Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು

23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ

ಡಾ.ರವಿ ಗೋಲಾ & ಡಾ.ಸಂದೀಪ ಪಾಟೀಲಗೆ ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು
ವಿಶೇಷ ಲೇಖನ

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ವೀಣಾ ಹೇಮಂತ್ ಗೌಡ ಪಾಟೀಲ್.ಮುಂಡರಗಿ – ಗದಗ

ಉದಯರಶ್ಮಿ ದಿನಪತ್ರಿಕೆ

ಕೇವಲ ಪಾಠಗಳನ್ನು ಓದುವ ಕಲಿಯುವ ಅಂಕಗಳನ್ನು ಪಡೆಯುವ ಮೂಲಕ ಮಕ್ಕಳು ಶಾಲೆಯ ವಿದ್ಯಾಭ್ಯಾಸವನ್ನು ಪೂರೈಸಬಹುದು, ಆದರೆ ಬದುಕಿನ ಅಭ್ಯಾಸಕ್ಕೆ ಶಾಲೆಯ ಪಾಠ ಪ್ರವಚನಗಳ ಜೊತೆ ಪಠ್ಯೇತರವಾದ ಪ್ರಾಪಂಚಿಕ ವಿಷಯಗಳು ಕೂಡ ಅವಶ್ಯಕ.
ಕೆಲ ವರ್ಷಗಳ ಹಿಂದೆ ಫಸ್ಟ್ ರಾಂಕ್ ರಾಜು ಎಂಬ ಕನ್ನಡ ಚಲನಚಿತ್ರ ಎಲ್ಲೆಡೆ ಬಹಳಷ್ಟು ಸುದ್ದಿ ಮಾಡಿತ್ತು. ಈ ಚಿತ್ರದ ನಾಯಕ ತನ್ನ ತಂದೆ ತಾಯಿಯ ಒತ್ತಾಸೆಯ ಮೇರೆಗೆ ಕೇವಲ ಪಠ್ಯ ಚಟುವಟಿಕೆಯಲ್ಲಿ ಫಸ್ಟ್ ರಾಂಕ್ ಪಡೆಯುತ್ತಿರುತ್ತಾನೆಯೇ ಹೊರತು ಆತನಲ್ಲಿ ಎಳ್ಳಷ್ಟು ವ್ಯವಹಾರಿಕ ಸಾಮಾಜಿಕ ಜ್ಞಾನ ಇರುವುದಿಲ್ಲ. ಇದು ಪರಿಸ್ಥಿತಿಯ ವಿಡಂಬನೆಯನ್ನು ತೋರುತ್ತದೆ. ಸಂಘ ಜೀವಿ ಸಾಮಾಜಿಕ ಜೀವಿಯಾಗಿರುವ ಮನುಷ್ಯ ಪ್ರಾಪಂಚಿಕ ಜ್ಞಾನವನ್ನು ಹೊಂದಿರಲೇಬೇಕು. ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕ ಎಂಬ ಅರಿವನ್ನು ಪಾಲಕರು ಹೊಂದಿರಲೇಬೇಕು.
ಸಾಮಾನ್ಯವಾಗಿ ಮಕ್ಕಳಲ್ಲಿ ಎರಡು ವಿಧ. ಕೆಲವರು ಏಕ ಪಠ್ಯಗ್ರಾಹಿಗಳಾಗಿದ್ದು ಕಲಿಯುವ ಯಾವುದೇ ವಿಷಯವನ್ನು ಒಂದು ಬಾರಿ ಅವರಿಗೆ ಹೇಳಿದರೆ ಸಾಕು ತಕ್ಷಣವೇ ಗ್ರಹಿಸುವ ಅವರು ತಮ್ಮ ತರಗತಿಯ ಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದಿರುತ್ತಾರೆ, ಆದರೆ ಅದೇ ಮಕ್ಕಳು ಇತರ ವಿಷಯಗಳನ್ನು ಅಷ್ಟೇನೂ ಮುಖ್ಯ ಅಲ್ಲ ಎಂದು ಪರಿಭಾವಿಸಿ ಅವುಗಳಿಂದ ವಿಮುಖರಾಗುತ್ತಾರೆ. ಒಂದು ಬಲ್ಬನ್ನು ಹೋಲ್ಡರಿಗೆ ಹಾಕುವ, ಒಂದು ನಲ್ಲಿಯನ್ನು ಸರಿಯಾಗಿ ತಿರುಗಿಸಿ ನೀರು ಸೋರದಂತೆ ರಿಪೇರಿ ಮಾಡುವಷ್ಟು ಕ್ಷಮತೆ ಕೂಡ ಅವರಲ್ಲಿ ಇರುವುದಿಲ್ಲ.
ಮತ್ತೆ ಕೆಲವು ಮಕ್ಕಳು ಮನೆಯ ಎಲ್ಲಾ ಕೆಲಸಗಳನ್ನು ತಾವೇ ಹೊತ್ತು ಮಾಡುತ್ತಾರೆ, ತರಕಾರಿ ತರುವುದರಿಂದ ಹಿಡಿದು ತೊಳೆದು, ಹೆಚ್ಚಿ, ಅಡುಗೆ ಮಾಡಲು, ತಾಯಿಗೆ ಸಹಾಯ ಮಾಡುವ, ತಂದೆಯ ಬ್ಯಾಂಕ್ ಮತ್ತು ಪೋಸ್ಟ್ ಆಫೀಸಿನ ಕೆಲಸಗಳನ್ನು ತಾವೇ ನಿರ್ವಹಿಸುವ, ವಿವಿಧ ಕಚೇರಿಗಳಿಗೆ ಓಡಾಡಿ ಬಿಲ್ ಗಳನ್ನು ತುಂಬುವ, ತಕರಾರು ಅರ್ಜಿ ನೀಡುವ, ಹತ್ತು ಹಲವು ಕೆಲಸಗಳು ಅವರಿಗೆ ಕರಗತವಾಗಿರುತ್ತವೆ.. ಆದರೆ ಓದಿನಲ್ಲಿ ಹಿಂದೆ ಬಿದ್ದಿರುತ್ತಾರೆ.. ಇದಕ್ಕೆ ಕಾರಣ ಹಲವಾರು ಇರಬಹುದು.
ಮಕ್ಕಳ ಶೈಕ್ಷಣಿಕ ಚಟುವಟಿಕೆ ಆರಂಭವಾದಾಗಲೇ ಅವರ ಪಠ್ಯೇತರ ಚಟುವಟಿಕೆಗಳಿಗೂ ನಾವು ಉತ್ತೇಜನ ನೀಡಬೇಕು. ಮಕ್ಕಳು ಶಾಲೆಗೆ ಹೋಗಿ ಬಂದ ನಂತರ ತಮ್ಮ ಪಠ್ಯಪುಸ್ತಕಗಳನ್ನು, ಶಾಲೆಯ ಬ್ಯಾಗು, ಊಟದ ಡಬ್ಬಗಳನ್ನು ಆಯಾ ಸ್ಥಳಕ್ಕೆ ಎತ್ತಿ ಇಡುವುದರ ಮೂಲಕ ಶಾಲೆಗೆ ಒಯ್ದ ಸಾಮಾನುಗಳನ್ನು ಸರಿಯಾಗಿ ಮನೆಗೆ ತರುವ ಮೂಲಕ, ಶಾಲೆಯಲ್ಲಿ ಹೇಳಿಕೊಟ್ಟ ಪಾಠವನ್ನು ಮನೆಯಲ್ಲಿ ಪಾಲಕರಿಗೆ ಬಂದು ಹೇಳಿ ಮನೆ ಪಾಠವನ್ನು ಬರೆಯುವ ಮೂಲಕ ಒಂದು ಜವಾಬ್ದಾರಿಯನ್ನು ನಿರ್ವಹಿಸಲು ಮಗುವಿಗೆ ಕಲಿಸಬೇಕು.
ಶಾಲೆಯಿಂದ ಬಂದ ನಂತರ ಆಟ ಪಾಠಗಳಿಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಲು, ಅಕ್ಕಪಕ್ಕದ ಮನೆಯವರ ಜೊತೆ ಮಾತನಾಡಲು ಮಕ್ಕಳು ಕಲಿಯಬೇಕು. ಮನೆಗೆ ಬಂದವರಿಗೆ ಕೂರಿಸಿ ನೀರು ಕೊಡುವ, ಅಂಗಡಿಯಿಂದ ಏನನ್ನಾದರೂ ತರುವ ತಾಯಿ ತಂದೆ ಮತ್ತು ಒಡಹುಟ್ಟಿದವರಿಗೆ ಬೇಕಾದ ಚಿಕ್ಕ ಪುಟ್ಟ ವಸ್ತುಗಳನ್ನು ಒದಗಿಸುವ, ಮನೆಯ ಚಿಕ್ಕ ಪುಟ್ಟ ಕೆಲಸಗಳನ್ನು ನಿರ್ವಹಿಸುವುದನ್ನು ಖಂಡಿತವಾಗಿಯೂ ಮಕ್ಕಳಲ್ಲಿ ರೂಢಿಸಬೇಕು.
ಇನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಮನೆಯಲ್ಲಿ ರೂಢಿಸುವುದು ಹೇಗೆ ಎಂದು ಯೋಚಿಸಿದರೆ ಶಾಲೆಯಲ್ಲಿ ಏ ಫಾರ್ ಆಪಲ್, ಬಿ ಫಾರ್ ಬಾಲ್, ಸಿ ಫಾರ್ ಕ್ಯಾಟ್ ಎಂದು ಮಾತ್ರ ಹೇಳಿಕೊಟ್ಟಿರುತ್ತಾರೆ. ಇದಕ್ಕೆ ಪರ್ಯಾಯವಾಗಿ ಮಕ್ಕಳಿಗೆ ಮನೆಯಲ್ಲಿ ಆಯಾ ಅಕ್ಷರಗಳಿಗೆ ದೊರೆಯುವ ಇತರ ಪದಗಳನ್ನು ಪರಿಚಯಿಸಬೇಕು. ಡಬ್ಲ್ಯೂ ಫಾರ್ ವಾಚ್ ಮಾತ್ರ ಅಲ್ಲ ವಾಲ್ ಕೂಡ ಆಗಬಹುದು, ಕೆ ಫ಼ಾರ್ ಕಿಂಗ್ ಮಾತ್ರವಲ್ಲ ನೈಫ್ ಕೂಡ ಆಗಬಹುದು. ಎಲ್ ಫಾರ್ ಲೈಟ್ ಹೀಗೆ ಮನೆಯಲ್ಲಿ ಇರುವ 10 ಹಲವು ವಸ್ತುಗಳನ್ನು ಅವರಿಗೆ ಆಯಾ ಅಕ್ಷರಗಳ ಮೂಲಕ ಪರಿಚಯಿಸಬೇಕು. ಇದು ಅವರ ಪಠ್ಯೇತರ ಚಟುವಟಿಕೆಯಾಗುತ್ತದೆ. ಆಟವು ಪಾಠವಾಗಿ ತೋರಿ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಲು ಕಾರಣವಾಗುತ್ತದೆ.


ಇದು ಭಾಷಾ ಚಟುವಟಿಕೆಯಾದರೆ ಶಾಲೆಯಲ್ಲಿ ಮಕ್ಕಳಿಗೆ ಸಂಖ್ಯೆಗಳನ್ನು ಕಲಿಸಿದಾಗ 123 ಹೀಗೆ ಆಯಾ ಸಂಖ್ಯೆಗಳ ಪ್ರಮಾಣದ ವಸ್ತುಗಳನ್ನು ಗುರುತಿಸುವ, ಹೇಳುವ ಚಟುವಟಿಕೆಯನ್ನು ಮಕ್ಕಳಿಂದ ಮಾಡಿಸಬಹುದು. ತುಸು ದೊಡ್ಡವರಾಗುತ್ತಾ ಕೂಡಿಸುವ, ಕಳೆಯುವ ಲೆಕ್ಕಗಳನ್ನು ಕಲಿತಾಗ ನಮ್ಮ ಎರಡು ಕೈಗಳ ಬೆರಳುಗಳು ಮತ್ತು ಕಾಲು ಬೆರಳುಗಳನ್ನು ಬಳಸಿ ಕೂಡಿಸುವ ಮತ್ತು ಕಲೆಯುವ ಬಾಯಿ ಲೆಕ್ಕಗಳನ್ನು ಮಾಡುವ ಮೂಲಕ ಗೋಲಿಗಳನ್ನು ಕೈಯಲ್ಲಿ ಮುಚ್ಚಿ ಹಿಡಿದು ಸರಿ ಬೆಸ ಆಡುವ ಮೂಲಕ ಮಕ್ಕಳಿಗೆ ಲೆಕ್ಕಗಳನ್ನು ಕಲಿಸಬಹುದು.
ಮಕ್ಕಳಿಗೆ ನಿನ್ನ ಬಳಿ ಎಂಟು ಹಣ್ಣುಗಳಿವೆ ಅದರಲ್ಲಿ ಎರಡು ಹಣ್ಣುಗಳನ್ನು ನೀನು ತಿಂದರೆ ನಿನ್ನ ಬಳಿ ಎಷ್ಟು ಹಣ್ಣುಗಳು ಉಳಿಯುತ್ತವೆ ಎಂದು ಕೇಳಿ ಮಕ್ಕಳಿಗೆ 8 ಹಣ್ಣುಗಳನ್ನು ಕೈಯಲ್ಲಿ ಲೆಕ್ಕ ಮಾಡಿ ಹಿಡಿಸಿ ಅದರಲ್ಲಿ ಎರಡು ಬೆರಳುಗಳನ್ನು ಮಡಿಸಿ ಕಳೆದು ಎತ್ತಿದ ಆರು ಬೆರಳುಗಳನ್ನು ತೋರಿ ಎಣಿಸಿ ಆರು ಎಂದು ಹೇಳಿ ಕಳೆಯುವ ಕೂಡುವ ಲೆಕ್ಕಗಳನ್ನು ಮಾಡುವುದನ್ನು ಕಲಿಸಬೇಕು.
ಮುಂದೆ ಮಕ್ಕಳು ಸಮಾಜ ವಿಜ್ಞಾನ ಪಾಠವನ್ನು ಕಲಿಯುವಾಗ ನಮ್ಮ ಸಾಮಾಜಿಕ ನೀತಿ ನಿಯಮಗಳನ್ನು ಭೂಮಿಯ ಮೇಲೆ ಇರುವ ವಿವಿಧ ಖಂಡಗಳನ್ನು, ದೇಶಗಳನ್ನು ಗುರುತಿಸುವ ಆಯಾ ದೇಶದ ಭಾಷೆ, ಸಂಸ್ಕೃತಿ, ಜೀವನ ಶೈಲಿ,ಉದ್ಯೋಗ, ವ್ಯಾಪಾರ ವ್ಯವಹಾರ ವಾಣಿಜ್ಯಾತ್ಮಕ ವಿಷಯಗಳ ಕುರಿತು ಅರಿವು ಮೂಡುತ್ತದೆ. ಸಂವಿಧಾನ ಸಂರಚನೆ, ಗ್ರಾಮ, ತಾಲೂಕು, ಜಿಲ್ಲೆ, ವಿಭಾಗಗಳ, ರಾಜ್ಯ, ದೇಶದ ಪರಿಕಲ್ಪನೆ ಚುನಾವಣೆ ಪ್ರಕ್ರಿಯೆಗಳು ಮುಂತಾದ ಪೌರನೀತಿಯ ವಿಷಯಗಳ ಅರಿವು ಮೂಡುತ್ತದೆ. ಹಾಗೆಯೇ ಈ ಹಿಂದೆ ನಮ್ಮನ್ನು ಆಳಿದ ವಂಶಗಳ ರಾಜ ಮಹಾರಾಜರುಗಳ, ಚಕ್ರವರ್ತಿಗಳು ಅವರು ಮಾಡಿದ ಕಾರ್ಯಗಳು ಯುದ್ಧಗಳು ಶಿಲಾ ಶಾಸನಗಳು ಕೃತಿಗಳ ಇತಿಹಾಸಕಾರರ ಪರಿಚಯವಾಗುತ್ತದೆ.
ನಾವು ಸಾಮಾನ್ಯವಾಗಿ ನೋಡುವ ಎಲೆಗೆ ಆ ಬಣ್ಣ ಬರಲು ಕಾರಣ ಪತ್ರಹರಿತ್ತು ಎಂಬ ವಸ್ತು ಎಂಬುದನ್ನು ವಿಜ್ಞಾನದಲ್ಲಿ ಕಲಿಯುತ್ತಾರೆ. ವಸ್ತುಗಳ ಸ್ಥಿತಿಗಳು, ವೈಜ್ಞಾನಿಕ ಮಹತ್ವಗಳು ಹೀಗೆ ಹತ್ತು ಹಲವು ವಿಷಯಗಳನ್ನು ಮಕ್ಕಳು ವಿಜ್ಞಾನದಲ್ಲಿ ಕಲಿಯುತ್ತಾರೆ.
ಹೀಗೆ ಹಂತ ಹಂತವಾಗಿ ಮಕ್ಕಳು ಕಲಿಯುವ ಪಠ್ಯ ಚಟುವಟಿಕೆಗಳಿಗೆ ಸಮಾನಾಂತರವಾಗಿ ಆ ವಿಷಯಗಳಿಗೆ ಸಂಬಂಧಪಟ್ಟ ಪಠ್ಯೇತರ ಚಟುವಟಿಕೆಗಳನ್ನು ಕಲಿಸಬೇಕು. ಹೀಗೆ ಮಕ್ಕಳು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಇರುವಾಗ ಮಕ್ಕಳಿಗೆ ಕಡ್ಡಾಯವಾಗಿ ವೈವಿದ್ಯಮಯ ಚಟುವಟಿಕೆಗಳನ್ನು ರೂಢಿಸಬೇಕು.
ಹೀಗೆ ರೂಢಿಸಿದ ಮಕ್ಕಳು ಮುಂದೆ ಪಿಯುಸಿ ಮತ್ತು ಪದವಿ ತರಗತಿಗಳಿಗೆ ಓದುವಾಗ ತಮ್ಮದೇ ಆದ ರೀತಿಯಲ್ಲಿ ತಮ್ಮ ಆಸಕ್ತಿಯ ವಿಷಯಗಳಲ್ಲಿ ಚಟುವಟಿಕೆಗಳನ್ನು ಆಯ್ದುಕೊಂಡು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಾರೆ.
ಶಾಲೆಯಲ್ಲಿ ಮಕ್ಕಳು ಕಲಿತ ಪಾಠಗಳನ್ನು ಅರಿತುಕೊಂಡಾಗ ಅವರ ಪ್ರತಿಕ್ರಿಯೆ ಸಂತೋಷ ಮತ್ತು ಮುಂದೇನು ಎಂಬ ಕುತೂಹಲವನ್ನು ಹೊಂದಿರುತ್ತದೆ.
ಸಾಮಾನ್ಯವಾಗಿ ಪುಸ್ತಕಗಳನ್ನು, ಕಾದಂಬರಿಗಳನ್ನು ಓದುವ, ಧಾರಾವಾಹಿಗಳನ್ನು ನೋಡುವ ಜನರು ಯಾವ ರೀತಿ ಮುಂದೇನಾಗುತ್ತದೆ ಎಂದು ವಿಷಯದೆಡೆಗೆ ಆಸಕ್ತಿ ವಹಿಸುತ್ತಾರೆಯೋ ಅಂತೆಯೇ ಪಠ್ಯದ ವಿಷಯಗಳು ಅರ್ಥವಾದ ಮಕ್ಕಳು ಕುತೂಹಲವನ್ನು ತೋರುತ್ತಾರೆ.


ಈ ರೀತಿ ವಿಷಯಗಳನ್ನು ನೈಸರ್ಗಿಕವಾಗಿ, ಪ್ರಾಯೋಗಿಕವಾಗಿ ಮಕ್ಕಳು ಕಲಿತಾಗ ಅವರಲ್ಲಿ ಸಹಜವಾಗಿಯೇ ಮೂಡುವ ಆಸಕ್ತಿ ನಾನೂ ಕೂಡ ಏನನ್ನಾದರೂ ಮಾಡಬಲ್ಲೆ ಎಂಬ ಧೈರ್ಯವನ್ನು ಆತ್ಮ ವಿಶ್ವಾಸವನ್ನು ನೀಡುತ್ತದೆ. ಶೈಕ್ಷಣಿಕ ಬದಲಾವಣೆ ಮೂಡುತ್ತದೆ.. ಆದ್ದರಿಂದ ಪಾಲಕರು ಮಕ್ಕಳಲ್ಲಿ ಕಲಿಕಾ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲೇಬೇಕು.
ಪಠ್ಯಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಸಮಗ್ರ ಬದಲಾವಣೆಯನ್ನು ತರಬಹುದು. ಆಸಕ್ತಿ ಇಲ್ಲದ ಮಕ್ಕಳು ಕೂಡ ಈ ರೀತಿಯ ಕಲಿಕೆಯಲ್ಲಿ ಕೆಲವೇ ತಿಂಗಳುಗಳಲ್ಲಿ ಉತ್ತಮ ಕಲಿಕಾ ಸಾಮರ್ಥ್ಯವನ್ನು ಗಳಿಸಿಕೊಂಡು ಮುನ್ನಡೆಯುಬಹುದು. ವೈವಿಧ್ಯಮಯ ಕಲಿಕೆಗೆ ತಮ್ಮನ್ನು ತಾವು ಒಡ್ಡಿಕೊಂಡು ಬದುಕಿನಲ್ಲಿ ಮುಂದೆ ಬರುತ್ತಾರೆ ಆದ್ದರಿಂದ ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಮಗುವಿನ ಭದ್ರ ಭವಿಷ್ಯಕ್ಕೆ ಬುನಾದಿಯಾಗಿರುವ ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕವಾಗಿ ಇರಲೇಬೇಕು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ

ಡಾ.ರವಿ ಗೋಲಾ & ಡಾ.ಸಂದೀಪ ಪಾಟೀಲಗೆ ಪ್ರಶಸ್ತಿ

ರಾಜಾಜಿ ನಗರದ ಗಜಾನನ ಮಂಡಳಿಯಲ್ಲಿ ದಾಸವಾಣಿ

ಕ್ರೀಡಾಕೂಟದಲ್ಲಿ ತುಂಗಳ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು
    In ವಿಶೇಷ ಲೇಖನ
  • 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ
    In (ರಾಜ್ಯ ) ಜಿಲ್ಲೆ
  • ಡಾ.ರವಿ ಗೋಲಾ & ಡಾ.ಸಂದೀಪ ಪಾಟೀಲಗೆ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ರಾಜಾಜಿ ನಗರದ ಗಜಾನನ ಮಂಡಳಿಯಲ್ಲಿ ದಾಸವಾಣಿ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟದಲ್ಲಿ ತುಂಗಳ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಚಿತ್ರಕಲೆಯು ಕನ್ನಡನಾಡಿನ ಸಾಂಸ್ಕೃತಿಕ ಅಸ್ಮಿತೆ :ವಿದ್ಯಾಶ್ರೀ
    In (ರಾಜ್ಯ ) ಜಿಲ್ಲೆ
  • ಯುಪಿಐ ವಹಿವಾಟಿನ ಮೇಲಿನ ತೆರಿಗೆಗೆ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 16,2026
    In ದಿನಪತ್ರಿಕೆ
  • ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.