ಉದಯರಶ್ಮಿ ದಿನಪತ್ರಿಕೆ
ಬಸವನ ಬಾಗೇವಾಡಿ: ಹೆಣ್ಣು ಎಂದರೆ ಒಂದು ಅದ್ಭುತ ಶಕ್ತಿ. ಆಕೆ ತನ್ನ ಕುಟುಂಬವನ್ನು ಮಾತ್ರವಲ್ಲದೇ ಇಡೀ ಸಮಾಜವನ್ನು ತದ್ದಿ-ತೀಡಿ, ಸಾಮಾಜಿಕ ಪರಿವರ್ತನೆಯಲ್ಲಿ ಪಾತ್ರ ಅನನ್ಯವಾದುದು ಎಂದು ಪ್ರಾಂಶುಪಾಲರಾದ ಡಾ. ನೀಲಪ್ಪ ಹೊಸಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡಕ್ರಾಸ್ ಘಟಕದಡಿಯಲ್ಲಿ ಅವರು ಮಾತನಾಡುತ್ತಾ, ಬೇಟಿ ಬಚಾವೋ ಬೇಟಿ ಪಡಾವೋ ಎಂಬಂತೆ ಹುಟ್ಟುವ ಪ್ರತಿ ಹೆಣ್ಣು ಮಗುವಿಗೆ ಒಳ್ಳೆಯ ಶಿಕ್ಷಣ ನೀಡುವಂತಾಗಬೇಕು. ಹೆಣ್ಣು ಮನೆಗೆ ಹುಣ್ಣು ಎಂಬ ತಾತ್ಸಾರ ಭಾವ ತ್ಯಜಿಸಿ, ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬವಾದ ಹೆಣ್ಣು ಮಗುವನ್ನು ಗೌರವಿಸಬೇಕು ಎಂದರು.
ಈ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ಸಂತೋಷ ಕಬಾಡೆ, ಡಾ. ಹೆಚ್.ಎಂ.ನಾಟೀಕಾರ, ರೆಡಕ್ರಾಸ್ ಘಟಕದ ಸಂಚಾಲಕಿ ಪ್ರೊ. ಲೀಲಾವತಿ.ಸಿ., ಪ್ರೊ. ಶ್ರೀಶೈಲ ಬಳವಾಟ, ಪ್ರೊ. ಎಸ್.ಬಿ.ಜಾಲವಾದಿ, ಡಾ. ಪ್ರಿಯಾಂಕಾ ಜಿಂದೆ, ಪ್ರೊ. ಇಸ್ಮಾಯಿಲ್ ಶಫಿಯುಲ್ಲ, ಡಾ. ಸುರೇಶ ಡಬ್ಬಿ, ಪ್ರೊ. ರಾಘವೇಂದ್ರ ಗುರಜಾಳ, ಎಸ್.ಬಿ. ವಡ್ಡೋಡಗಿ, ರೇಣುಕಾ ಹೆಬ್ಬಾಳ, ನಂದಪ್ಪ ಬಿರಾದಾರ, ರವಿ ಗೌಡರ, ರಮೇಶ ಕಡೇಮನಿ, ಶ್ರೀಶೈಲ ಪೂಜಾರಿ, ಲಕ್ಷ್ಮಣಗೌಡ ಪಾಟೀಲ, ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

