ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ಜಿಲ್ಲೆಯ ಹಿರಿಯ ಸಾಹಿತಿ, ಕವಯಿತ್ರಿ, ಬಸವತತ್ವ ಚಿಂತಕಿ ಸುಧಾ ಪಾಟೀಲ ಅವರು ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಪ್ರಧಾನ ಕವಿಗೋಷ್ಠಿಗೆ ಆಯ್ಕೆ ಆಗಿದ್ದಾರೆ.
ಪ್ರಧಾನ ದಸರಾ ಕವಿ ಗೋಷ್ಠಿ ಕಾರ್ಯಕ್ರಮವು ಅಕ್ಟೋಬರ್ 17 ರಂದು ಮಾನಸಗಂಗೋತ್ರಿಯ ಕುವೆಂಪು ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆಯಲಿದೆ.
ದಸರಾ ಕವಿ ಗೋಷ್ಠಿಗೆ ಮೈಸೂರಿಗೆ ತೆರಳುತ್ತಿರುವ ಸುಧಾ ಪಾಟೀಲ ಅವರಿಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು, ವೇದಿಕೆಯ ವಿಶ್ವಸ್ಥರು ಅಜೀವ ಸದಸ್ಯರು, ದತ್ತಿ ದಾಸೋಹಿಗಳು, ಬೆಳಗಾವಿ ಲಿಂಗಾಯತ ಮಹಿಳಾ ಸಮಾಜ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಲ್ಲ ಮಹಿಳಾ ಸಂಘಟನೆಯವರು ಶುಭ ಕೋರಿದ್ದಾರೆ.

