ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕ್ರೀಡಾ ಸಲಹಾ ಸಮಿತಿಯ ಸದಸ್ಯ ಡಾ.ರವಿ ಗೋಲಾ ಹಾಗೂ ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನ ಪೀಠದ ಒಡೆಯ ಡಾ.ಸಂದೀಪ ಜೆ.ಪಾಟೀಲಗೆ (ಕ್ರಮವಾಗಿ) ಆದರ್ಶ ದೈಹಿಕ ನಿರ್ದೇಶಕ ಮತ್ತು ವೈದ್ಯ ಸೇವಾರತ್ನ ದೊರೆತಿದೆ.
ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ಈ ಪ್ರಶಸ್ತಿ ಕೊಡಲಾಗುತ್ತಿದೆ. ಡಾ.ರವಿ ಗೋಲಾ ಕಳೆದ ಹಲವು ವರ್ಷಗಳಿಂದ ದೈಹಿಕ ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಹಾಗೂ ವೈದ್ಯಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆಲಮೇಲದ ಖ್ಯಾತ ವೈದ್ಯ ಡಾ.ಸಂದೀಪ ಪಾಟೀಲ ಇವರ ಸೇವೆಯನ್ನು ಪರಿಗಣಿಸಿ, ಇದೇ ಸೆಪ್ಟೆಂಬರ್ 21ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ಮಂದಿರದಲ್ಲಿ ಮಧ್ಯಾಹ 3:00 ಗಂಟೆಗೆ ನಡೆಯಲಿರುವ ಅಪ್ಪ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಸಮಾರಂಭದಲ್ಲಿ ಗಣ್ಯಾತೀಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ನಬಿರೋಶನ್ ಪ್ರಕಾಶನದ ಮೌಲಾಲಿ ಆಲಗೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

