15ರ ಸಂಭ್ರಮದಲ್ಲಿ ಜಮಖಂಡಿ ತಾಲೂಕು ಛಾಯಾಗ್ರಾಹಕರ ಸಂಘ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘದ 15ನೇ ವಾರ್ಷಿಕೋತ್ಸವ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭ ಸೆ.13ರಂದು ಬೆಳಿಗ್ಗೆ 10ಕ್ಕೆ ನಗರದ ಬಸ್ ನಿಲ್ದಾಣ ರಸ್ತೆಯ ಬಸವ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹಾಸಿಮ್ ಅ. ಜಮಖಂಡಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಛಾಯಾಚಿತ್ರ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಹಾಗೂ ಛಾಯಾಗ್ರಹಣ ಕ್ಷೇತ್ರಕ್ಕೆ ಅಗತ್ಯವಿರುವ ವಿವಿಧ ಉಪಕರಣಗಳು ಮತ್ತು ಸೇವೆಗಳ ವಿಶೇಷ ಮಳಿಗೆಗಳನ್ನು ಆಯೋಜಿಸಲಾಗಿದೆ.
ಶ್ರೀ ರಾಚೋಟೇಶ್ವರ ವಿರಕ್ತಮಠ, ಮುತ್ತೂರಿನ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಸಮಾರಂಭ ಉದ್ಘಾಟಿಸಲಿದ್ದಾರೆ. ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ ಹೆಚ್.ಎಸ್. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಅಧ್ಯಕ್ಷರಾಗಿ ಅಶೋಕ ಜೋಶಿ, ಉಪಾಧ್ಯಕ್ಷರಾಗಿ ಮುಜಾಹಿದ್ ಉ. ದಿಲಾವರ, ಕಾರ್ಯದರ್ಶಿಯಾಗಿ ಈರನಗೌಡ ರಾ. ಪಾಟೀಲ ಹಾಗೂ ಖಜಾಂಚಿಯಾಗಿ ಮಲ್ಲಪ್ಪ ಬಿ. ಸಿದ್ದನವರ ಅಧಿಕಾರ ಸ್ವೀಕರಿಸಲಿದ್ದಾರೆ. ತೊದಲಬಾಗಿ ವಲಯದ ಅಧ್ಯಕ್ಷರಾಗಿ ಲಕ್ಷ್ಮಣ ಪವಾರ, ಸಾವಳಗಿ ವಲಯಕ್ಕೆ ಗುರುಶಾಂತ್ ಪಾಟೀಲ್, ಕೊಣ್ಣೂರ ವಲಯಕ್ಕೆ ತನವಪ್ಪ ಕವಟಗೊಪ್ಪ ಹಾಗೂ ಹಿಪ್ಪರಗಿ ವಲಯಕ್ಕೆ ರಮೇಶ ಗಲಗಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಛಾಯಾಗ್ರಹಣ ಕ್ಷೇತ್ರದವರು, ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

