Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಿಂದಗಿಯಲ್ಲಿ ಯುವ ಮತದಾರರ ಮಿಂಚಿನ ನೋಂದಣಿ ಜಾಗೃತಿ

ಮೊಬೈಲ್–ಟಿವಿ ಬಿಟ್ಟು ಪುಸ್ತಕ ಹಿಡಿಯಿರಿ :ನಾರಾಯಣ ಶಾಸ್ತ್ರಿ

ಗಣಪ ಹೋದ ಜೋಕುಮಾರ ಬಂದ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಅನಿಸುತಿದೆ ಯಾಕೋ ಇಂದು.. ನೀನಿಲ್ಲದೆ ಬದುಕಲಾರೆ ಗೆಳತಿ!
ವಿಶೇಷ ಲೇಖನ

ಅನಿಸುತಿದೆ ಯಾಕೋ ಇಂದು.. ನೀನಿಲ್ಲದೆ ಬದುಕಲಾರೆ ಗೆಳತಿ!

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಜಯಶ್ರೀ ಅಬ್ಬಿಗೇರಿ.ಇಂಗ್ಲೀಷ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ
ನನ್ನ ಬಾಳಿನ ದೇವತೆಗೆ,
ಕಚೇರಿಯ ನಾಲ್ಕು ಗೋಡೆಗಳ ನಡುವೆ, ಗಣಕಯಂತ್ರದ ಕೀಲಿಗಳ ಸದ್ದಿನ ಮಧ್ಯೆ ಹುಟ್ಟಿದ ನಮ್ಮ ಪ್ರೀತಿ, ಇಂದು ಹಸಿರ ಕಾನನದ ಮಡಿಲಲ್ಲಿ ಮಧುರ ಕಾವ್ಯವಾಗಿ ಅರಳಿದೆ. ನೀನು ಕೇವಲ ನನ್ನ ಸಹೋದ್ಯೋಗಿಯಲ್ಲ, ನನ್ನ ಬದುಕಿನ ಪ್ರತಿ ಪುಟದಲ್ಲೂ ಲಗೋರಿ ಆಟದಂತೆ ಖುಷಿ ತುಂಬಿದ ದೇವತೆ. ಕಾಡಿನ ಮರಗಳ ನಡುವೆ ಸೂರ್ಯನ ಕಿರಣಗಳು ಜಾರುವಾಗ, ನಿನ್ನ ಮೊಗದ ಮೇಲೆ ಮೂಡುವ ನಸುನಗು ನನ್ನ ಹೃದಯವನ್ನು ಲಗೋರಿಯ ಮೊದಲ ಕಲ್ಲಿನಂತೆ ಬಡಿದು ಉರುಳಿಸುತ್ತದೆ. ನಿನ್ನ ಆ ದಟ್ಟವಾದ ಮುಂಗುರುಳು, ತಂಗಾಳಿಗೆ ಸಿಕ್ಕಿ, ಕೆನ್ನೆಯನ್ನು ಸವರುವಾಗ, ಅರಣ್ಯದ ಒಟ್ಟು ಸೌಂದರ್ಯವೇ ನಿನ್ನಲ್ಲಿ ಬಂದು ನೆಲೆಸಿದಂತೆ ಭಾಸವಾಗುತ್ತದೆ. ಪ್ರಕೃತಿಯ ಹಸಿರು ಉಡುಪಿಗೆ ನಿನ್ನ ನಗುವೇ ಆಭರಣ. ಹಕ್ಕಿಗಳ ಚಿಲಿಪಿಲಿ ಧ್ವನಿಯೂ ನಿನ್ನ ಮಾತಿನ ಸವಿಗಾನದ ಮುಂದೆ ಮಂಕಾಗುತ್ತದೆ.


ನಿನ್ನ ಹುಟ್ಟುಹಬ್ಬದ ದಿನ ಮಾಣಿಕ್ಯ ಕೆಂಪಿನ ರೇಷ್ಮೆ ಸೀರೆಯನ್ನುಟ್ಟು ಬಂದಾಗ, ಕಚೇರಿಯ ಕಾಂಕ್ರೀಟ್ ಗೋಡೆಗಳ ನಡುವೆಯೂ ಸಿಂಗಾರಗೊಂಡ ವಸಂತವೇ ಧರೆಗಿಳಿದಂತೆ ಭಾಸವಾಯಿತು. ಚಿನ್ನದ ಕಸುಪಿನ ಅಂಚುಗಳು ನಿನ್ನ ಪ್ರತಿ ಹೆಜ್ಜೆಯಲ್ಲೂ ಮಿಂಚಿನಂತೆ ಹೊಳೆಯುತ್ತಿತ್ತು. ಸೀರೆಗಳ ತಕ್ಕಂತೆ ನೀನು ತೊಟ್ಟಿದ್ದ ಕರಾರುವಾಕ್ಕಾದ ಕಸೂತಿಯ ರವಿಕೆಯು ನಿನ್ನ ಗಂಭೀರ ಶಿಸ್ತಿಗೆ ಸಾಂಪ್ರದಾಯಿಕ ಕಳೆಯನ್ನು ನೀಡಿತ್ತು. ನೀಳ ಕುತ್ತಿಗೆಯಲ್ಲಿ ಮಿನುಗುವ ಚಿನ್ನದ ಸರ, ಕಿವಿಯಲ್ಲಿ ಅಲುಗಾಡುವ ಮುತ್ತಿನ ಜುಮುಕಿ ಹಾಗೂ ಕೈಬಳೆಗಳ ಸದ್ದು ನಿನ್ನ ವೃತ್ತಿಪರ ಮೌನಕ್ಕೆ ಕಾವ್ಯದ ನಾದವನ್ನು ತುಂಬಿತ್ತು. ಹಣೆಯ ಮೇಲಿನ ಅಂದದ ಬೊಟ್ಟು, ಕಣ್ಣಂಚಿನ ಕಾಡಿಗೆಯ ತೀಕ್ಷ್ಣ ನೋಟ ಮತ್ತು ತುಟಿಗಳ ಮೇಲೆ ಅರಳಿದ ಆ ಮುಗುಳು ನಗು ನಿನ್ನ ಸೌಂದರ್ಯವನ್ನು ಮುಗಿಲಿನ ಎತ್ತರಕ್ಕೆ ಕೊಂಡೊಯ್ದಿತ್ತು. ಹುಟ್ಟುಹಬ್ಬದ ಈ ವಿಶೇಷ ದಿನದಂದು ನಿನ್ನ ಆ ದೇವತೆಯಂತಹ ರೂಪವು ಎಲ್ಲರ ಕಣ್ಣಿಗೆ ಹಬ್ಬದಂತೆ ಕಂಡುಬಂತು.


ನೆನಪಿದೆಯೇ ಗೆಳತಿ? ಅಂದು ಆಫೀಸಿನಲ್ಲಿ ಅತ್ಯಂತ ಕಠಿಣವಾದ ಪ್ರಾಜೆಕ್ಟ್ ಡೆಡ್‌ಲೈನ್ ಇದ್ದಾಗ, ಇಡೀ ಟೀಮ್ ಒತ್ತಡದಲ್ಲಿದ್ದಾಗ ನೀನು ನನಗೆ ತಿಳಿಯದಂತೆ ನನ್ನ ಡೆಸ್ಕ್ ಮೇಲೆ ತಂದಿಟ್ಟ ಆ ಬಿಸಿ ಬಿಸಿ ಫಿಲ್ಟರ್ ಕಾಫಿ ಕಪ್! ಆ ಕಾಫಿಯ ಘಮಲಿಗಿಂತ ಹೆಚ್ಚಾಗಿ ನಿನ್ನ ಕಣ್ಣುಗಳಲ್ಲಿದ್ದ ಕಾಳಜಿ ನನ್ನ ಆಯಾಸವನ್ನೆಲ್ಲ ಮರೆಸಿತ್ತು. ಕ್ಯಾಫೆಟೀರಿಯಾದ ಆ ಮೂಲೆಯ ಸೀಟಿನಲ್ಲಿ ಕುಳಿತು, ಮ್ಯಾನೇಜರ್ ಬೈಗುಳಕ್ಕೆ ನಾವು ಒಟ್ಟಾಗಿ ನಗುತ್ತಿದ್ದ ಆ ಕ್ಷಣಗಳು ಇಂದಿಗೂ ಹಸಿರು. ಲಂಚ್ ಬ್ರೇಕ್‌ನಲ್ಲಿ ಯಾರ ಕಣ್ಣಿಗೂ ಬೀಳದಂತೆ ಆಫೀಸ್ ಟೆರೇಸ್ ಮೇಲಿನ ಆ ಸಣ್ಣ ನೆರಳಿನಲ್ಲಿ ಕುಳಿತು, ನೀನು ತಂದಿದ್ದ ಬುತ್ತಿಯನ್ನು ಹಂಚಿ ತಿನ್ನುವಾಗ, ನಾವಾಡುತ್ತಿದ್ದ ಆ ಮುದ್ದಾದ ಸರಸದ ಮಾತುಗಳು ನನ್ನ ದಿನದ ಅತ್ಯಂತ ಸುಂದರ ಕ್ಷಣಗಳಾಗಿದ್ದವು. “ನೀನು ನನ್ನ ಪಾರ್ಟ್ನರ್ ಆಗದಿದ್ದರೆ ಮ್ಯಾನೇಜರ್‌ಗೆ ಕಂಪ್ಲೇಂಟ್ ಮಾಡ್‌ತೀನಿ” ಎಂದು ನೀನು ಕಣ್ಣು ಮಿಟುಕಿಸಿ ರೇಗಿಸುತ್ತಿದ್ದ ಆ ಚೇಷ್ಟೆ ಇಂದಿಗೂ ನನ್ನನ್ನು ನಗಿಸುತ್ತದೆ. ಟೀಮ್ ಮೀಟಿಂಗ್ ಮುಗಿದ ತಕ್ಷಣ ಸಿಕ್ರೆಟ್ ಆಗಿ ಮೆಸೇಜ್ ಕಳುಹಿಸಿ ಕಾಫಿ ಮಷೀನ್ ಹತ್ತಿರ ಸಿಗಲು ಕೋರುತ್ತಿದ್ದ ನಿನ್ನ ಆ ಕಣ್ಣ ಸನ್ನೆಯ ಮಧುರ ನೆನಪುಗಳು ಇಂದಿಗೂ ನನ್ನ ಎದೆಯಲ್ಲಿ ಹಸಿರಾಗಿವೆ. ಅಂದು ಪ್ರಸೆಂಟೇಶನ್ ಕೊಡುವಾಗ ನನ್ನ ತಪ್ಪುಗಳನ್ನು ನೀನು ನಿನ್ನ ಮುಗುಳ್ನಗೆಯಿಂದಲೇ ಸರಿಪಡಿಸಿ ಬೆಂಬಲವಾಗಿ ನಿಂತಾಗ, ಈ ಜಗತ್ತನ್ನು ಗೆಲ್ಲುವ ಧೈರ್ಯ ನನಗೆ ಬಂದಿತ್ತು. ಇನ್-ಟೈಮ್ ಕೆಲಸ ಮುಗಿಸಿ ಒಟ್ಟಿಗೆ ಲಾಗ್-ಔಟ್ ಮಾಡಿ, ಮಳೆಯ ಸಂಜೆ ಮೆಟ್ರೋ ಸ್ಟೇಷನ್‌ಗೆ ಒಂದೇ ಕೊಡೆಯಡಿ ನಡೆದ ಆ ನೆನಪು ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತಿದೆ.
ಮಂಜು ಮುಸುಕಿದ ಮುಂಜಾವಿನ ಆ ತಿಳಿ ಹಸಿರು ಕಾಡಿನಲ್ಲಿ, ಬಿದಿರು ಮೆಳೆಗಳು ತಂಗಾಳಿಗೆ ಸಿಕ್ಕಿ ಸೀಟಿಯೊತ್ತಿ ಹಾಡುವಾಗ, ನಿನ್ನ ಕೈಹಿಡಿದು ಹೆಜ್ಜೆ ಇಡುವುದೆಂದರೆ ಅದೊಂದು ಸ್ವರ್ಗೀಯ ಅನುಭೂತಿ. ಕಾಡಿನ ನಡುವೆ ಅಲೆಯುವ ಆ ಕಾಡು ತೊರೆಯ ಕಚ್ಚಾ ಹಾದಿಯಲ್ಲಿ, ಕಲ್ಲು ಮುಳ್ಳುಗಳ ನಡುವೆ ನೀನು ಸಮತೋಲನ ಕಾಯ್ದುಕೊಳ್ಳಲು ಹೆಣಗಾಡುತ್ತಾ ನನ್ನ ತೋಳನ್ನು ಗಟ್ಟಿಯಾಗಿ ಆಶ್ರಯಿಸಿದಾಗ, ನನ್ನ ಇಡೀ ಜನ್ಮ ಸಾರ್ಥಕವಾಯಿತು ಎನಿಸಿತು. ಆ ಕಾಡು ಹಾದಿಯ ಅಂಕುಡೊಂಕಾದ ಕಲ್ಲುಗಳ ಮೇಲೆ ನೀನು ಆಯತಪ್ಪಿ ಬೀಳುವಂತೆ ನಟಿಸಿ ನನ್ನನ್ನು ಇನ್ನಷ್ಟು ಹತ್ತಿರ ಸೆಳೆಯುತ್ತಿದ್ದ ಆ ನಯವಂಚಕ ಆಟ ನನ್ನ ಹೃದಯದ ಲಗೋರಿಯನ್ನು ಸಂಪೂರ್ಣವಾಗಿ ಗೆದ್ದುಕೊಂಡಿತು. ಮಳೆಬಿಲ್ಲು ಕಾಡಿನ ಮರಗಳ ಮೇಲೆ ಬಾಗಿ ನಿಂತಾಗ, ನಿನ್ನ ಕಣ್ಣುಗಳಲ್ಲಿ ಮೂಡುವ ಆ ಕಾತುರ ನನ್ನನ್ನು ದಿನವೂ ಹೊಸದಾಗಿ ಪ್ರೀತಿಸುವಂತೆ ಮಾಡುತ್ತದೆ. ಒಮ್ಮೆ ಕಾಡಿನ ಹಾದಿಯಲ್ಲಿ ಹಠಾತ್ತನೆ ಮಳೆ ಸುರಿದಾಗ, ನೀನು ನಿನ್ನ ದುಪಟ್ಟಾವನ್ನು ಇಬ್ಬರಿಗೂ ಛತ್ರಿಯಾಗಿ ಹಿಡಿದು ನಿಂತ ಆ ಕ್ಷಣ ನನ್ನ ನೆನಪಿನ ಬುತ್ತಿಯಲ್ಲಿ ಶಾಶ್ವತ. ಜಿನುಗುವ ಹನಿಗಳಿಗಿಂತ ನಿನ್ನ ಕೆನ್ನೆಯ ಮೇಲಿನ ನೀರಿನ ಹನಿಗಳೇ ಹೆಚ್ಚು ಹೊಳೆಯುತ್ತಿದ್ದವು. ಕಚೇರಿಯ ಕಡತಗಳ ಗಡಿಬಿಡಿಯಿಂದ ದೂರ ಬಂದು, ಕಾಡಿನ ಮೌನದಲ್ಲಿ ನೀನು ನನ್ನ ಹೆಗಲ ಮೇಲೆ ತಲೆಯಿಟ್ಟು ಕುಳಿತಾಗ ಜಗತ್ತಿನ ಎಲ್ಲ ಕೋಲಾಹಲಗಳೂ ಸ್ಥಬ್ಧವಾದಂತೆ ಅನಿಸಿತು. ಒಣಗಿದ ಎಲೆಗಳ ಮೇಲೆ ಜೊತೆಯಾಗಿ ಹೆಜ್ಜೆ ಇಡುತ್ತಾ, ಕಲ್ಲುಗಳನ್ನು ಒಂದರ ಮೇಲೊಂದಿಟ್ಟು ಲಗೋರಿ ಆಟವಾಡಿ, ಸೋತಾಗ ನೀನು ಮುನಿಸಿಕೊಂಡು ನಗುವ ಆ ಚಂದವನ್ನು ವರ್ಣಿಸಲು ಪದಗಳೇ ಸಾಲವು.
ಅಂದು ಕಾಡಿನ ನಡುವಿನ ಸಣ್ಣ ತೊರೆಯನ್ನು ದಾಟುವಾಗ ಭಯದಿಂದ ನೀನು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದೆ. ಆ ಸ್ಪರ್ಶ ನನ್ನ ಇಡೀ ಜನ್ಮಕ್ಕೆ ನಿಶ್ಚಿಂತೆಯ ಭಾವ ನೀಡಿತು. ಮುಸ್ಸಂಜೆಯ ಹೊತ್ತಿಗೆ ಮರಗಳ ಮರೆಯಿಂದ ಕಾಡುಹಕ್ಕಿಗಳು ಗೂಡಿಗೆ ಮರಳುವಾಗ, ನೀನು ಪ್ರಕೃತಿಯ ಮೌನಕ್ಕೆ ಧ್ವನಿಯಾಗುತ್ತಾ ಹಳೇ ಹಾಡೊಂದನ್ನು ಗುಣುಗುಣಿಸಿದ್ದೆ. ಬದುಕಿನ ಏರಿಳಿತಗಳ ಲಗೋರಿ ಆಟದಲ್ಲಿ, ಬಿದ್ದ ಕಲ್ಲುಗಳನ್ನು ಮತ್ತೆ ಜೋಡಿಸಿ ಗೆಲ್ಲುವ ಭರವಸೆ ನಿನ್ನ ಕಣ್ಣುಗಳಲ್ಲಿ ನನಗೆ ಕಾಣಿಸುತ್ತಿತ್ತು. ಈ ಸುಂದರ ಕಾಡಿನ ಮೌನ ಸಾಕ್ಷಿಯಾಗಿ, ಪ್ರಕೃತಿಯ ತಂಪಾದ ಮಡಿಲಲ್ಲಿ ನಾವಿಬ್ಬರೂ ಒಂದು ಮಹತ್ವದ
ತೀರ್ಮಾನಕ್ಕೆ ಬಂದೆವು. ಸದಾ ಕಾಲ ಹೀಗೆಯೇ ಒಂದಾಗಿರಲು, ನಮ್ಮ ಪ್ರೀತಿಯನ್ನು ಮದುವೆಯ ಬಂಧದೊಂದಿಗೆ ಅಮರವಾಗಿಸಲು ನಿರ್ಧರಿಸಿವು. ಕಚೇರಿಯ ನೆನಪಿನಿಂದ ಆರಂಭವಾಗಿ ಕಾಡಿನ ಹಸಿರಿನಲ್ಲಿ ಬೆಳೆದ ನಮ್ಮ ಒಲವು, ಇನ್ನು ಸಂಸಾರದ ಸುಂದರ ನಂದನವನವಾಗಲಿದೆ.
“ಲಗೋರಿ ಆಟದ ಕಲ್ಲುಗಳಂತೆ ಒಂದೊಂದಾಗಿ ಜೋಡಿಸಿ ಕಟ್ಟಿದ ನಮ್ಮ ಒಲವಿನ ಅರಮನೆಗೆ ಈಗ ಮಂಗಲ ಮುಹೂರ್ತದ ಸಂಭ್ರಮ.”ಕಚೇರಿಯ ಲಾಗ್-ಇನ್ ಸಮಯದಿಂದ ಆರಂಭವಾಗಿ, ಕಾಡಿನ ಹಸಿರ ಹಾದಿಯಲ್ಲಿ ಚಿಗುರಿದ ನಮ್ಮ ಪ್ರೀತಿಯ ಪಯಣವೀಗ ಹಸೆಮಣೆಯತ್ತ ಸಾಗುತ್ತಿದೆ. ಪ್ರಕೃತಿಯ ಸಾಕ್ಷಿಯಾಗಿ ನಾವು ತಗೆದುಕೊಂಡ ಈ ಮದುವೆಯ ನಿರ್ಧಾರಕ್ಕೆ, ನಿಮ್ಮ ಹರಕೆ ಮತ್ತು ಹಾರೈಕೆಗಳೇ ಆಶೀರ್ವಾದ.
ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿರುವ, ಹಕ್ಕಿಗಳ ಚಿಲಿಪಿಲಿ ಗಾನ ಹಾಗೂ ಸುಂದರ ತಂಗಾಳಿ ಬೀಸುವ “ಕಾನನ ರೇಷ್ಮೆ ಕಲ್ಯಾಣ ಮಂಟಪ, “ಇಲ್ಲಿ ನೆರವೇರುವ ನಮ್ಮ ಮದುವೆಯ ಶುಭ ಮುಹೂರ್ತಕ್ಕೆ ಹಾಗೂ ಮಂಗಲ ರಿಸೆಪ್‌ಷನ್ ಸಂಭ್ರಮಕ್ಕೆ ನಿಮ್ಮನ್ನು ನಿಮ್ಮ ಇಡೀ ಕುಟುಂಬ ಸಮೇತರಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ. ಬನ್ನಿ, ನಮ್ಮ ಪ್ರೀತಿಯ ಹೊಸ ಇನ್ನಿಂಗ್ಸ್ ಶುಭಾರಂಭದ ಸಂಭ್ರಮವನ್ನು ಹರಸಿ ಹಾರೈಸಿ ಎಂದು ಕಚೇರಿ ಬಳಗವನ್ನು ಕರೆದಿದ್ದೇನೆ. ನೀನೂ ಬಂದು ಬಿಡು ನವ ವಧುವಾಗಿ ಕಾಯುತ್ತಿದ್ದೇನೆ.
ನಿನಗಾಗಿ
ಹೊಸ ಬಾಳಿನ ಗೆಳೆಯನಾಗಿ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಿಂದಗಿಯಲ್ಲಿ ಯುವ ಮತದಾರರ ಮಿಂಚಿನ ನೋಂದಣಿ ಜಾಗೃತಿ

ಮೊಬೈಲ್–ಟಿವಿ ಬಿಟ್ಟು ಪುಸ್ತಕ ಹಿಡಿಯಿರಿ :ನಾರಾಯಣ ಶಾಸ್ತ್ರಿ

ಗಣಪ ಹೋದ ಜೋಕುಮಾರ ಬಂದ!

ಹಾಲಿ ಸಿಎಂ ಆಗಮನದ ಹೊತ್ತಿನಲ್ಲೇ ಮಾಜಿ ಸಿಎಂ ಮೂರ್ತಿ ತೆರವು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಿಂದಗಿಯಲ್ಲಿ ಯುವ ಮತದಾರರ ಮಿಂಚಿನ ನೋಂದಣಿ ಜಾಗೃತಿ
    In (ರಾಜ್ಯ ) ಜಿಲ್ಲೆ
  • ಮೊಬೈಲ್–ಟಿವಿ ಬಿಟ್ಟು ಪುಸ್ತಕ ಹಿಡಿಯಿರಿ :ನಾರಾಯಣ ಶಾಸ್ತ್ರಿ
    In (ರಾಜ್ಯ ) ಜಿಲ್ಲೆ
  • ಗಣಪ ಹೋದ ಜೋಕುಮಾರ ಬಂದ!
    In (ರಾಜ್ಯ ) ಜಿಲ್ಲೆ
  • ಹಾಲಿ ಸಿಎಂ ಆಗಮನದ ಹೊತ್ತಿನಲ್ಲೇ ಮಾಜಿ ಸಿಎಂ ಮೂರ್ತಿ ತೆರವು
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಸೇವೆಯಲ್ಲಿ ಕಂದಾಯ ಇಲಾಖೆ ಮುಂಚೂಣಿ ಪಾತ್ರ
    In (ರಾಜ್ಯ ) ಜಿಲ್ಲೆ
  • ಕರಾಟೆ ಶಿಕ್ಷಕರ ಸಂಘದ ಪದಗ್ರಹಣ: ರಾಷ್ಟ್ರ–ರಾಜ್ಯ ಮಟ್ಟದ ಸ್ಕೇಟಿಂಗ್ ಸಾಧಕರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ವಿಶ್ವ ಸಾಹಿತ್ಯಕ್ಕೆ ಕನ್ನಡದ ವಚನ ಸಾಹಿತ್ಯದ ಕೊಡುಗೆ
    In ವಿಶೇಷ ಲೇಖನ
  • ಅನಿಸುತಿದೆ ಯಾಕೋ ಇಂದು.. ನೀನಿಲ್ಲದೆ ಬದುಕಲಾರೆ ಗೆಳತಿ!
    In ವಿಶೇಷ ಲೇಖನ
  • ಸೆ.22 ರಂದು ಆರೋಗ್ಯ ಉಚಿತ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಶ್ರೀ ಎ.ಬಿ.ಜತ್ತಿ ಪ್ರೌಢಶಾಲೆ ಸಿಬ್ಬಂದಿ ತಂಡಕ್ಕೆ ಕ್ರಿಕೆಟ್ ಟ್ರೋಫಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.