ನಡ ಉಳಿದರೆ ನಮ್ಮ ಸಂಸ್ಕೃತಿಯ ಬೇರು ಉಳಿದಂತೆ!

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿ

ಪುನೀತ್ ರಾಜಕುಮಾರ್ ಆದರ್ಶ ಯುವಜನತೆಗೆ ಸ್ಫೂರ್ತಿ

ಇಂಡಿ ಮತಕ್ಷೇತ್ರದಲ್ಲಿ 2.29 ಲಕ್ಷ ಮತದಾರರು

ಕಾರ್ಖಾನೆಯ ಉಳಿವು ರೈತರ ಕೈಯಲ್ಲಿದೆ :ಪರಪ್ಪ ಸವದಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ಪುನೀತ್ ರಾಜಕುಮಾರ್ ಆದರ್ಶ ಯುವಜನತೆಗೆ ಸ್ಫೂರ್ತಿ
    In (ರಾಜ್ಯ ) ಜಿಲ್ಲೆ
  • ಇಂಡಿ ಮತಕ್ಷೇತ್ರದಲ್ಲಿ 2.29 ಲಕ್ಷ ಮತದಾರರು
    In (ರಾಜ್ಯ ) ಜಿಲ್ಲೆ
  • ಕಾರ್ಖಾನೆಯ ಉಳಿವು ರೈತರ ಕೈಯಲ್ಲಿದೆ :ಪರಪ್ಪ ಸವದಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಗನಿ ದೇವರಮನಿಗೆ ರಾಜ್ಯೋತ್ಸವ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಕಟಾವಿಗೆ ಬಂದ ಕಬ್ಬು, ಆತಂಕದಲ್ಲಿ ಕಬ್ಬು ಬೆಳೆಗಾರರು
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಕಾಲೇಜಿಗೆ ಅತ್ಯುತ್ತಮ ಎನ್ನೆಸ್ಸೆಸ್ ಸೇವಾ ಘಟಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರು ಆತ್ಮವಿಶ್ವಾಸ & ಬದ್ಧತೆಯಿಂದ ಕೆಲಸ ಮಾಡಬೇಕು
    In (ರಾಜ್ಯ ) ಜಿಲ್ಲೆ
  • ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕರವೇ ಮನವಿ
    In (ರಾಜ್ಯ ) ಜಿಲ್ಲೆ
  • ಗುಡಿ ಗುಂಡಾರಗಳಲ್ಲಿ ದೇವರಿಲ್ಲ :ಜೆ.ಎಸ್.ಪಾಟೀಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.