ಉದಯರಶ್ಮಿ ದಿನಪತ್ರಿಕೆ
ಅಥಣಿ: ದಿನಾಂಕ 26.10.2026 ರಂದು ಆಚರಿಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದ ರೂಪುರೇಷೆಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಅಥಣಿ ಪಟ್ಟಣದ ತಹಶೀಲ್ದಾರ್ ಮತ್ತು ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯ ಮಿನಿ ವಿಧಾನಸೌಧದಲ್ಲಿ ದಿನಾಂಕ 16.10.2026 ರಂದು ಬೆಳಿಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದೆ.
ತಹಶೀಲ್ದಾರರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಸಮಿತಿ ಅಥಣಿಯ ಅಧ್ಯಕ್ಷರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಜಯಂತಿಯನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸಮಿತಿಯ ಎಲ್ಲಾ ಸದಸ್ಯರು ವಿವಿಧ ಸಂಘಟನೆಗಳ ಮುಖಂಡರು ಹಿರಿಯರು ಮತ್ತು ಆಸಕ್ತರು ಈ ಪೂರ್ವಭಾವಿ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಶುರಾಮ ಪತ್ತಾರ ಮನವಿ ಮಾಡಿದ್ದಾರೆ.

