Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ

ಭಾಷಾ ನದಾಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆ

ಮೈಸೂರು ದಸರಾ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಯಲು ಬಹಿರ್ದೆಸೆ ತಡೆಯದಿದ್ದರೆ ರಸ್ತೆಯೇ ಬಂದ್!
(ರಾಜ್ಯ ) ಜಿಲ್ಲೆ

ಬಯಲು ಬಹಿರ್ದೆಸೆ ತಡೆಯದಿದ್ದರೆ ರಸ್ತೆಯೇ ಬಂದ್!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಗ್ರಾಮ ಪಂಚಾಯತಿಗೆ ಚಿಮ್ಮಡ ಗ್ರಾಮದ ೬ನೇ ವಾರ್ಡಿನ ಗ್ರಾಮಸ್ಥರ ಪತ್ರ

ಉದಯರಶ್ಮಿ ದಿನಪತ್ರಿಕೆ

ವರದಿ: ಇಲಾಹಿ ಇ, ಜಮಖಂಡಿ
ಚಿಮ್ಮಡ: ಗ್ರಾಮದ ೬ನೇ ವಾರ್ಡಿನ ಹಲವಾರು ಜನ ಗ್ರಾಮಸ್ಥರು ರಸ್ತೆ ಬದಿಯಲ್ಲಿಯೇ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಆ ಭಾಗದಲ್ಲಿ ವಾಸಿಸುವ ಕುಟುಂಬಸ್ಥರಿಗೆ ಪರಿಸರ ಮಾಲಿನ್ಯದಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದ್ದು ಕೂಡಲೆ ಈ ಅನಿಷ್ಠ ವ್ಯವಸ್ಥೆ ನಿಲ್ಲಿಸುವ ಕ್ರಮ ಕೈಗೊಳ್ಳದಿದ್ದಲ್ಲಿ ಈ ರಸ್ತೆಯ ಸಂಚಾರವನ್ನೆ ಬಂದ್ ಮಾಡುವ ಮೂಲಕ ಪ್ರತಿಭಟಿಸಲಾಗುವುದೆಂದು ಈ ಭಾಗದ ನಾಗರಿಕರು ಗ್ರಾಮ ಪಂಚಾಯತಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆ ಹೊಂದಿರುವ ಚಿಮ್ಮಡ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿಯೇ ಜನರು ಬಯಲು ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಈ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದ್ದು ಈ ಮಾರ್ಗದಲ್ಲಿ ಸಂಚರಿಸುವ ಶಾಲಾ ಮಕ್ಕಳು, ಮಹಿಳೆಯರು ಹಾಗೂ ವೃದ್ದರು ಮೂಗು ಮುಚ್ಚಿಕೊಂಡೇ ಗ್ರಾಮ ಪ್ರವೇಶ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದರೂ ಬಯಲು ಶೌಚಕ್ಕೆ ಬರುವ ಗ್ರಾಮಸ್ಥರ ಸಂಖ್ಯೆಯೇ ಬಹಳಷ್ಟಿದೆ. ಇದಕ್ಕೆ ಕೂಡಲೆ ಕಡಿವಾಣ ಹಾಕದಿದ್ದಲ್ಲಿ ಬಳಗಾರ ಕ್ರಾಸ್‌ನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಬಂದ ಮಾಡುವುದಾಗಿ ಅನೀಲ ಬಳಗಾರ ನೇತ್ರತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಗ್ರಾಮಸ್ಥರು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಕುರಿತು ಗ್ರಾಂ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರರನ್ನು ಸಂಪರ್ಕಿಸಿದರೆ ಬಯಲುಶೌಚ ತಡೆಗಟ್ಟಲು ಜಲ ನಿರ್ಮಲ ಯೋಜನೆ, ಸ್ವಚ್ಚ ಭಾರತ್ ಮಿಷನ್, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಅನುದಾನದಲ್ಲಿ ಈಗಾಗಲೇ ೨೫೦ ವೈಯಕ್ತಿಕ ಒಡೆತನದ ಗುಂಪು ಶೌಚಾಯಗಳು, ೩೦ ಸಾರ್ವಜನಿಕ ಶೌಚಾಲಯಗಳು, ೪ ಮಹಿಳಾ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ೧೨ ಸಮುದಾಯ ಶೌಚಾಲಯಗಳ ನಿರ್ಮಾಣ ಅಲ್ಲದೇ ವೈಯಕ್ತಿಕವಾಗಿ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿಕೊಳ್ಳುವ ಬಡ ಕುಟುಂಬಕ್ಕೆ ಪರಿಶಿಷ್ಟ ಜಾತಿ/ಪಂಗಡದವರಿಗೆ ೨೦ ಸಾವಿರ ಇತರ ಕುಟುಂಬಗಳಿಗೆ ೧೨ ಸಾವಿರದಂತೆ ಸರಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಅಲ್ಲದೇ ಕಳೆದ ವರ್ಷ ಕಾವಲು ಸಮೀತಿ ರಚಿಸಿ ಸುಮಾರು ಒಂದು ತಿಂಗಳ ಕಾಲ ಬಯಲು ಬಹಿರ್ದೆಸೆಗೆ ಬರುವ ನಾಗರಿಕರನ್ನು ಶೌಚಾಲಯ ಬಳಸುವಂತೆ ಮನವೊಲಿಸಿ ಬಯಲು ಬಹಿರ್ದೆಸೆ ತಡೆಯಲಾಗಿತ್ತು. ಈಗ ಕ್ರಮೇಣ ಮತ್ತೆ ಈ ಪಿಡುಗು ಹೆಚ್ಚುತ್ತಿದೆಯಲ್ಲದೇ ವಿದ್ಯಾವಂತರೇ ಶೌಚಕ್ಕಾಗಿ ರಸ್ತೆಪಕ್ಕದ ಸ್ಥಳ ಆಶ್ರಯಿಸುತ್ತಿರುವುದು ವಿಪರ್ಯಾಸ ಎನ್ನುತ್ತಾರೆ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ.

“ಬಯಲು ಬಹಿರ್ದಸೆ ತಡೆಯಲು ಕೇಂದ್ರ, ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇನ್ನೂ ಈ ಪಿಡುಗು ಜೀವಂತವಾಗಿದ್ದು, ಸರಕಾರವೇ ಕಠಿಣ ನಿಲುವು ತಳೆಯದ ಹೊರತು ಈ ವ್ಯವಸ್ಥೆಗೆ ಕೊಣೆಗಾಲವಿಲ್ಲ.”

– ಸಿದ್ದು ಪಟ್ಟಿಹಾಳ
ಆಡಳಿತ ಅಧಿಕಾರಿಗಳು ಗ್ರಾ.ಪಂ. ಚಿಮ್ಮಡ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ

ಭಾಷಾ ನದಾಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆ

ಮೈಸೂರು ದಸರಾ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ

ಹೆಣ್ಣು ಜಗವ ಬೆಳಗುವ ದೇವತೆ :ಡಾ.ಹೊಸಮನಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದುಶ್ಚಟ ಮುಕ್ತ ಸಮಾಜಕ್ಕೆ ವ್ಯಸನಿಗಳು ಪಣತೊಡಲಿ :ಪೂಜಾರಿ
    In (ರಾಜ್ಯ ) ಜಿಲ್ಲೆ
  • ಭಾಷಾ ನದಾಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಹೆಣ್ಣು ಜಗವ ಬೆಳಗುವ ದೇವತೆ :ಡಾ.ಹೊಸಮನಿ
    In (ರಾಜ್ಯ ) ಜಿಲ್ಲೆ
  • ಬಯಲು ಬಹಿರ್ದೆಸೆ ತಡೆಯದಿದ್ದರೆ ರಸ್ತೆಯೇ ಬಂದ್!
    In (ರಾಜ್ಯ ) ಜಿಲ್ಲೆ
  • ವೈಭವದ ದಸರಾ ಆಚರಣೆಗೆ ಸಕಲ ಸಿದ್ಧತೆ :ಡಾ.ದೇವಾನಂದ
    In (ರಾಜ್ಯ ) ಜಿಲ್ಲೆ
  • ಪೌಷ್ಟಿಕ ಆಹಾರದಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಲು ಸಾಧ್ಯ
    In (ರಾಜ್ಯ ) ಜಿಲ್ಲೆ
  • ಬೇಸಿಗೆಗೂ ಮುನ್ನವೇ ಚಿಂಚೋಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಗೆ ೩೭೧(ಜೆ) ಮೀಸಲಾತಿಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಮರಡಿಸಿದ್ದೇಶ್ವರ ದೇವಸ್ಥಾನದಲ್ಲಿ ಘಟಸ್ಥಾಪನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.