ಡಾ.ಎಂ.ಬಿ.ಪಾಟೀಲರ ಜನ್ಮದಿನದ ಪ್ರಯುಕ್ತ ಕ್ರಿಕೆಟ್ ಟೂರ್ನಮೆಂಟ್ | ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಉತ್ಸಾಹದ ಭಾಗಿತ್ವ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಡಾ.ಎಂ.ಬಿ.ಪಾಟೀಲರ ಹುಟ್ಟು ಹಬ್ಬದ ನಿಮಿತ್ತ ಬಿ.ಎಲ್.ಡಿ.ಇ. ಸಂಸ್ಥೆಯ ತಿಕೋಟಾದ ಶ್ರೀ ಎ.ಬಿ.ಜತ್ತಿ ಕಾಲೇಜಿನ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಮೆಂಟ್ ಗೆ ಶುಕ್ರವಾರ ತೆರೆ ಬಿದ್ದಿತು.
ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಅಂತರ್ ಶಾಲಾ ಕಾಲೇಜುಗಳ ಬೋಧಕ
ಸಿಬ್ಬಂದಿ ತಂಡಗಳು ಮತ್ತು ವಿದ್ಯಾರ್ಥಿ ತಂಡಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಗೊಳಿಸಲಾಯಿತು.
ಶುಕ್ರವಾರ ದಿನ ನಡೆದ ಅಂತಿಮ ಫೈನಲ್ ಪಂದ್ಯದಲ್ಲಿ ಶ್ರೀ ಎ.ಬಿ.ಜತ್ತಿ ಪ್ರೌಢ ಶಾಲೆಯ ಉಪಪ್ರಾಚಾರ್ಯ ಜೆ.ಎಂ.ಪಾಟೀಲ ನಾಯಕತ್ವದ ಸಿಬ್ಬಂದಿ ತಂಡವು ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಿಬ್ಬಂದಿ ತಂಡವನ್ನು ಪರಾಭವಗೊಳಿಸಿ, ಪ್ರಥಮ ಸ್ಥಾನದ ಟ್ರೋಫಿ ಪಡೆದುಕೊಂಡಿತು. ಇನ್ನು ವಿದ್ಯಾರ್ಥಿಗಳ ವಿಭಾಗದಿಂದ ನಡೆದ
ಫೈನಲ್ ಪಂದ್ಯದಲ್ಲಿ ಶ್ರೀ ಎ.ಬಿ.ಜತ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡವನ್ನು ನರ್ಸಿಂಗ್ ಮಹಾವಿದ್ಯಾಲಯದ ತಂಡ ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು.
ರನ್ನರ್ ಆಫ್ ಆದ ನೂತನ ಕಲಾ ಮಹಾವಿದ್ಯಾಲಯ ಸಿಬ್ಬಂದಿ ತಂಡ, ಶ್ರೀ ಎ.ಬಿ.ಜತ್ತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ತಂಡಕ್ಕೆ ದ್ವಿತೀಯ ಸ್ಥಾನದ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ
ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ, ನರ್ಸಿಂಗ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಕಾಶ ಸಿದ್ದಾಪುರ,
ಶ್ರೀ ಎ.ಬಿ.ಜತ್ತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಎ.ಹೊಸಟ್ಟಿ, ಶ್ರೀ ಎ.ಬಿ.ಜತ್ತಿ ಪದವಿಪೂರ್ವ ಕಾಲೇಜು (ಮಾಧ್ಯಮಿಕ ವಿಭಾಗ) ಉಪ ಪ್ರಾಂಶುಪಾಲ ಜಗದೀಶಗೌಡ ಪಾಟೀಲ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಸ್.ಬೆಳಗಲಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಆರ್.ದೇಸಾಯಿ,ಕಚೇರಿ ಅಧೀಕ್ಷಕ ಎಸ್.ಪಿ.ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕ ದಯಪ್ಪಗೌಡ ಪಾಟೀಲ , ಬಿ.ಎಲ್. ನಾಟೀಕಾರ, ದೈಹಿಕ ಶಿಕ್ಷಕ ಕಲ್ಯಾಣಿ, ನಿವೃತ್ತ ಶಿಕ್ಷಕ ಡಿ.ಬಿ.ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ತಿಕೋಟಾ ಶಾಲಾ ಕಾಲೇಜುಗಳ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

