ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ತಾಂಬಾ ಗ್ರಾಮದ ಸಂಗನಬಸವೇಶ್ವರ ವೃತ್ತದಲ್ಲಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಬಂದ ನಿಮಿತ್ಯ ಬೆಳಗ್ಗೆ ೯ ರಿಂದ ೩ ಗಂಟೆಯ ವರೆಗೆ ಬೇರೆ ಪಟ್ಟಣ ಮತ್ತು ಗ್ರಾಮಗಳಿಗೆ ಹೋಗುವ ವಾಹನಗಳು ಹೋಗದೇ ಪ್ರಯಾಣಿಕರು ಪರದಾಡಬೇಕಾಯಿತು.
ವ್ಯಾಪಾರಸ್ಥರು ಬಂದದಲ್ಲಿ ಭಾಗವಹಿಸಿ ಬೆಂಬಲ ನೀಡಿದರು.
ರೈತ ಮುಖಂಡ ಶಿವರಾಜ ಕೆಂಗನಾಳ ಮಾತನಾಡಿ ೦ ಕಿಮಿ ಯಿಂದ ೯೭ ಕಿ ಮಿ ವರೆಗೆ ಮಾತ್ರ ನೀರು ಬರುತ್ತದೆ ತಾಂಬಾ ಮತ್ತು ಸುತ್ತಲಿನ ಗ್ರಾಮಗಳು ಮತ್ತು ಕಾಲುವೆ ಕೊನೆಯ ಭಾಗದ ವರೆಗೂ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಮಾಡಿದಾಗ ಒಂದು ದಿನ ನೀರು ಬಿಟ್ಟು ಮತ್ತೆ ನೀರು ಬಿಡುವದಿಲ್ಲ. ಹೀಗಾಗಿ ರೈತರಿಗೆ ಮೋಸಮಾಡಬಾರದು. ನೀರು ಕುಡಿಯಲು ಅವಶ್ಯ ಇದೆ. ಜನ ಜಾನುವಾರುಗಳಿಗೆ ತೊಂದರೆ ಪರಿಗಣಿಸಿ ನೀರು ಬಿಡಬೇಕು ಎಂದರು.
ಮಲಕಣ್ಣ ನಾವದಗಿ, ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಎಸ್.ಬಿ.ಕಂಬೋಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಜಶೇಖರ ಗಂಗನಹಳ್ಳಿ,ಆರ್.ಎಸ್.ಪೂಜಾರಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು, ಬಂಥನಾಳದ ಶ್ರೀ ಸಂಗನಬಸವ ದೇವರು, ರಾಕೇಶ ಬಾಗಲಕೋಟ, ಮಲ್ಲಿಕಾರ್ಜುನ ಹೊರ್ತಿ, ಸುರೇಶ ನಡಗಡ್ಡಿ, ಮಾಸಿಮ ವಾಲಿಕಾರ, ಶಂಕರ ಪ್ಯಾಟಿ, ಚಂದ್ರಶೇಖರ ರೊಟ್ಟಿ ಮತ್ತಿತರಿದ್ದರು.
ಅಭಿಯಂತರ ರವಿ ಸೋಲಾಪುರ ಸ್ಥಳಕ್ಕೆ ಭೇಟಿ ನೀಡಿ ಇಂದು ಹಳ್ಳಕ್ಕೆ ನೀರು ಬಿಡಲಾಗಿದೆ. ವಾರಾಬಂದಿ ಮುಗಿದ ನಂತರ ಕಾಲುವೆಗೆ ನೀರು ಬಿಡುವದಾಗಿ ತಿಳಿಸಿದರು.

