ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಬಿ. ಎಂ. ಪಾಟೀಲ ಮೆಮೊರಿಯಲ್ ಟ್ರೋಫಿ ವಿಜಯಪುರ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 18 ರಿಂದ ಅಕ್ಟೋಬರ್ 25ರ ವರೆಗೆ ನಗರದಲ್ಲಿ ನಡೆಯಲಿದೆ.
ಇಲ್ಲಿನ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಎಂಟು ತಂಟಗಳಾದ ಕರ್ನಾಟಕ ಕ್ರಿಕೆಟ್ ಕ್ಲಬ್, ಎಸ್. ಎಚ್. ಪಿ. ವಾರಿಯರ್ಸ್, ಶಾರದಾ ಸ್ಟ್ರೈಕರ್ಸ್, ವಿಜಯಪುರ ಡಿಸ್ಟ್ರಿಕ್ಟ್ ಪೊಲೀಸ್, ಬಿಜಾಪುರ ಟೈಗರ್ಸ್, ಸುಗ್ರೀವ ವಾರಿಯರ್ಸ್, ಟೀಮ್ ಪ್ರಜ್ವಲ, ಕವರಡ್ರೈವ್ ಪಾಲ್ಗೊಳ್ಳುತ್ತಿವೆ.
ಅಕ್ಟೋಬರ್ 18 ರಂದು ರವಿವಾರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿರುವ ಈ ಪಂದ್ಯಾವಳಿಯನ್ನು ವಿದಾನ ಪರಿಷತ ಶಾಸಕ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಉದ್ಘಾಟಿಸಲಿದ್ದಾರೆ. ಎಸ್ಪಿ ಲಕ್ಷ್ಮಣ ನಿಂಬರಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕೆ.ಎಸ್.ಸಿ.ಎ ರಾಯಚೂರು ವಲಯ ಸಂಯೋಜಕ ಕುಶಾಲ ಪಾಟೀಲ ಗಡಗಿ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಎಸ್.ಕೋರಿ ಸೇರಿದಂತೆ ನಾನಾ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪಂದ್ಯಾವಳಿಯ ಸಹ-ಆಯೋಜಕ ಪ್ರಶಾಂತ ಹಜೇರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
