ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ಯುವಕರು ನಾಳಿನ ಪ್ರಜೆಗಳು ಎಂಬಂತೆ 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡು ತಮ್ಮ ರಾಜಕೀಯ ಹಕ್ಕು ಹಾಗೂ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕೆಂದು ಆರ್ ಡಿ ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಬಿ ಎಂ ಸಿಂಗನಹಳ್ಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರತಿಷ್ಠಿತ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್ ಡಿ ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಸಂಘದ ಇ ಎಲ್ ಸಿ ವತಿಯಿಂದ ಆಯೋಜಿಸಿದ್ದ ಎಸ್ಐಆರ್ 2026 ಹಾಗೂ ಯುವ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ಮತದಾನದ ಮಹತ್ವ ಕುರಿತು ಚುನಾವಣಾ ಆಯೋಗದ ಸಂದೇಶದಂತೆ ಯಾರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಆರ್ ಡಿ ಪಾಟೀಲ್ ಪದವಿಪೂರ್ವ ಕಾಲೇಜಿನ ಇ ಎಲ್ ಸಿ ನೋಡಲ್ ಅಧಿಕಾರಿ ಎನ್. ಬಿ. ಪೂಜಾರಿ ಪ್ರಾಸ್ತಾವಿಕವಾಗಿ ಹೇಳಿದರು.
18 ವರ್ಷ ಪೂರ್ಣಗೊಂಡ ಯುವಕರು ಇದರ ಸದುಪಯೋಗ ಪಡೆದುಕೊಂಡು ನಮೂನೆ -6 ಭರ್ತಿ ಮಾಡುವ ಮೂಲಕ ಸುಮಾರು 22 ವಿದ್ಯಾರ್ಥಿಗಳು ಈಸಿಐ ನೆಟ್ ಯಾಪ್ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲು ನಮೂನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕಾದ ಡಾ. ಬಿ ಬಿ ಜಮಾದಾರ್, ಪಿ ವಿ ಮಹಲಿನ ಮಠ, ಎಸ್ ಎಚ್ ಜಾದವ್, ಗವಿಸಿದ್ದಪ್ಪ ಆನೆಗುಂದಿ, ಎಸ್ ಆರ್ ಬೂದಿಹಾಳ, ಎಸ್‌ಜಿ ಪಾಟೀಲ್, ಆರ್ ಎಂ ಕೊಲ್ಲೂರು, ರಾಹುಲ್ ಕುನ್ನಲ್ ಹಾಗೂ ಉದಯ ಶಿವಶಂಪಿಗೆರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

