ಬಬಲಾದ ಗ್ರಾಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಬಿ ರಾಮಜಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಗ್ರಾಮೀಣ ಬದುಕಿಗೆ ಬಲ ನೀಡುವ ಜಾಬ್ ಕಾರ್ಡ ಹೊಂದಿರುವ ಪ್ರತಿ ಅರ್ಹ ಕುಟುಂಬಕ್ಕೆ ೧೨೫ ದಿನಗಳ ಕೂಲಿ ಉದ್ಯೋಗ ಒದಗಿಸಲಾಗುತ್ತಿದ್ದು ಇದರ ಮೂಲಕ ಗ್ರಾಮೀಣ ಜನರ ಜೀವನೋಪಾಯಕ್ಕೆ ಮತ್ತಷ್ಟು ಬಲ ನೀಡಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ತಾಲೂಕಿನ ಬಬಲಾದ ಗ್ರಾಮದ ಪಂಚಾಯತ ವ್ಯಾಪ್ತಿಯ ಬಬಲಾದ ಗ್ರಾಮದ ಹೊರವಲಯದಲ್ಲಿ ವಿಬಿ ಜಿ ರಾಮಜಿ ಯೋಜನೆಯಡಿ ನಡೆಯುತ್ತಿರುವ ಅರಣ್ಯ ಪ್ರದೇಶದ ನೀರು ಇಂಗು ತೊಟ್ಟಿ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಕಾಮಗಾರಿಯಲ್ಲಿ ನಿರತರಾಗಿದ್ದ ಕೂಲಿಕಾರರ ಜೊತೆ ಸಂವಾದ ನಡೆಸಿ ಅವರ ಸಮಸ್ಯೆ ಆಲಿಸಿದರು.
ಇದೇ ವೇಳೆ ಕಾರ್ಮಿಕರೊಂದಿಗೆ ಶ್ರಮದಾನದಲ್ಲಿ ಪಾಲ್ಗೊಂಡು ಗ್ರಾಮೀಣ ಅಭಿವೃದ್ದಿಯಲ್ಲಿ ಜನರ ಸಹಭಾಗಿತ್ವ ಮಹತ್ವ ವಿವರಿಸಿದರು.
ತಾಪಂ ಇಒ ಮಹಾದೇವಪ್ಪ ಏವೂರ, ಸಹಾಯಕ ನಿರ್ದೇಶಕ ಸಂಜಯ ಖಡಗೇಕರ, ಪ್ರಕಾಶ ರಾಠೋಡ, ಸೋಮಣ್ಣ ಪ್ರಚಂಡಿ, ಪಿಡಿಒ ಸಿ.ಜಿ.ಪಾರೆ, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶಗೌಡ ಬಿರಾದಾರ, ಮಲ್ಲು ಬೋಸಗಿ, ಕಾಮಣ್ಣ ದಶವಂತ, ಅಶೀಕಗೌಡ ಬಿರಾದಾರ, ಕ್ಷೇತ್ರಶಿಕ್ಷಣಾಧಿಕಾರಿ ಮೋಹನ ಕುಮಾರ ಬಳ್ಳೊಳ್ಳಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಾವಕಾರ, ಎ.ಸಿ.ಹುಣಸಗಿ ಮತ್ತಿತರಿದ್ದರು.

