Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೆದ್ದಾರಿ ತಡೆದು ನಂದಿ ಸೇನೆಯಿಂದ ಬೃಹತ್ ಪ್ರತಿಭಟನೆ
(ರಾಜ್ಯ ) ಜಿಲ್ಲೆ

ಹೆದ್ದಾರಿ ತಡೆದು ನಂದಿ ಸೇನೆಯಿಂದ ಬೃಹತ್ ಪ್ರತಿಭಟನೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರೈತರ ಜೋಡೆತ್ತುಗಳ ನಿರ್ವಹಣೆಗೆ ಮಾಸಿಕ ₹11 ಸಾವಿರ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಉದಯರಶ್ಮಿ ದಿನಪತ್ರಿಕೆ

ತಿಕೋಟಾ: ರೈತರ ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಜೋಡೆತ್ತುಗಳ ನಿರ್ವಹಣೆಗೆ ಮಾಸಿಕ ₹11 ಸಾವಿರ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿ, ತಿಕೋಟಾ ಪಟ್ಟಣ ಹಾಗೂ ಹೊನವಾಡ ಗ್ರಾಮದಲ್ಲಿ ನಂದಿ ಸೇನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಹೆದ್ದಾರಿಯ ಮೇಲೆ ಎತ್ತುಗಳನ್ನು ನಿಲ್ಲಿಸುವ ಮೂಲಕ ರಸ್ತೆ ತಡೆದು ಪ್ರತಿಭಟನಾಕಾರರು ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದರು. ಜೋಡೆತ್ತುಗಳು ರೈತರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಕೃಷಿ ಕಾರ್ಯಗಳಲ್ಲಿ ಅವುಗಳ ಕೊಡುಗೆ ಅಪಾರವಾಗಿದೆ. ಆದರೆ, ಬರಗಾಲದ ಇಂದಿನ ದಿನಗಳಲ್ಲಿ ಮೇವು, ಪಶು ಆಹಾರ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ, ಜೋಡೆತ್ತುಗಳನ್ನು ಸಾಕುವ ರೈತರಿಗೆ ಪ್ರತಿ ತಿಂಗಳು ₹11 ಸಾವಿರ ಸಹಾಯಧನ ನೀಡುವ ಮೂಲಕ ಸರ್ಕಾರ ನೆರವಿಗೆ ಬರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸುವುದು ಹಾಗೂ ಜೋಡೆತ್ತುಗಳನ್ನು ಸಾಕುವ ರೈತರ ಹಿತ ಕಾಪಾಡುವುದು ಅಗತ್ಯವಾಗಿದೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯ ಬಳಿಕ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ತಹಸೀಲ್ದಾರ ಸುರೇಶ ಚವಲರ ಅವರಿಗೆ ಸಲ್ಲಿಸಲಾಯಿತು.
ರೈತರ ಬದುಕಿಗೆ ಆಸರೆಯಾಗಿರುವ ಜೋಡೆತ್ತುಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿ, ಆರ್ಥಿಕ ನೆರವು ಒದಗಿಸಬೇಕು ಎಂಬುದು ನಂದಿ ಸೇನೆಯ ಪ್ರಮುಖ ಒತ್ತಾಯವಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ರಾಜಕುಮಾರ ಚಾವರ, ಸುನೀಲ ಗೂಗವಾಡ, ಧರೆಪ್ಪ ಗುಗ್ಗರಿ, ನಜೀರ ನಂದರಗಿ, ಹೆಚ್ ಡಿ ಧರೆಪ್ಪ, ಹಣಮಂತ ಬ್ಯಾಡಗಿ, ಶಿವಯ್ಯ ಸತ್ತಿಗೇರಿ, ಮಾಳಪ್ಪ ಧನಗೊಂಡ, ಧರೆಪ್ಪ ಗೌರಗೊಂಡ, ಶಾಸಪ್ಪ ಬಲೋಳಗಿ, ರೈತ ಮುಖಂಡರು ರೈತರು ಈ ಸಂದರ್ಭದಲ್ಲಿ ಇದ್ದರು.

BIJAPUR NEWS bjp congress public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ
    In (ರಾಜ್ಯ ) ಜಿಲ್ಲೆ
  • ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಪ್ರಜಾಸೇವಾ ಅಭಿಯಾನಕ್ಕೆ ಶಾಸಕ ವಿಠ್ಠಲ ಕಟಕಧೋಂಡಚಾಲನೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಜಿ.ಪಂ-ತಾ.ಪಂ ಚುನಾವಣೆ: ಅಲ್ಪಸಂಖ್ಯಾತರಿಗೆ‌ ಪ್ರಾತಿನಿಧ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಬೆಳೆಹಾನಿ ರೈತರಿಗೆ ಎಕರೆಗೆ ₹25,000 ಪರಿಹಾರ ನೀಡಲು ಆಗ್ರಹ
    In (ರಾಜ್ಯ ) ಜಿಲ್ಲೆ
  • 371(ಜೆ) ವ್ಯಾಪ್ತಿಗೆ ವಿಜಯಪುರ ಜಿಲ್ಲೆ ಸೇರ್ಪಡೆಗೆ ಆಗ್ರಹ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.