ಸಿಂದಗಿಯಲ್ಲಿ ವಕೀಲರ ಸಂಘದ ಸದಸ್ಯರು ಕೋರ್ಟನ ಕಾರ್ಯಕಲಾಪ ಬಹಿಷ್ಕರಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ಜಿಲ್ಲೆಯನ್ನು ೩೭೧ ಜೆ ಅಡಿಯಲ್ಲಿ ಅಳವಡಿಸುವಂತೆ ಹಾಗೂ ಎಫ್ಆರ್ಪಿ ಪ್ರಕಾರ ಕಬ್ಬುಗೆ ರೂ.೫೫೦೦ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಬುಧವಾರ ಕೋರ್ಟನ ಕಾರ್ಯಕಲಾಪ ಬಹಿಷ್ಕರಿಸಿ ಡಾ. ಅಂಬೆಡ್ಕರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ನಗರದ ಬಸವೇಶ್ವರ ವೃತ್ತದಲ್ಲಿ ೧೨ ದಿನ ಮುಂದುವರೆದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಾಲ್ಲೂಕು ವಕೀಲರು ಭೇಟಿ ನೀಡಿ ಸಂಪೂರ್ಣ ಬೆಂಬಲ ಸೂಚಿಸಿದರು.
ಈ ವೇಳೆ ವಕೀಲರ ಸಂಗದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಮಾತನಾಡಿ, ವಿಜಯಪುರ ಜಿಲ್ಲೆಯನ್ನು ೩೭೧ ಜೆ ಅಡಿ ಡಾ. ಡಿ.ಆರ್.ನಂಜುಂಡಪ್ಪ ವರದಿಯಲ್ಲಿ ದಾಖಲಾಗಿದ್ದರು ಕೂಡಾ ಅಂದಿನ ರಾಜಕಾರಣೀಗಳ ಇಚ್ಚಾಸಕ್ತಿಯ ಕೊರತೆಯಿಂದ ಕೈಬಿಟ್ಟಿದ್ದು ಇಲ್ಲಿನ ಮಕ್ಕಳು ಶೈಕ್ಷಣಿಕ, ಉದ್ಯೋಗ ಕ್ಷೇತ್ರದ ಅವಕಾಶಗಳಿಂದ ವಂಚಿತವಾಗಿದ್ದಾರೆ ಆ ಕಾರಣಕ್ಕೆ ಈ ಜಿಲ್ಲೆಗೂ ೩೭೧ ಜೆ ಅಡಿಯಲ್ಲಿ ಸೇರ್ಪಡೆ ಮಾಡಿ ಅನುವು ಮಾಡಿಕೊಡಬೇಕು ಅಲ್ಲದೆ ಈ ಬಾಗ ಸಂಪೂರ್ಣ ಬರಗಾಲ ಜಿಲ್ಲೆಯೆಂದು ಹಣೆಪಟ್ಟ ಕಟ್ಟಿಕೊಂಡಿದೆ. ರೈತರು ಬೆಳೆದ ಕಬ್ಬಿಗೆ ಎಫ್ ಆರ್ಪಿ ಪ್ರಕಾರ ಬೆಲೆ ದೊರಕಬೇಕು. ಈ ಹೋರಾಟದ ನಿರಂತರವಾಗಿರಬೇಕು ಎಂದು ಕರೆ ನೀಡಿದರು.
೩೭೧ ಜೆ ಹೋರಾಟದ ರೂವಾರಿ ರಂಗನಾಥ ಘೋರ್ಫೆ, ಸಂಗಣ್ಣ ಬ್ಯಾಕೋಡ, ಎಂ.ಎಂ. ಹಂಗರಗಿ, ಗುರುರಾಜ ಪಡಶೆಟ್ಟಿ, ವಕೀಲರಾದ ಎಸ್ ಬಿ ಖಾನಾಪೂರ, ಬಿ.ಸಿ.ಪಾಟೀಲ. ಎಂ.ಸಿ.ಯಾತನೂರ, ಜಿ ಎಸ್ ಮನ್ನಾಪೂರ, ಆರ್ ಎಂ ಚೌರ, ರಾಜು ಪಾಟೀಲ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಸಂಗಣ್ಣ ಬ್ಯಾಕೋಡ, ಮಾತನಾಡಿದರು.
ಈ ಸಂದರ್ಭದಲ್ಲಿ ಎಂ.ಎಂ.ಹಂಗರಗಿ, ಸಿದ್ದು ಕಡಗಂಚಿ, ವಕೀಲರಾದ ಎಸ್ ಎಂ ಪಾಟೀಲ, ಶಶಿಧರ ಗಾಯಕವಾಡ, ಸಿ.ಎಂ.ಸೂರ್ಯವಂಶಿ .ಬಿ ಜಿ ಮಾನ್ವಿ ಗೀತಾ ಪಾಟೀಲ, ಪಿ ಎಂ ಬಡಿಗೇರ. ಬಿ ಎಸ್ ಮಠ, ಜಿ ಜಿ ಮಾರ್ಸನಳ್ಳಿ, ಎಸ್ ಎಸ್ ಬಿರಾದಾರ, ಅಸ್ಲಾಂ ಬಂಕಲಗಿ, ಅಸ್ಲಂ ಪಟೇಲ ಬಿರಾದಾರ, ಅಕ್ಷಯ ದಂಗಪೂರ, ಪಿ.ಎಂ.ಕಂಬಾರ, ಜಿ.ಸಿ.ಬಾವಿಕಟ್ಟಿ, ಬಿ ಎ ಬಮ್ಮನಳ್ಳಿ, ವ್ಹಿ ಎಂ ಹುಲಿಕೇರಿ, ಬಿ ಎಂ ಹೊಸಮನಿ, ಬಿ ಎಸ್ ಪಾಟೀಲ. ಎಂ ಎನ್ ನಾಯ್ಕೋಡಿ . ಡಿ ಎಸ್ ಉದಯಿಕರ್. ಪ್ರದೀಪ ದೇಶಪಾಂಡೆ, ಸಮೀರ ಬೈರೋಡಗಿ, ಅಲ್ಲಂ ಖಾನ್ ಬಿರಾದಾರ, ಪಿ ಎಂ ಹೊಸಮನಿ, ರಮೇಶ ಐಹೊಳೆ, ಮಾಳಿಂಗರಾಯ ಹತ್ತಿ , ಮಲ್ಲು ಮೋರಟಗಿ, ಶ್ರೀಶೈಲ ಬಿರಾದಾರ, ಬಾಬು ವಾಲಿಕಾರ, ಆನಂದ ಶಾಬಾದಿ ಇದ್ದರು.

