Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸೆ.೨೯ಕ್ಕೆ ‘ಹುಬ್ಬಳ್ಳಿ ಚಲೋ’: ಕೇಂದ್ರ ಸಚಿವ ಮನೆ ಎದುರು ಪ್ರತಿಭಟನೆ

ಚೆಸ್‌: ರಾಜ್ಯ ಮಟ್ಟಕ್ಕೆ ಸಿದ್ದು ತಳಗೆರೆ ಆಯ್ಕೆ

ಎನ್ನೆಸ್ಸೆಸ್ ಶಿಸ್ತು ನಾಯಕತ್ವ ಬೆಳೆಸುವ ವೇದಿಕೆ :ಸಾತಿಹಾಳ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸರ್ಕಾರಿ ಅಕ್ಕಿ ಅಕ್ರಮ ಸಾಗಾಟ: ಯುವಕನ ಬಂಧನ
(ರಾಜ್ಯ ) ಜಿಲ್ಲೆ

ಸರ್ಕಾರಿ ಅಕ್ಕಿ ಅಕ್ರಮ ಸಾಗಾಟ: ಯುವಕನ ಬಂಧನ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪಿಕ್‌ಅಪ್ ವಾಹನ, 44 ಅಕ್ಕಿ ಚೀಲ ಸೇರಿ ₹2.60 ಲಕ್ಷ ಮೌಲ್ಯದ ವಸ್ತು ಜಪ್ತಿ | ಇಬ್ಬರು ಪರಾರಿ

ಉದಯರಶ್ಮಿ ದಿನಪತ್ರಿಕೆ

ಚಡಚಣ: ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಲಾಗುವ ಅಕ್ಕಿಯನ್ನು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪದ ಮೇಲೆ ಚಡಚಣ ಪೊಲೀಸರು ಓರ್ವನನ್ನು ಬಂಧಿಸಿ, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಡಚಣ ಪಟ್ಟಣದ ದೇವರನಿಂಬರಗಿ ಕ್ರಾಸ್ ಬಳಿ ಸೆ.23ರಂದು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ಬಂಧಿತನನ್ನು ಚಡಚಣ ನಿವಾಸಿ ಆರೀಫ್ ಖಾಜಾಸಾಬ ಪಠಾಣ (18) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಹುಸೇನಬಾಷಾ ಗೈಬೀಸಾಬ ಟಪಾಲ ಹಾಗೂ ಶುಭಂ ಭಗವಾನ ಕ್ಷತ್ರಿ ಎಂಬುವರು ಆರೋಪಿಗಳಾಗಿದ್ದು, ಇಬ್ಬರೂ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರ ನಿರೀಕ್ಷಕ ಶಿವಾನಂದ ಸದಾಶಿವ ಕೋಳಿ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಲೈಸನ್ಸ್ ಪಡೆಯದೇ, ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೊಲೀಸರು ಆರೋಪಿಯಿಂದ ಕೆಎ-30 ಎ-3031 ಸಂಖ್ಯೆಯ ಪಿಕಪ್ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯ ₹2 ಲಕ್ಷ ಎಂದು ತಿಳಿಸಲಾಗಿದೆ. ಅಲ್ಲದೆ, ಸುಮಾರು 45–50 ಕೆ.ಜಿ. ತೂಕದ 44 ಅಕ್ಕಿ ಚೀಲಗಳು, ಒಟ್ಟು 2,290 ಕೆ.ಜಿ. ಅಕ್ಕಿ ಹಾಗೂ ಪರೀಕ್ಷೆಗಾಗಿ ಪಡೆದ 2 ಕೆ.ಜಿ. ಅಕ್ಕಿ ಮಾದರಿ ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಲಾದ ಅಕ್ಕಿಯ ಮೌಲ್ಯ ₹60,914 ಎಂದು ಅಂದಾಜಿಸಲಾಗಿದ್ದು, ವಾಹನ ಸೇರಿದಂತೆ ಒಟ್ಟು ಜಪ್ತಿ ವಸ್ತುಗಳ ಮೌಲ್ಯ ₹2,60,967.20 ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆ–1955ರ ಕಲಂ 3 ರೆ/ವು ಹಾಗೂ 7 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಿಎಸ್‌ಆಯ್ ಅರವಿಂದ ಅಂಗಡಿ ಹೇಳಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸೆ.೨೯ಕ್ಕೆ ‘ಹುಬ್ಬಳ್ಳಿ ಚಲೋ’: ಕೇಂದ್ರ ಸಚಿವ ಮನೆ ಎದುರು ಪ್ರತಿಭಟನೆ

ಚೆಸ್‌: ರಾಜ್ಯ ಮಟ್ಟಕ್ಕೆ ಸಿದ್ದು ತಳಗೆರೆ ಆಯ್ಕೆ

ಎನ್ನೆಸ್ಸೆಸ್ ಶಿಸ್ತು ನಾಯಕತ್ವ ಬೆಳೆಸುವ ವೇದಿಕೆ :ಸಾತಿಹಾಳ

ಎನ್ನೆಸ್ಸೆಸ್‌ನಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ :ಹೆಗ್ಗನದೊಡ್ಡಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸೆ.೨೯ಕ್ಕೆ ‘ಹುಬ್ಬಳ್ಳಿ ಚಲೋ’: ಕೇಂದ್ರ ಸಚಿವ ಮನೆ ಎದುರು ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಚೆಸ್‌: ರಾಜ್ಯ ಮಟ್ಟಕ್ಕೆ ಸಿದ್ದು ತಳಗೆರೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಎನ್ನೆಸ್ಸೆಸ್ ಶಿಸ್ತು ನಾಯಕತ್ವ ಬೆಳೆಸುವ ವೇದಿಕೆ :ಸಾತಿಹಾಳ
    In (ರಾಜ್ಯ ) ಜಿಲ್ಲೆ
  • ಎನ್ನೆಸ್ಸೆಸ್‌ನಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ :ಹೆಗ್ಗನದೊಡ್ಡಿ
    In (ರಾಜ್ಯ ) ಜಿಲ್ಲೆ
  • ತಡವಲಗಾದಲ್ಲಿ ಮುಂದುವರೆದ ರೈತರ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆ ಎಲ್ಲ ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಅಕ್ಕಿ ಅಕ್ರಮ ಸಾಗಾಟ: ಯುವಕನ ಬಂಧನ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿವೇತನ ಉನ್ನತ ಶಿಕ್ಷಣ ಮುಂದುವರಿಸಲು ಸಹಕಾರಿ
    In (ರಾಜ್ಯ ) ಜಿಲ್ಲೆ
  • ಶ್ರೀಮಂತ ಹಡಪದ ’ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಕೆರೆ ಭರ್ತಿಯ ಹೋರಾಟಗಾರ ಕುಂಬಾರ ಇನ್ನಿಲ್ಲ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.