Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ

ಭಾಷಾ ನದಾಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆ

ಮೈಸೂರು ದಸರಾ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ
(ರಾಜ್ಯ ) ಜಿಲ್ಲೆ

ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಚಡಚಣ: ಮದ್ಯವ್ಯಸನದಿಂದ ಆರೋಗ್ಯ, ಕುಟುಂಬದ ನೆಮ್ಮದಿ ಹಾಳಾಗುತ್ತದೆ. ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನ ನಡೆಸುವ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಹೇಳಿದರು.
ಇಂಡಿ ತಾಲೂಕಿನ ಚಡಚಣ ವಲಯದ ಚೌಡೇಶ್ವರಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 2132ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಹಾಗೂ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಉದ್ಘಾಟಿಸಿದರು. ಸಮಾರಂಭವು ಷಡಕ್ಷರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.
ಶಾಸಕ ವಿಠಲ ಕಟಕದೊಂಡ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ನಾಲ್ಕು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮದ್ಯವರ್ಜನ ಶಿಬಿರಗಳು ವ್ಯಸನಿಗಳ ಜೀವನದಲ್ಲಿ ಬದಲಾವಣೆ ತರುವುದರ ಜೊತೆಗೆ ಕುಟುಂಬಗಳ ಕಣ್ಣೀರು ಒರೆಸುವ ಮಹತ್ವದ ಕಾರ್ಯಗಳಾಗಿವೆ. ಸರ್ಕಾರದ ವಿವಿಧ ಜನಪರ ಕಾರ್ಯಗಳಿಗೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರಕಾಶ ಚವ್ಹಾಣ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಕುಟುಂಬಗಳಿಗೆ ಆಸರೆಯಾಗಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಈಶ್ವರಿ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಚಡಚಣ ಕೇಂದ್ರದ ಕು. ಬಿ.ಕೆ. ಶ್ರೀದೇವಿ ಅಕ್ಕ ಮಾತನಾಡಿದರು.
ಒಂದು ವಾರದ ಕಾಲ ನಡೆದ ಶಿಬಿರದಲ್ಲಿ 50 ಮದ್ಯವ್ಯಸನಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿ, ಮನಪರಿವರ್ತನೆ ಹಾಗೂ ವ್ಯಸನಮುಕ್ತ ಜೀವನದ ಕುರಿತು ಮಾರ್ಗದರ್ಶನ ನೀಡಲಾಯಿತು.
ಶಿಬಿರದ ಗೌರವಾಧ್ಯಕ್ಷ ಕಾಂತುಗೌಡ ಪಾಟೀಲ, ಅಧ್ಯಕ್ಷ ಬಾಬುಗೌಡ ಬಿರಾದಾರ, ಸೋಮಶೇಖರ ಬಡಿಗೇರ, ಕೆ.ಪಿ. ಬೊಳೆಗಾವ, ದೇವೇಂದ್ರಪ್ಪಗೌಡ ಪಾಟೀಲ, ಸಂಗಮೇಶ ಅವಜಿ, ಕಾಶಿಬಾಯಿ ವಾಲಿಕಾರ, ಎಂ.ವಿ. ಕಟಗೇರಿ, ಇಲಾಯಿ ನಧಾಫ, ಪ್ರಕಾಶ ಭಂಡಕರವಟೆ, ರಾಮಲಿಂಗಪ್ಪ ಮಾಲಪೂರ, ರುದ್ರಪ್ಪ ಪೂಜಾರಿ, ಶಿವಣ್ಣ ಪಾಂಡ್ರೆ, ಆರ್.ಎಸ್. ಬಣಗಾರ, ಮಹೇಶ ಚೌದರಿ, ದಶರಥ ಬನಶೋಡೆ, ಮೇಲ್ವಿಚಾರಕರಾದ ಶಿವಯ್ಯ ಹಿರೇಮಠ, ಮಹಾಂತೇಶ ವಿ.ಎ., ಸುದೀಪ ಕಟಗೇರಿ, ಶಿದ್ದಪ್ಪ ಚುಳಕಿ, ಸರಸ್ವತಿ, ಮಣಿಕಂಠ, ಅರ್ಜುನ ಪಾಟೀಲ, ಸಿ.ಎಸ್.ಸಿ. ಸೇವಾದಾರರು, ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಭಾಷಾ ನದಾಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆ

ಮೈಸೂರು ದಸರಾ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ

ಹೆಣ್ಣು ಜಗವ ಬೆಳಗುವ ದೇವತೆ :ಡಾ.ಹೊಸಮನಿ

ಬಯಲು ಬಹಿರ್ದೆಸೆ ತಡೆಯದಿದ್ದರೆ ರಸ್ತೆಯೇ ಬಂದ್!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ
    In (ರಾಜ್ಯ ) ಜಿಲ್ಲೆ
  • ಭಾಷಾ ನದಾಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಹೆಣ್ಣು ಜಗವ ಬೆಳಗುವ ದೇವತೆ :ಡಾ.ಹೊಸಮನಿ
    In (ರಾಜ್ಯ ) ಜಿಲ್ಲೆ
  • ಬಯಲು ಬಹಿರ್ದೆಸೆ ತಡೆಯದಿದ್ದರೆ ರಸ್ತೆಯೇ ಬಂದ್!
    In (ರಾಜ್ಯ ) ಜಿಲ್ಲೆ
  • ವೈಭವದ ದಸರಾ ಆಚರಣೆಗೆ ಸಕಲ ಸಿದ್ಧತೆ :ಡಾ.ದೇವಾನಂದ
    In (ರಾಜ್ಯ ) ಜಿಲ್ಲೆ
  • ಪೌಷ್ಟಿಕ ಆಹಾರದಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಲು ಸಾಧ್ಯ
    In (ರಾಜ್ಯ ) ಜಿಲ್ಲೆ
  • ಬೇಸಿಗೆಗೂ ಮುನ್ನವೇ ಚಿಂಚೋಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಗೆ ೩೭೧(ಜೆ) ಮೀಸಲಾತಿಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಮರಡಿಸಿದ್ದೇಶ್ವರ ದೇವಸ್ಥಾನದಲ್ಲಿ ಘಟಸ್ಥಾಪನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.