ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತರಾಗದೆ, ಸಮಾಜದೊಂದಿಗೆ ಬೆರೆತು ಅದರ ಸಮಸ್ಯೆಗಳನ್ನು ಅರಿತುಕೊಂಡು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಕ್ಕಳ ಸಾಹಿತಿ ಎಸ್.ಎಸ್.ಸಾತಿಹಾಳ ಹೇಳಿದರು.
ಸಿಂದಗಿ ನಗರದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ರಾಷ್ಟಿçÃಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎನ್‌ಎಸ್‌ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿವೆ. ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ಸೇವೆ ಸಲ್ಲಿಸುವ ಮೂಲಕ ಮತ್ತೊಬ್ಬರ ಬದುಕಿನಲ್ಲಿ ಸಂತೋಷ ಮೂಡಿಸುವುದೇ ನಿಜವಾದ ಸಾರ್ಥಕತೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ‘ನನಗಾಗಿ ಅಲ್ಲ, ನಾವೆಲ್ಲರಿಗಾಗಿ’ ಎಂಬ ಎನ್‌ಎಸ್‌ಎಸ್‌ನ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಮಾತನಾಡಿ, ಸ್ವಯಂಸೇವಾ ಮನೋಭಾವದಿಂದ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಶ್ರೇಷ್ಠವಾದ ಸೇವೆಯಾಗಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಪ್ರಸನ್ ಜೋಗೂರ ಮಾತನಾಡಿದರು.
ಗಣರಾಜ್ಯೋತ್ಸವ ಪಥಸಂಚಲನದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಭಾಗೇಶ ನಾವಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಿ.ವ್ಹಿ.ಮಹಲಿನಮಠ, ಬಿ.ಬಿ.ಜಮಾದಾರ, ಎನ್.ಬಿ.ಪೂಜಾರಿ, ಶಿವಶರಣ ಬೂದಿಹಾಳ, ಡಾ.ಶರಣಬಸವ ಜೋಗೂರ, ಎಸ್.ಜಿ.ಪಾಟೀಲ, ಎಸ್.ಎಚ್.ಜಾಧವ್, ರಾಹುಲ ನಾರಾಯಣಕರ್, ಸುಭಾಸ ಹೊಸಮನಿ ಎನ್.ಎಂ.ಶೆಳ್ಳಗಿ, ಚಂದು ಬಬಲೇಶ್ವರ್, ಗವಿಸಿದ್ದಪ್ಪ ಆನೆಗುಂದಿ, ಎಸ್.ಜಿ.ಮಾರ್ಸನಳ್ಳಿ, ವ್ಹಿ.ಕೆ.ಹಿರೇಮಠ, ಶಿವಯೋಗಿ ತಾಳಿಕೋಟಿ, ಆರ್.ಎಂ.ಕೊಳ್ಳೂರೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

