ಚಡಚಣ ತಾಲೂಕು ಪೂರ್ಣ ಪ್ರಮಾಣದಲ್ಲಿ ಬರಗಾಲ ಘೋಷಣೆಗೆ ಹಸಿರು ಸೇನೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕನ್ನು ಪೂರ್ಣ ಪ್ರಮಾಣದ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವವರೆಗೂ ತಹಶೀಲದಾರ ಕಛೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವದು ಎಂದು ರಾಜ್ಯ ಹಸಿರು ಸೇನೆ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಇದೇ 22 ಮಂಗಳವಾರ ಪ್ರವಾಸಿ ಮಂದಿರದಿಂದ ಬ್ರಹತ್ ಪ್ರತಿಭಟನಾ ರ್ಯಾ ಲಿ ಮೂಲಕ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ನಂತರ ತಹಶೀಲದಾರ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ ಅವರು, ಚಡಚಣ ತಾಲೂಕನ್ನು ಈ ಮೊದಲು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿದ 101 ತಾಲೂಕಗಳ ಪಟ್ಟಿಯಲ್ಲಿ ಚಡಚಣ ತಾಲೂಕನ್ನು ಪೂರ್ಣ ಪ್ರಮಾಣದ ಬರಗಾಲ ಪೀಡಿತ ತಾಲೂಕಾಗಿ 102ನೇ ತಾಲೂಕಾಗಿ ಘೋಷಣೆ ಮಾಡಬೇಕು ಹಾಗೂ ಚಡಚಣ ಏತ ನೀರಾವರಿ ಸಂಪೂರ್ಣ ಹಳ್ಳ ಹಿಡಿದಿದ್ದು, ಏತ ನೀರಾವರಿ ಕಾಮಗಾರಿಯನ್ನು ಸರಿಪಡಿಸಿ ಎಲ್ಲ ರೈತರ ಜಮೀನುಗಳಿಗೆ ನೀರು ಸರಬರಾಜಾಗುವಂತೆ ಮಾಡಬೇಕು, ತಾಲೂಕಿನ ಎಲ್ಲ ಕೆರೆಗಳನ್ನು ತುಂಬುವ ತನಕ ಅನಿರ್ದಾಷ್ಟವಧಿ ಧರಣಿ ನಡೆಸಲಾಗುವದು ಎಂದರು.
ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ರೈತೋದಯದ ಜಿಲ್ಲಾ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ, ಕರವೇ ವಲಯಾಧ್ಯಕ್ಷ ಸೋಮಶೇಖರ ಕಂಬಾರ, ಭೀಮ ಸೇನೆ ತಾಲೂಕಾಧ್ಯಕ್ಷ ರುದ್ರೇಶ ಬನಸೋಡೆ, ರೈತ ಮುಖಂಡರಾದ ಸಂತೋಷ ಭೈರಗೊಂಡ, ಘೇನಪ್ಪ ಬಿರಾದಾರ, ಉತ್ತಮ ಕಾರಬಾರಿ, ಹಣಮಂತ ಪೀರಗೊಂಡ, ಅಜೀತ ವಾಲಿ, ರಮೇಶ ಬಬಲಾದಿ, ಆಕಾಶ ಪಾಟೀಲ ಸೇರಿದಂತೆ ಮತ್ತಿತರ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

