ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಗಳ ಕ್ಷೇಮಾಭಿವೃದ್ಧಿ ಸಂಘ (ನೋಂ.), ಬೆಂಗಳೂರಿನ ನೂತನ ರಾಜ್ಯಾಧ್ಯಕ್ಷರಾಗಿ ವಿಜಯಪುರ ಜಿಲ್ಲೆಯ ಯಂಕಂಚಿ ಗ್ರಾಮ ಪಂಚಾಯಿತಿಯ ಗ್ರೇಡ್-೧ ಕಾರ್ಯದರ್ಶಿ ಭಾಷಾ ನದಾಫ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಯಂಕಂಚಿ ಗ್ರಾಮ ಪಂಚಾಯಿತಿಯ ಗ್ರೇಡ್-೧ ಕಾರ್ಯದರ್ಶಿಯೊಬ್ಬರು ರಾಜ್ಯಮಟ್ಟದ ಸಂಘಟನೆಯ ಉನ್ನತ ಜವಾಬ್ದಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಮಟ್ಟಿಗೆ ಗಮನಾರ್ಹ ಸಂಗತಿಯಾಗಿದೆ. ಗ್ರಾಮ ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಗಳ ಕ್ಷೇಮಾಭಿವೃದ್ಧಿ, ಸೇವಾ ಹಿತಾಸಕ್ತಿಗಳ ರಕ್ಷಣೆ ಮತ್ತು ಸಂಘಟನೆಯ ಬಲವರ್ಧನೆಗೆ ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಂಘವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂಬುದು ಸದಸ್ಯರ ಆಶಯವಾಗಿದೆ.

