ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ತೀವ್ರ ಬರಗಾಲ ಮತ್ತು ಖಾಸಗಿ ಫೈನಾನ್ಸ್‌ಗಳ ಸಾಲದ ಸುಳಿಗೆ ಸಿಲುಕಿದ ರೈತರೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜೆಟ್ಟೆಪ್ಪ ಭೀಮಪ್ಪ ದೊಡ್ಡಮನಿ (೫೫) ಆತ್ಮಹತ್ಯೆಗೆ ಶರಣಾದ ದುರ್ದೈವಿ ರೈತ. ಮೃತರ ಬಳಿ ಕೇವಲ ಒಂದುವರೆ ಎಕರೆ ಜಮೀನಿದ್ದು, ಮಳೆಯಿಲ್ಲದೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಕೃಷಿ ನಿರ್ವಹಣೆ ಮತ್ತು ಕುಟುಂಬದ ನಿರ್ವಹಣೆಗಾಗಿ ಇವರು ಇಎಸ್ಎಎಫ್ ಹಾಗೂ ಫೈವ್ ಸ್ಟಾರ್ ಬಿಜಿನೆಸ್ ಫೈನಾನ್ಸ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳಿಂದ ಮತ್ತು ಊರಿನವರಲ್ಲಿ ಕೈಗಡವಾಗಿ ಒಟ್ಟು ಸುಮಾರು ₹೪.೫೦ ಲಕ್ಷ ಸಾಲ ಮಾಡಿದ್ದರು.

