Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ

ಡಾ.ರವಿ ಗೋಲಾ & ಡಾ.ಸಂದೀಪ ಪಾಟೀಲಗೆ ಪ್ರಶಸ್ತಿ

ರಾಜಾಜಿ ನಗರದ ಗಜಾನನ ಮಂಡಳಿಯಲ್ಲಿ ದಾಸವಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಯುಪಿಐ ವಹಿವಾಟಿನ ಮೇಲಿನ ತೆರಿಗೆಗೆ ಆಕ್ರೋಶ
(ರಾಜ್ಯ ) ಜಿಲ್ಲೆ

ಯುಪಿಐ ವಹಿವಾಟಿನ ಮೇಲಿನ ತೆರಿಗೆಗೆ ಆಕ್ರೋಶ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಮುಖಂಡ ಮಂಜುನಾಥ ಸುಣಗಾರ

ಉದಯರಶ್ಮಿ ದಿನಪತ್ರಿಕೆ

ಬೆಂಗಳೂರು: ಯುಪಿಐ (UPI) ಡಿಜಿಟಲ್ ಪಾವತಿ ವಹಿವಾಟುಗಳ ಮೇಲೆ ತೆರಿಗೆ ಮತ್ತು ವಹಿವಾಟು ಶುಲ್ಕ ವಿಧಿಸಲು ಹೊರಟಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮಂಜುನಾಥ ಸುಣಗಾರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ಬೀದಿ ಬದಿ ವ್ಯಾಪಾರಿಗಳು, ಮೀನುಗಾರರು ಹಾಗೂ ಅಸಂಘಟಿತ ವಲಯದ ಶ್ರಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕ್ರಮ ಬೀದಿ ಬದಿ ವ್ಯಾಪಾರಿಗಳು ಮತ್ತು ಮೀನುಗಾರರಿಗೆ ಕುತ್ತು ತರಲಿದೆ. ತರಕಾರಿ ಮಾರಾಟಗಾರರು, ಸಣ್ಣ ಅಂಗಡಿದಾರರು, ಬೀದಿ ಬದಿ ಶ್ರಮಿಕರು ಮತ್ತು ಮೀನುಗಾರರು ದಿನನಿತ್ಯದ ನಗದು ರಹಿತ ಸಣ್ಣ ವಹಿವಾಟುಗಳಿಗೆ UPI ಪಾವತಿಯನ್ನೇ ನೆಚ್ಚಿಕೊಂಡಿದ್ದಾರೆ. ಈಗ ಇಂತಹ ಸಣ್ಣ ವಹಿವಾಟುಗಳ ಮೇಲೆಯೂ ತೆರಿಗೆ ಮತ್ತು ಸೇವಾ ಶುಲ್ಕದ ಹೊರೆ ಹೊರಿಸಿದರೆ ಅವರ ಹೊಟ್ಟೆಮೇಲೆ ಹೊಡೆದಂತಾಗುತ್ತದೆ ಎಂದಿದ್ದಾರೆ.
ದಿನಗೂಲಿ ನೌಕರರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸಣ್ಣ ಪ್ರಮಾಣದ ಆದಾಯದ ಮೇಲೆಯೂ ತೆರಿಗೆಯ ಕಣ್ಣು ಬಿದ್ದಿರುವುದು ಖಂಡನೀಯ. ಡಿಜಿಟಲ್ ಕ್ರಾಂತಿಯ ಹೆಸರಿನಲ್ಲಿ ಶ್ರಮಿಕರ ಶ್ರಮದ ಹಣವನ್ನು ಕಸಿಯಲು ಸರ್ಕಾರ ಹೊರಟಿದೆ ಎಂದಿದ್ದಾರೆ.
ದೇಶವನ್ನು “ಡಿಜಿಟಲ್ ಇಂಡಿಯಾ” ಮಾಡುತ್ತೇವೆ ಎಂದು ಹೇಳಿ, ಸಾರ್ವಜನಿಕರನ್ನು ನಗದು ರಹಿತ ಪಾವತಿಗೆ ಅಭ್ಯಾಸ ಮಾಡಿಸಿ, ಈಗ ಏಕಾಏಕಿ ತೆರಿಗೆ ಹಾಗೂ GST ವಿಧಿಸುತ್ತಿರುವುದು ಸಾರ್ವಜನಿಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಎಸಗುತ್ತಿರುವ ಮೋಸ. ಸರ್ಕಾರ ತಕ್ಷಣವೇ ಈ ತೆರಿಗೆ ಮತ್ತು ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಸಣ್ಣ ವ್ಯಾಪಾರಿಗಳು, ಮೀನುಗಾರರು ಮತ್ತು ಅಸಂಘಟಿತ ವಲಯದ ಶ್ರಮಿಕರ ಹಿತವನ್ನು ಕಾಯದಿದ್ದರೆ ದೇಶಾದ್ಯಂತ ಬೀದಿಗಿಳಿದು ತೀವ್ರ ಹೋರಾಟ ನಡೆಸಲಾಗುವುದು,” ಎಂದು ಮಂಜುನಾಥ ಸುಣಗಾರ ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ

ಡಾ.ರವಿ ಗೋಲಾ & ಡಾ.ಸಂದೀಪ ಪಾಟೀಲಗೆ ಪ್ರಶಸ್ತಿ

ರಾಜಾಜಿ ನಗರದ ಗಜಾನನ ಮಂಡಳಿಯಲ್ಲಿ ದಾಸವಾಣಿ

ಕ್ರೀಡಾಕೂಟದಲ್ಲಿ ತುಂಗಳ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ
    In (ರಾಜ್ಯ ) ಜಿಲ್ಲೆ
  • ಡಾ.ರವಿ ಗೋಲಾ & ಡಾ.ಸಂದೀಪ ಪಾಟೀಲಗೆ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ರಾಜಾಜಿ ನಗರದ ಗಜಾನನ ಮಂಡಳಿಯಲ್ಲಿ ದಾಸವಾಣಿ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟದಲ್ಲಿ ತುಂಗಳ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಚಿತ್ರಕಲೆಯು ಕನ್ನಡನಾಡಿನ ಸಾಂಸ್ಕೃತಿಕ ಅಸ್ಮಿತೆ :ವಿದ್ಯಾಶ್ರೀ
    In (ರಾಜ್ಯ ) ಜಿಲ್ಲೆ
  • ಯುಪಿಐ ವಹಿವಾಟಿನ ಮೇಲಿನ ತೆರಿಗೆಗೆ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 16,2026
    In ದಿನಪತ್ರಿಕೆ
  • ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.