ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಅನಾವರಣದ ಪೋಸ್ಟರ್ ಹಾಗೂ ಆಮಂತ್ರಣ ಪತ್ರ ಬಿಡುಗಡೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ದೇಶದ ಹೆಮ್ಮೆ, ಅಪ್ರತಿಮ ವೀರ ಯೋಧ ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಅನಾವರಣವು ತಾಳಿಕೋಟೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಬೇಕು. ಈ ಮೂರ್ತಿಯು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗದೆ, ಎಲ್ಲ ಸಮಾಜದ ಜನರನ್ನು ಒಗ್ಗೂಡಿಸುವ ಸಂಕೇತವಾಗಬೇಕು ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಹೇಳಿದರು.
ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ರಜಪೂತ ಸಮಾಜದ ವತಿಯಿಂದ ಆಯೋಜಿಸಲಾದ ನವ್ಹೇಂಬರ್ ೧೫ ರಂದು ಅನಾವರಣಗೊಳ್ಳಲಿರುವ ಮಹಾರಾಣಾಪ್ರತಾಪಸಿಂಹರ ಮೂರ್ತಿ ಅನಾವರಣ ಕಾರ್ಯಕ್ರಮದ ಕುರಿತು ಪೋಸ್ಟರ್ ಹಾಗೂ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಅವರು, ಇಂದಿನ ಯುವಪೀಳಿಗೆ ಹಾಗೂ ಮುಂದಿನ ಪೀಳಿಗೆಯ ಮಕ್ಕಳು ಮಹಾರಾಣಾ ಪ್ರತಾಪಸಿಂಹರ ಮೂರ್ತಿಯನ್ನು ನೋಡಿ, ಅವರ ಜೀವನ, ಶೌರ್ಯ, ತ್ಯಾಗ ಮತ್ತು ದೇಶಪ್ರೇಮದ ಕುರಿತು ತಿಳಿದುಕೊಳ್ಳುವಂತಾಗಬೇಕು. ಈ ಮೂರ್ತಿಯು ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವುದರ ಜತೆಗೆ ಅವರ ಬದುಕಿಗೆ ಸ್ಫೂರ್ತಿಯಾಗಬೇಕು ಎಂದರು. ಮುಖಂಡರಾದ ಸೈಯದಶಕೀಲ್ಅಹ್ಮದ ಖಾಜಿ, ಚಿದಂಬರ ಕರಮರಕರ, ಜಿ.ಟಿ.ಘೋರ್ಪಡೆ, ಡಾ.ವ್ಹಿ.ಎಸ್.ಕಾರ್ಚಿ, ಶ್ರೀನಿವಾಸ ಸೋನಾರ, ವೀರುಪಾಕ್ಷಯ್ಯ ಹಿರೇಮಠ(ಹಂಪಿಮುತ್ಯಾ), ಕಾಶಿನಾಥ ಸಜ್ಜನ, ಸಂಭಾಜಿ ವಾಡಕರ, ಕಾಶಿನಾಥ ಮುರಾಳ, ವಾಸುದೇವ ಹೆಬಸೂರ, ಎಂ.ಆರ್.ಕತ್ತಿ, ರಾಘು ಮಾನೆ, ಅವರು ಮಾತನಾಡಿ ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಅನಾವರಣಕ್ಕೆ ಎಲ್ಲ ಸಮಾಜದ ಬಂದುಗಳು ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇವೆ ಈ ಅದ್ಭುತ್ ಕಾರ್ಯಕ್ರಮ ತಾಳಿಕೋಟೆಯ ಹೆಮ್ಮೆಯ ಸಂಖ್ಯೇತವಾಗಿ ಎಂದು ಹೇಳಿದರಲ್ಲದೇ ಈ ಮೂರ್ತಿ ಹಾಗೂ ಸರ್ಕಲ್ ನಿರ್ಮಾಣದ ಕಾರ್ಯವನ್ನು ಸಾಕಾರಗೊಳಿಸಲು ಕಳೆದ ಎರಡು-ಮೂರು ವರ್ಷಗಳಿಂದ ಅನೇಕರು ಶ್ರಮಿಸಿದ್ದಾರೆ ಇಂತಹ ಮಹತ್ವದ ಕಾರ್ಯವು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಎಲ್ಲ ಸಮಾಜದ ಮುಖಂಡರು, ಹಿರಿಯರು ಹಾಗೂ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಅದು ಐತಿಹಾಸಿಕ ಸಾಧನೆಯಾಗಲಿದೆ. ತಾಳಿಕೋಟೆಗೆ ಉತ್ತಮ ಸಂದೇಶ ನೀಡುವಂತಹ ಅದ್ಭುತ ಕಾರ್ಯಕ್ರಮವಾಗಿ ಇದು ರೂಪುಗೊಳ್ಳಬೇಕು ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿ ಕೆಲಸ ಮಾಡೋಣವೆಂದರು.
ಇದೇ ಸಮಯದಲ್ಲಿ ವಿವಿಧ ಸಮಾಜಗಳ ಮುಖಮಡರುಗಳು ಕಾರ್ಯಕ್ರಮದ ಯಶಸ್ವಿ ಕುರಿತು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಮಯದಲ್ಲಿ ವೇ.ಗೀರಿಶಬಟ್ ಜೋಶಿ, ಬಾಲಾಜಿ ಹಜೇರಿ, ತುಳಸಿದಾಸ ಹಂಚಾಟೆ, ರಜಪೂತ ಸಮಾಜದ ಅಧ್ಯಕ್ಷರಾದ ಹರಿಸಿಂಗ್ ಮೂಲಿಮನಿ, ಸರ್ವ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ರಾಜು ವಿಜಾಪೂರ ನಿರೂಪಿಸಿ ವಂದಿಸಿದರು.

