ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜಾಜಿ ನಗರ ಶ್ರೀ ಗಜಾನನ ತರುಣ ಮಂಡಳಿಯಿಂದ ಆಂಜನೇಯ ದೇವಸ್ಥಾನದಲ್ಲಿ ರಾತ್ರಿ ಸುಮಾರು ಹೊತ್ತಿನವರೆಗೆ ಶ್ರೀಮತಿ ಹರಿಣಿ ಸಂದೀಪ ಅರ್ಜುಣಗಿ ಅವರಿಂದ ದಾಸವಾಣಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಜರುಗಿತು.
ಈ ದಾಸವಾಣಿ ಕಾರ್ಯಕ್ರಮಕ್ಕೆ ಹಾರ್ಮೋನಿಯಂ ಬಿ.ಎಂ.ಪತ್ತಾರ, ತಬಲಾ ಸಾಥ ಜಗನ್ನಾಥ ಅಳ್ಳಗಿ ಹಾಗೂ ಶ್ರೀನಾಥ ಪತ್ತಾರ ತಾಳ ವಾದ್ಯ ಮಾಡಿದ್ದು ಒಂದು ವಿಶೇಷವಾಗಿತ್ತು.
ಇದಕ್ಕೂ ಪೂರ್ವದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಚಂದ್ರು ಚೌದರಿ, ಮಲ್ಲು ತೊರವಿ ಹಾಗೂ ಪ್ರಸನ್ನ ಜಾಬನ್ನವರ ಅವರನ್ನು ಗಜಾನನ ತರುಣ ಮಂಡಳಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುರಾಜ ಪೂಜಾರಿ, ಗುರುರಾಜ ಹಜೇರಿ, ಶರಣು ಮಾದನಶೆಟ್ಟಿ, ಗೋಪಾಲ ಹೊರ್ತಿ, ವೇಣು ಜೋಶಿ, ಮಂಜುನಾಥ ಮಲ್ಲಾಡಿ, ಶ್ರೀನಾಥ ಪತ್ತಾರ, ಉಮೇಶ ತೇಲಿ, ಮಹಾದೇವ ಕೋಲಕಾರ, ಸುಭಾಷ ಕನ್ನೂರ, ಮಂಜು ಬಿರಾದಾರ, ಸಿದ್ದು ಚವ್ಹಾಣ, ಸಂತೋಷ ಕುಲಕರ್ಣಿ ಹಾಗೂ ಬಡಾವಣೆಯ ಗಣ್ಯರು ಭಾವಹಿಸಿದ್ದರು.

